ಯುವ ಪತ್ರಕರ್ತೆ ಹರ್ಷಿಣಿ ಬ್ರಹ್ಮಾವರ ಅವರಿಗೆ ಬೀಳ್ಕೊಡುಗೆ

Spread the love

ಯುವ ಪತ್ರಕರ್ತೆ ಹರ್ಷಿಣಿ ಬ್ರಹ್ಮಾವರ ಅವರಿಗೆ ಬೀಳ್ಕೊಡುಗೆ

ಉಡುಪಿ: ಕಳೆದ ಎಂಟು ವರ್ಷಗಳ ಕಾಲ ಉಡುಪಿಯಲ್ಲಿ ವೆಬ್ ಸಂಸ್ಥೆಯ ವರದಿಗಾರ್ತಿಯಾಗಿ ಕೆಲಸ ಮಾಡಿಕೊಂಡಿದ್ದ ಹರ್ಷಿಣಿ ಬ್ರಹ್ಮಾವರ ಅವರಿಗೆ ಬೀಳ್ಕೊಡುಗೆ ಸಮಾರಂಭ ಉಡುಪಿಯ ಬ್ರಹ್ಮಗಿರಿ ಪತ್ರಿಕಾ ಭವನದಲ್ಲಿ ಶನಿವಾರ ಆಯೋಜಿಸಲಾಗಿತ್ತು

ಉಡುಪಿ ಜಿಲ್ಲಾ ಕಾರ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಅಧ್ಯಕ್ಷತೆಯಲ್ಲಿ ಹಿರಿಯ ಪತ್ರಕರ್ತ ಬಿ.ಬಿ. ಶೆಟ್ಟಿಗಾರ್ ಹರ್ಷಿಣಿ ಬ್ರಹ್ಮಾವರ ಅವರರನ್ನು ಸನ್ಮಾನಿಸಿ ಶುಭ ಹಾರೈಸಿದರು.

ಪದವಿಯ ನಂತರ ಉಡುಪಿಯ ಜಿ.ಶಂಕರ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ ಹರ್ಷಿಣಿ ಬ್ರಹ್ಮಾವರ, ಮಾಧ್ಯಮ ಕ್ಷೇತ್ರದ ಮೇಲಿನ ಅತೀವ ಆಸಕ್ತಿಯಿಂದ ವರದಿಗಾರ್ತಿಯಾದರು. ಎಂಟು ವರ್ಷಗಳ ಕಾಲ ವೆಬ್ ಮಾಧ್ಯಮದಲ್ಲಿ ಸೇವೆಸಲ್ಲಿಸುತ್ತಿದ್ದರು. ಮುಂದೆ ಇವರು ಬೆಂಗ್ಳೂರಿನಲ್ಲಿ ರೈಟ್ ಮ್ಯಾನ್ ಮೀಡಿಯಾ ಸಂಸ್ಥೆಯ ಪಬ್ಲಿಕ್ ಟಿವಿಯ ಡಿಜಿಟಲ್ ವಿಭಾಗದಲ್ಲಿ ತಮ್ಮ ವೃತ್ತಿ ಜೀವನವನ್ನು ಮುಂದುವರಿಸಲಿದ್ದಾರೆ.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಮತ್ತು ಸದಸ್ಯರು ಹಾಜರಿದ್ದರು. ಚೇತನ್ ಮಟಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


Spread the love