ಯುವ ಲೇಖಕ ಗ್ಲ್ಯಾನಿಶ್ ಜೂಡ್ ಮಾರ್ಟಿಸ್ ಅಲಂಗಾರು ಇವರಿಗೆ ದಿ. ಜೋಸೆಪ್, ಮೇರಿ ಪಿಂಟೊ ನಿಡ್ಡೋಡಿ ಸ್ಮಾರಕ ಪುರಸ್ಕಾರ

Spread the love

ಯುವ ಲೇಖಕ ಗ್ಲ್ಯಾನಿಶ್ ಜೂಡ್ ಮಾರ್ಟಿಸ್ ಅಲಂಗಾರು ಇವರಿಗೆ ದಿ. ಜೋಸೆಪ್, ಮೇರಿ ಪಿಂಟೊ ನಿಡ್ಡೋಡಿ ಸ್ಮಾರಕ ಪುರಸ್ಕಾರ

ಉಡುಪಿ: ಕೊಂಕಣಿಯಲ್ಲಿ ಬರೆಯುವ ಯುವ ಸಾಹಿತಿಗಳಿಗೆ, ಕಥೊಲಿಕ್ ಸಭಭಾ-ಉಡುಪಿ ಪ್ರದೇಶ-ಇವರ ಸಹಬಾಗಿತ್ವದಲ್ಲಿ ನೀಡುವ ದಿವಂಗತ ಜೋಸೆಪ್ ಆನಿ ಮೇರಿ ಪಿಂಟೊ ನಿಡ್ಡೋಡಿ ಸ್ಮಾರಕ ಸಾಹಿತ್ಯ ಪುರಸ್ಕಾರ-2022 ಕ್ಕೆ ಯುವ ಲೇಖಕ ಗ್ಲ್ಯಾನಿಶ್ ಜೂಡ್ ಮಾರ್ಟಿಸ್ ಅಲಂಗಾರು ಇವರನ್ನು ಆಯ್ಕೆ ಮಾಡಲಾಗಿದೆ.

ಕಳೆದ 7 ವರ್ಷಗಳಿಂದ ಕೊಂಕಣಿ ಪತ್ರಿಕೆಗಳಲ್ಲಿ ಹಾಗೂ ಅಂತರ್ ಜಾಲ ಮಾಧ್ಯಮದಲ್ಲಿ ಇವರ ಕಥೆಗಳು, ಕವನಗಳು ಲೇಖನಗಳು ಪ್ರಕಟಗೊಂಡಿವೆ. ಹಲವಾರು ಕಥೆ, ಕವನ ಹಾಗೂ ಲೇಖನ -ಸ್ಪರ್ದೆಗಳಲ್ಲಿ ಇವರು ಬಹುಮಾನ ಪಡೆದಿದ್ದಾರೆ.

2021ರಲ್ಲಿ ಬಿ.ಎಸ್ಸಿ ( ಬಯೋಟೆಕ್ನೋಜಿಯಲ್ಲಿ) ಮಂಗಳೂರು ವಿಶ್ವವಿದ್ಯಾನಿಲಯದಿಂದ ಚಿನ್ನದ ಪದಕವನ್ನು ಗಳಿಸಿ, ಪ್ರಸ್ತುತ, ಮೂಡಬಿದ್ರಿ ಅಳ್ವಾಸ್ ಕಾಲೇಜಿನಲ್ಲಿಎಂ.ಎಸ್ಸಿ ( ಬಯೋಟೆಕ್ನೋಜಿಯಲ್ಲಿ) ಶಿಕ್ಷಣವನ್ನು ಪಡೆಯುತಿದ್ದಾರೆ. ಪುರಸ್ಕಾರವನ್ನು ಡಿಸೆಂಬರ್ 4 ರಂದು ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಕಥೊಲಿಕ್ ಸಭಾ, ಕೊಂಕಣಿ ಲೇಖಕರ ಸಂಘ-ಕರ್ನಾಟಕ ಇವರು ಆಯೋಜಿಸಿದ, ಲೇಖಕರ ಸಮಾವೇಶದಲ್ಲಿ ನೀಡಲಾಗುವುದು ಎಂದು ಪುರಸ್ಕಾರ ಸಮಿತಿಯ ಸಂಯೋಜಕರಾದ ಡಾ. ಜೆರಾಲ್ಡ್ ಪಿಂಟೊ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Leave a Reply

Please enter your comment!
Please enter your name here