ಯುವ ಸರ್ಕಲ್ ಇನ್ಸ್ ಪೆಕ್ಟರ್ ಲಿಂಗರಾಜ್ ಹೃದಯಘಾತದಿಂದ ನಿಧನ

Spread the love

ಯುವ ಸರ್ಕಲ್ ಇನ್ಸ್ ಪೆಕ್ಟರ್ ಲಿಂಗರಾಜ್ ಹೃದಯಘಾತದಿಂದ ನಿಧನ

ಚಿತ್ರದುರ್ಗ: ರಾಜ್ಯದಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇರುವ ಕಳವಳಕಾರಿಯಾಗಿದೆ. ನಾರಾಯಣ ನೇತ್ರಾಲಯದ ಡಾ.ಭುಜಂಗ ಶೆಟ್ಟಿ, ನಟ ನಿರ್ದೇಶಕ ನಿತಿನ್ ಗೋಪಿ, ಬೆಳ್ತಂಗಡಿ ಮೂಲದ ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿ ಕೆಲವು ದಿನಗಳ ಹಿಂದಷ್ಟೇ ಹೃದಯಾಘಾತಕ್ಕೆ ಬಲಿಯಾದರೂ ಇದೀಗ ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಲಿಂಗರಾಜ್ (39) ಹೃದಯಾಘಾತದಿಂದ ನಿಧನರಾದ ಸಿಪಿಐ. ಚಿತ್ರದುರ್ಗ ಮೂಲದ ಲಿಂಗರಾಜ್, ಬೆಂಗಳೂರಿನಲ್ಲಿ ಸಿಪಿಐ ಆಗಿ ಸೇವೆ ಸಲ್ಲಿಸುತ್ತಿದ್ದರು.

ಈ ಹಿಂದೆ ಪಿಎಸ್ಐ ಆಗಿ ಚಿತ್ರದುರ್ಗದಲ್ಲಿ ಸೇವೆ ಸಲ್ಲಿಸಿದ್ದಾರೆ. ನಿನ್ನೆ ಬೆಂಗಳೂರಿಂದ ಚಿತ್ರದುರ್ಗ ನಗರಕ್ಕೆ ಆಗಮಿಸಿದ್ದರು. ಖಾಸಗಿ ಲಾಡ್ಜ್ (ನವೀನ್ ರೆಸಿಡೆನ್ಸಿ)ನಲ್ಲಿ ವಾಸ್ತವ್ಯ ಹೂಡಿದ್ದರು.

ಇಂದು (ಜೂ. 8) ಬೆಳಗ್ಗೆ ಎದೆನೋವು ಎಂದು ನಗರದ ಬಸವೇಶ್ವರ ಆಸ್ಪತ್ರೆಗೆ ತೆರಳುವ ವೇಳೆ ಮಾರ್ಗಮಧ್ಯೆಯೇ ಲಿಂಗರಾಜ್ ಮೃತಪಟ್ಟಿದ್ದಾರೆ.

ಲಿಂಗರಾಜ್ 2007ರ ಬ್ಯಾಚ್ನಲ್ಲಿ ಪೊಲೀಸ್ ಇಲಾಖೆ ಸೇರಿದ್ದರು. ಕಡೂರು, ಚಿತ್ರದುರ್ಗ, ಚಿಕ್ಕಮಗಳೂರು, ಉಡುಪಿ ಸೇರಿದಂತೆ ಅನೇಕ ಜಿಲ್ಲೆಯಲ್ಲಿ ಲಿಂಗರಾಜ್ ಸೇವೆ ಸಲ್ಲಿಸಿದ್ದಾರೆ


Spread the love