
ಯು.ಎ.ಇ. ಬಂಟರ 46ನೇ ವಾರ್ಷಿಕ ಸ್ನೇಹಮಿಲನ: ಡಾ. ಮೋಹನ್ ಆಳ್ವರಿಗೆ “ಬಂಟ ವಿಭೂಷಣ” ಪ್ರಶಸ್ತಿ ಪ್ರದಾನ
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಳೆದ ನಾಲುವರೆ ದಶಕಗಳಿಂದ ಕಾರ್ಯೊನ್ಮುಖವಾಗಿರುವ ಯು.ಎ.ಇ. ಬಂಟ್ಸ್ ಸಂಘಟನೆ ತನ್ನ 46ನೇ ವಾರ್ಷಿಕೋತ್ಸವ ಮತ್ತು ಬಂಟ ವಿಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ ದುಬಾಯಿ ಬ್ರಿಷ್ಟಲ್ ಹೋಟೆಲ್ ಸಭಾಂಗಣದಲ್ಲಿ 2023 ಏಪ್ರಿಲ್ 30ನೇ ತಾರೀಕು ಬೆಳಿಗೆ 10.30 ರಿಂದ ಸಂಜೆ ಏಳು ಗಂಟೆಯವರೆಗೆ ವಿಜೃಂಭಣೆಯಿಂದ ನಡೆಯಿತು.
ಮೂಡಬಿದರಿ ವಿದ್ಯಾನಗರಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರು ಡಾ. ಮೋಹನ್ ಆಳ್ವರನ್ನು ಸುಮಂಗಲೆಯರು ಪೂರ್ಣ ಕುಂಭ ಕಲಶ, ಕೇರಳದ ಚೆಂಡೆ ವಾದನದೊಂದಿಗೆ ಮೆರವಣಿಗೆಯಲ್ಲಿ ಸಭಾಂಗಣಕ್ಕೆ ಬರಮಾಡಿಕೊಳ್ಳಲಾಯಿತು.
ಅತಿಥಿಗಳಾಗಿ ಚಂದನವನದ ನಿರ್ದೇಶಕರು, ನಾಯಕ ನಟರು, ನಿರ್ಮಾಪಕರಾದ ಶಿವಧ್ವಜ್ ಶೆಟ್ಟಿ, ಮುಂಬೈ ನ ಸಿಐಡಿ ಖ್ಯಾತ ನಟರುಗಳಾದ ಶ್ರೀ ದಯಾ ಶೆಟ್ಟಿ ಮತ್ತು ಹರೀಶ್ ವಾಸು ಶೆಟ್ಟಿ ಹಾಗು ಶ್ರೀ ಪ್ರಕಾಶ್ ಪಕ್ಕಳ ಅತಿಥ್ ಕಾರ್ಯಕ್ರಮ ನಿರೂಪಕರಾಗಿ ಆಗಮಿಸಿದ್ದರು. ಯು.ಎ.ಇ. ಬಂಟ್ಸ್ ಸಲಹಾ ಸಮಿತಿ ಮತ್ತು 2023ನೇ ಸಾಲಿನ ಕಾರ್ಯಕಾರಿ ಸಮಿತಿಯ ಸಮ್ಮುಖದಲ್ಲಿ ಜ್ಯೋತಿ ಬೆಳಗಿಸಿ ಕಾರ್ಯಕರಮವನ್ನು ಉದ್ಘಾಟಿಸಲಾಯಿತು.
ಯು.ಎ.ಇ. ಬಂಟ್ಸ್ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರು ಸರ್ವರನ್ನು ಸ್ವಾಗತಿಸಿದರು. ಶ್ರೀ ಅಶೋಕ್ ಪಕ್ಕಳ ರವರ ಕಾರ್ಯಕ್ರಮ ನಿರೂಪಣೆಯೊಂದಿಗೆ ಸಂಗೀತಾ ಶೆಟ್ಟಿ ತಂಡದವರ ಸ್ವಾಗತ ಗೀತೆ, ಗೋಲ್ಡನ್ ಸ್ಟಾರ್ಸ್ ನ್ಯೂಸಿಕ್ ಅಂಡ್ ಫೈನ್ ಆಟ್ರ್ಸ್ ಸಂಸ್ಥೆಯ ಮಕ್ಕಳ ಸ್ವಾಗತ ನೃತ್ಯ, ಡಿವೈನ್ ಸ್ಟಾರ್ಸ್ ಅಬುದಾಬಿ ತಂಡದ ನೃತ್ಯ ಹಾಗೂ ಯಕ್ಷಗಾನ ಅಭ್ಯಾಸ ಕೇಂದ್ರ ದುಬಾಯಿ ಬಾಲ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.
ಡಾ. ಮೋಹನ್ ಆಳ್ವರಿಗೆ “ಬಂಟ ವಿಭೂಷಣ” ಪ್ರಶಸ್ತಿ ಪ್ರದಾನ
ಯು.ಎ.ಇ. ಬಂಟ್ಸ್ ನ ಪ್ರತಿಷ್ಠಿತ “ಬಂಟ ವಿಭೂಷಣ” ಪ್ರಶಸ್ತಿಯನ್ನು ಮೂಡಬಿದರಿ ವಿದ್ಯಾನಗರಿ ಆಲ್ವಾಸ್ ಸಮೂಹ ವಿದ್ಯಾ ಸಂಸ್ಥೆಗಳು, ಆಳ್ವಾಸ್ ಸಮೂಹ ಆಸ್ಪತ್ರೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರು, ಶಿಕ್ಷಣ ತಜ್ಞರು ಡಾ. ಮೋಹನ್ ಆಳ್ವ ರವರಿಗೆ ಪ್ರದಾನಿಸಲಾಯಿತು.
ಪ್ರಕಾಶ್ ಪಕ್ಕಳ ಮತ್ತು ಗಣೇಶ್ ರೈ ಕಾರ್ಯಕ್ರಮ ನಿರೂಪಿಸಿದರು.
ವಿಶೇಷ ಆಹ್ವಾನಿತ ಅತಿಥಿಗಳಾಗಿಚಂದನವನದ ನಿರ್ದೇಶಕರು ನಾಯಕ ನಟರು ನಿರ್ಮಾಪಕರು ಶ್ರೀ ಶಿವಧ್ವಜ್ ಶೆಟ್ಟಿ, ಮುಂಬೈ ಸಿಐಡಿ ಖ್ಯಾತಿ ನಟರುಗಳಾದ ಶ್ರೀ ದಯಾ ಶೆಟ್ಟಿ ಮತ್ತು ಶ್ರೀ ಹರೀಶ್ ವಾಸು ಶೆಟ್ಟಿ ಸಮಾರಂಭದ ವಿಶೇಷ ಆಕರ್ಷಣೆಯಾಗಿದ್ದರು.
ಕೋವಿಡ್ ವಾರಿಯರ್ ಡಾ. ಪುಷ್ಪರಾಜ್ ಶೆಟ್ಟಿ ಮತ್ತು ಡಾ. ಪೂರ್ಣಿಮ ಮಹೇಶ್ ಹೆಗ್ಡೆ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶ್ರೀಮತಿ ದೀಪಿಕಾ ಶೆಟ್ಟಿಯವರ ಕುಕ್ಕರಿ ಬುಕ್ ಬಿಡುಗಡೆ ಮಾಡಲಾಯಿತು. ಶಿವಧ್ವಜ್ ಶೆಟ್ಟಿ ರವರ ಕೊರಮ್ಮ ತುಳು ಸಿನೇಮಾ ಟೀಸರ್ ಬಿಡುಗಡೆ, ದಯಾ ಶೆಟ್ಟಿ ಮತ್ತು ಹರೀಶ್ ಶೆಟಿಯವರ ಯಾನ್ ಸೂಪರ್ ಸ್ಟಾರ್ ಚಿತ್ರದ ಟೀಸರ್ ಬಿಡುಗಡೆ, ಪ್ರಜ್ವಲ್ ಶೆಟ್ಟಿ ಅಭಿನಯದ ಗಜಾನನ ಕ್ರಿಕೇಟರ್ಸ್ ತುಳು ಸಿನೆಮಾ ಪೋಸ್ಟರ್ ಬಿಡುಗಡೆ ಹಾಗೂ ಮೆಲೋಡಿ ಮೇಕರ್ಸ್ ದುಬಾಯಿ ತಂದದ ಹಂಬಲ್ ಟ್ರಿಬ್ಯೂಟ್ ತೊ ಬಿಲವ್ಡ್ ಸಿಂಗರ್ಸ್ ಅಂಡ್ ಯಾಕ್ಟರ್ಸ್, ಬಾಲಿವುಡ್ ಡ್ಯಾನ್ಸ್ ದಿವಸ್, ಸ್ಟಾರ್ ಸ್ಟಾಪರ್ಸ್, ಡ್ಯಾಝ್ಲಿಂಗ್ ದಿವಸ್, ಸಮೂಹ ಗೀತೆ, ರೈಸಿಂಗ್ ಸ್ಟಾರ್ಸ್ ಯು.ಎ.ಇ. ಬಂಟ್ಸ್ ಅಡಲ್ಟ್ಸ್ ಗ್ರೂಪ್ ಡ್ಯಾನ್ಸ್, ನೈನ್ ಜಿವೆಲ್ಸ್ ಡ್ಯಾನಸ್, ಫ್ಯಾಮಿಲಿ ಡ್ಯಾನ್ಸ್ ಸ್ಪರ್ಧೆ ನಡೆಯಿತು, ಎಲ್ಲಾ ಪ್ರಾಯೋಜಕರುಅಗಳನ್ನು ಸನ್ಮಾನಿಸಿ ಗೌರವಿಸಲಾಯಿತು, ವಿವಿಧ ಸಂಘ ಸಂಸ್ಥೆಗಲ ಮುಖ್ಯಸ್ಥರನ್ನು ಹಾಗೂ ಮಾಧ್ಯಮ ಪ್ರತಿನಿಧಿಗಳನ್ನು ಮತ್ತು ಹೆಚ್ಚಿನ ಅಂಕ ಪಡೆದ ಬಂಟರ ವಿದ್ಯಾರ್ಥಿಗಳು ವಿವಿದ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕ್ರಿಯಾತ್ಮಕ ಕಲಾ ನಿರ್ದೇಶಕರು ಹಾಗೂ ಯು.ಎ.ಇ. ಬಂಟ್ಸ್ ನ ಸಲಹಾ ಸಮಿತಿಯ ಸದಸ್ಯರು ಶ್ರೀ ಬಿ. ಕೆ. ಗಣೇಶ್ರೈವರು ವೇದಿಕೆಯ ಡಿಜಿಟಲ್ ಡಿಸ್ಪ್ಲೆಯಲ್ಲು ಮೂಡಿಸಿರುವ ತುಳುನಾಡಿನ ಸಂಸ್ಕೃತಿಯನ್ನು ಹಾಗು ಹಲವಾರು ಡಿಸ್ಪ್ಲೆ ಗಳನ್ನು ವಿನ್ಯಾಸಗೊಳಿಸಿರುವುದನ್ನು ಅಭಿನಂದಿಸಿ ಸನ್ಮಾನಿಸಿ ಗೌರವಿಸಲಾಯಿತು.
ಕೊನೆಯಲ್ಲಿ ಲಕ್ಕಿ ಡ್ರಾ ದೊಂದಿಗೆ ಹಾಗೂ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.