‘ಯೂತ್ ಜೋಡೊ ಬೂತ್ ಜೋಡೊ’ ಕಾರ್ಯಕ್ರಮಕ್ಕೆ ಚಾಲನೆ

Spread the love

‘ಯೂತ್ ಜೋಡೊ ಬೂತ್ ಜೋಡೊ’ ಕಾರ್ಯಕ್ರಮಕ್ಕೆ ಚಾಲನೆ

ದ.ಕ. ಜಿಲ್ಲಾ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಮಂಗಳೂರು ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯಿಂದ ಬಜಾಲ್ ವಾರ್ಡಿನ ಫೈಸಲ್ ನಗರ, ಬೆಳ್ತಂಗಡಿ ನಗರ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಮರೋಡಿ, ಇಂದಬೆಟ್ಟು ಹಾಗೂ ಕುಕ್ಕೆಡಿ ಗ್ರಾಮಗಳಲ್ಲಿ ಶನಿವಾರ “ಯೂತ್ ಜೋಡೊ ಬೂತ್ ಜೋಡೊ” ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ್ “ಭಾರತ್ ಜೋಡೊ” ಯಾತ್ರೆಯ ಬಗ್ಗೆ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜೆ.ಆರ್ ಲೋಬೋ, ಮ.ನಾ.ಪ ಸದಸ್ಯರಾದ ರವೂಫ್ ಬಜಾಲ್, ಅಶ್ರಫ್ ಬಜಾಲ್, ಬ್ಲಾಕ್ ಮಂಗಳೂರು ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸುನೀಲ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ.ಕೆ ಸುಧೀರ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಮಾನಂದ ಪೂಜಾರಿ, ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಪ್ರಬೀತ್ ಕುಮಾರ್, ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಸಿಫ್ ಬಜಾಲ್, ವಾರ್ಡ್ ಯುವ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಬಜಾಲ್, ಮಾಜಿ ಪಂಚಾಯತ್ ಸದಸ್ಯ ಫಕ್ರುದ್ದೀನ್, ಬೆಳ್ತಂಗಡಿ ನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಪೈ, ಮಾಜಿ ಜಿ.ಪಂ. ಸದಸ್ಯ ಶೇಕರ್ ಕುಕ್ಕೇಡಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಶ್ವಥ್ ರಾಜ್, ಅನೂಪ್ ಬಂಗೇರಾ, ನವೀದ್ ಅಖ್ತರ್, ಭರತ್ ಕುಮಾರ್, ಗ್ರಾಮ ಸಮಿತಿ ಅಧ್ಯಕ್ಷ ಜಯರಾಂ ಗೌಡ, ಬೂತ್ ಅಧ್ಯಕ್ಷರಾದ ಇಸ್ಮಾಯಿಲ್ ಮೊದಲಾವರು ಉಪಸ್ಥಿತರಿದ್ದರು.


Spread the love