
ಯೆನೆಪೊಯ ದಂತ ಕಾಲೇಜಿನ ಪದವಿ ಪ್ರದಾನ ದಿನ -2023
ಮಂಗಳೂರು: ಬಿ ಡಿ ಎಸ್ 2017 ರ ಬ್ಯಾಚಿನ ಪದವಿ ಪ್ರಧಾನ ಕಾರ್ಯಕ್ರಮವನ್ನು ಯೆನೆಪೊಯ ದಂತ ಕಾಲೇಜಿನ ನಡೆಸಲಾಯಿತು.102 ದಂತ ವೈದ್ಯಕೀಯ ಪದವೀಧರ ವಿದ್ಯಾರ್ಥಿಗಳು ತಮ್ಮ ಹೆತ್ತವರು ಹಾಗೂ ಕುಟುಂಬದವರ ಜೊತೆ ಬಹಳ ಸಂಭ್ರಮದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಮುಸ್ತಾಫಾ ಜವಾರ, ವಿಶೇಷ ರಾಯಬಾರಿಗಳು ಹಾಗೂ ಉನ್ನತ ಆಯುಕ್ತರು, ಗಾ0ಬಿಯಾ, ಮುಖ್ಯ ಅತಿಥಿಯಾಗಿ ಮತ್ತು ಡಾ. ಅಖ್ತರ್ ಹುಸೇನ್, ಮಾಜಿ ಪ್ರಾಂಶುಪಾಲರು, ಯೆನೆಪೋಯ ದಂತ ಕಾಲೇಜು ಗೌರವ ಅತಿಥಿಯಾಗಿ ಭಾಗವಹಿಸಿದರು.
ಡಾ. ಮಲ್ಲಿಕಾ ಎಸ್ ಶೆಟ್ಟಿ ಮತ್ತು ಡಾ. ಸ್ನೇಹ ಆರ್ ಭಟ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪದವಿ ಪ್ರಧಾನ ಸಮಾರಂಭವು ಸಂಜೆ 5.00 ಕ್ಕೆ ಸರಿಯಾಗಿ ಶೈಕ್ಷಣಿಕ ಮೆರವಣಿಗೆಯ ಮೂಲಕ ವಿಜೃಂಭಣೆಯಿಂದ ನಡೆಯಿತು. ಡಾ. ಶಾಮ್ ಎಸ್ ಭಟ್, ಡೀನ್, ಅಧ್ಯಾಪಕ ವೃಂದ, ಎಲ್ಲರನ್ನು ಸ್ವಾಗತಿಸಿದರು. ಡಾ. ಹಸನ ಸರ್ ಫ್ರಾಜ್, ಉಪ ಪ್ರಾಂಶುಪಾಲರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.. ಡಾ. ರಾಜೇಶ್ ಕೆ ಎಸ್, ಮುಖ್ಯಸ್ಥರು, ವಸಡಿನ ರೋಗ ದ ವಿಭಾಗ ಪದವೀಧರರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.ಡಾ. ಮಾಜಿ ಜೋಸು, ಉಪ ಪ್ರಾಂಶುಪಾಲರು, ವಿವಿಧ ದಂತ ವಿಭಾಗದ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ. ಲಕ್ಷ್ಮೀ ಕಾಂತ್ ಚಾತ್ರ, ಪ್ರಾಂಶುಪಾಲರು, ಯೆನೆಪೊಯ ದಂತ ಕಾಲೇಜು, ತಮ್ಮ ಅಧ್ಯಕ್ಷೀಯ ಭಾಷಣ ದಲ್ಲಿ ಪಧವೀದರ ದಂತ ವಿದ್ಯಾರ್ಥಿಗಳನ್ನು ಅಭಿನಂಧಿಸಿದರು.
ಶೈಕ್ಷಣಿಕ ರಂಗದ ಶ್ರೇಣಿತ ವಿದ್ಯಾರ್ಥಿ ಡಾ. ಫಾತಿಮತ್ ಆಶಾರರನ್ನು ಬಂಗಾರದ ಪದಕದ ಮೂಲಕ ಮುಖ್ಯ ಅತಿಥಿಗಳು ಸನ್ಮಾನಿಸಿದರು. ಡಾ. ಶಾಕೀರ ಮೂಸ ಕುಟ್ಟಿ ವಂದಿಸಿದರು.