
ಯೆನೆಪೋಯ ಕಾಲೇಜಿನ ಲ್ಲಿ ”ರ್ಯಾಗಿಂಗ್ ಒಂದು ಪಿಡುಗು” ಕುರಿತು ಕಾರ್ಯಾಗಾರ
ಯೆನೆಪೋಯ ದಂತ ಕಾಲೇಜಿನ ಸಭಾಂಗಣದಲ್ಲಿ ”ರ್ಯಾಗಿಂಗ್ ಒಂದು ಪಿಡುಗು” ಎಂಬ ವಿಷಯದ ಕುರಿತು ಕಾರ್ಯಾಗಾರ ನಡೆಯಿತು.
ಡಾ.ಅಖ್ತರ್ ಹುಸೈನ್, ಪ್ರಾಂಶುಪಾಲರು, ಯೆನೆಪೋಯ ದಂತ ಕಾಲೇಜು, ಸ್ವಾಗತಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾದ ಭಾರತೀಯ ದಂತ ಕೌನ್ಸಿಲ್ ನ ಸದಸ್ಯರಾದ ಡಾ. ಅಸೀಂ ಹಸಾಲಿಯವರು ರ್ಯಾಗಿಂಗ್ನ ಕೆಡುಕುಗಳ ಬಗ್ಗೆ ಮತ್ತು ಕಾನೂನ್ಮಾತಕ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಡಾ. ಪೈಜನ್ ಖಾನ್, ಉಪನ್ಯಾಸಕರು, ಓಥೊ9ಡಾಂಟಿಕ್ ವಿಭಾಗ, ಯೆನೆಪೋಯ ದಂತ ಕಾಲೇಜು ಅತಿಥಿಗಳನ್ನು ಪರಿಚಯಿಸಿದರು. ಡಾ. ವಿದ್ಯಾ ಭಟ್, ಇವರು ಯೆನೆಪೋಯ ದಂತ ಕಾಲೇಜಿನಲ್ಲಿರುವ ರ್ಯಾಗಿಂಗ್ ನ ತಡೆಗಾಗಿ ಇರುವ ಕ್ರಮಗಳ ಬಗ್ಗೆವಿವರಣೆ ನೀಡಿದರು.
ಯೆನೆಪೋಯ ದಂತ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಶ್ಯಾಮ. ಎಸ್. ಭಟ್, ಡಾ. ಲಕ್ಮೀಕಾಂತ ಚಾತ್ರ ಹಾಗೂ ಡಾ. ಮಾಜಿ ಜೋಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾಯ9ಕ್ರಮದಲ್ಲಿ ವಿದ್ಯಾರ್ಥಿಗಳು, ಆ್ಯಂಟಿ ರ್ಯಾಗಿಂಗ್ ಕಮಿಟಿಯ ಸದಸ್ಯರು, ಹಾಸ್ಟೆಲ್ ವಾರ್ಡನ್ಗಳು, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳು ಮೊದಲಾದ ಸುಮಾರು 180 ಮಂದಿ ಪಾಲ್ಗೊಂಡಿದ್ದರು. ಡಾ. ಇಮ್ರನ್ ಮೋತಿಶಾಮ್ ವಂದಿಸಿದರು.