ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ವಿಶ್ವ ಶ್ರವಣ ದಿನಾಚರಣೆ

Spread the love

ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ವಿಶ್ವ ಶ್ರವಣ ದಿನಾಚರಣೆ

ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಇಎನ್ಟಿ ಮತ್ತು ಶ್ರವಣ ಶಾಸ್ತ್ರ ಹಾಗೂ ವಾಕ್ ಶ್ರವಣ ವಿಭಾಗವು ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮವನ್ನು ನಡೆಸಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಗಂಗಾಧರ ಸೋಮಯಾಜಿ, ರಿಜಿಸ್ಟ್ರಾರ್ ಮತ್ತು ಇಎನ್ಟಿ ಪ್ರಾಧ್ಯಾಪಕರು ವಹಿಸಿದ್ದರು. ಡಾ. ಎಂ. ಎಸ್. ಮೂಸಬ್ಬ, ಡೀನ್ ಮತ್ತು ಸರ್ಜರಿ ಪ್ರಾಧ್ಯಾಪಕರು, ಡಾ. ಪ್ರಕಾಶ್ ಆರ್. ಎಂ. ಸಾಲ್ಡಾನ್ಹಾ, ವೈದ್ಯಕೀಯ ಅಧೀಕ್ಷಕರು ಮತ್ತು ಮಕ್ಕಳ ವಿಭಾಗದ ಪ್ರಾಧ್ಯಾಪಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇಎನ್ಟಿ ವಿಭಾಗದ ಪ್ರಾಧ್ಯಾಪಕರಾದ ಡಾ. ವಿಜಯಲಕ್ಷ್ಮಿ ಎಸ್, ಇವರು ಶ್ರವಣೇಂದ್ರಿಯದ ಪ್ರಾಮುಖ್ಯತೆ ಮತ್ತು ಅದರ ಪ್ರಸ್ತುತತೆಯ ಬಗ್ಗೆ ಸಭಿಕರಿಗೆ ಪರಿಚಯಿಸಿದರು. ಇಎನ್ಟಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ದೀಕ್ಷಿತ್ ಆರ್. ಎಂ ಮತ್ತು ಸ್ನಾತಕೋತ್ತರ ಪಧವೀಧರರಾದ ಡಾ. ಚಂದನ, ಡಾ. ಐಶ್ವರ್ಯ, ಡಾ. ಡಿಸ್ಮಿ ಅವರು ಶ್ರವಣ ದೋಷವನ್ನು ತಡೆಗಟ್ಟುವುದು ಮತ್ತು ಆರಂಭಿಕ ಪತ್ತೆಯ ಕುರಿತು ಪ್ರೇಕ್ಷಕರಿಗೆ ಮಾಹಿತಿ ನೀಡಿದರು. ಮಕ್ಕಳಲ್ಲಿ ಶ್ರವಣದ ಪ್ರಾಮುಖ್ಯತೆ, ಮಾತಿನ ಬೆಳವಣಿಗೆ ಮತ್ತು ಮೆದುಳಿನ ಬೆಳವಣಿಗೆಯಲ್ಲಿ ಅದರ ಪಾತ್ರವನ್ನು ವಿವರಿಸಿದರು. ಕಿವಿಯ ಸಾಮಾನ್ಯ ಸಮಸ್ಯೆಗಳಾದ ಕಿವಿಯ ಸ್ರಾವ, ಶ್ರವಣ ದೋಷದ ಕುರಿತು ಚರ್ಚಿಸಲಾಯಿತು.

ಮಕ್ಕಳು ಮತ್ತು ಹದಿಹರೆಯದವರಲ್ಲಿ ಶ್ರವಣ ದೋಷದ ಪರಿಣಾಮವು ಭಾವನಾತ್ಮಕ ಮತ್ತು ಸಾಮಾಜಿಕ ಅಸಾಮರ್ಥ್ಯಗಳಿಗೆ ಕಾರಣವಾಗಬಹುದು. ವಯಸ್ಸಾದವರಲ್ಲಿ ಶ್ರವಣ ದೋಷವು ಹತಾಶೆ, ಕೋಪ, ಮುಜುಗರ, ಸಾಮಾಜಿಕ ಆತಂಕ, ಒಂಟಿತನಕ್ಕೆ ಕಾರಣವಾಗಬಹುದು. ಎಲ್ಲಾ ವಯೋಮಾನದವರಲ್ಲಿ ಶ್ರವಣ ದೋಷವು ಕಂಡು ಬಂದರೂ ನವಜಾತ ಶಿಶುಗಳು ಮತ್ತು ಮಕ್ಕಳಲ್ಲಿ ಇದು ಮೆದುಳಿನ ಪ್ರಬುದ್ಧತೆ ಮತ್ತು ಮಾತಿನ ದುರ್ಬಲತೆಯ ಮೇಲೆ ಪರಿಣಾಮ ಬೀರುತ್ತದೆ. ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ ಮತ್ತು ಹುಟ್ಟು ಕಿವುಡುತನದ ಮಕ್ಕಳಿಗಾಗಿ ವಿವಿಧ ಯೋಜನೆಗಳ ಬಗ್ಗೆಯೂ ಚರ್ಚಿಸಲಾಯಿತು. ಯೆನೆಪೆÇೀಯ ಆಸ್ಪತ್ರೆಯನ್ನು SಂSಖಿ (ಕರ್ನಾಟಕ ಸರ್ಕಾರ) ಅಡಿಯಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಯೋಜನೆಗಾಗಿ ಎಂಪನೆಲ್ ಮಾಡಲಾಗಿದೆ. ಈ ಜಾಗೃತಿ ಕಾರ್ಯಕ್ರಮದಲ್ಲಿ ಇಎನ್ಟಿ ವಿಭಾಗದ ಮುಖ್ಯಸ್ಥರಾದ ಡಾ. ಸಾಯಿ ಮನೋಹರ್ ಮತ್ತು ವಾಕ್ ಶ್ರವಣ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಶ್ವೇತಾ ಪ್ರಭು ಅವರು ಉಪಸ್ಥಿತರಿದ್ದು, ಆಸ್ಪತ್ರೆಯ ಮಾರುಕಟ್ಟೆ ವಿಭಾಗವು ಕಾರ್ಯಕ್ರಮ ಸಂಯೋಜಿಸಲು ಸಹಕರಿಸಿದರು.


Spread the love

Leave a Reply

Please enter your comment!
Please enter your name here