ಯೆನೆಪೋಯ  ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಗ್ರಹಣ ವೀಕ್ಷಣೆ ಮಾಡಲು ವ್ಯವಸ್ಥೆ

Spread the love

ಯೆನೆಪೋಯ  ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಗ್ರಹಣ ವೀಕ್ಷಣೆ ಮಾಡಲು ವ್ಯವಸ್ಥೆ

ಇದೇ ಬರುವ ಮಂಗಳವಾರ ದಿನಾಂಕ 25-10-2022ರಂದು ವಿಶ್ವದ ಹಲವಾರು ದೇಶಗಳಲ್ಲಿ ಕಾಣಲಿರುವ ಸೂರ್ಯಗ್ರಹಣ, ಭಾರತದ ಭೂಭಾಗದಲ್ಲಿ ಪಾರ್ಶ್ವ ಸೂರ್ಯಗ್ರಹಣವಾಗಿ ಗೋಚರಿಸಲಿದೆ. ಮಂಗಳೂರಿನ ಆಸುಪಾಸಿನಲ್ಲಿ ಸುಮಾರು ಘಂಟೆ ಸಂಜೆ 5:09 ರಿಂದ 6:06ರ ವರೆಗೆ ಕಾಣಸಿಗುವ ಈ ಘಟನೆಯಲ್ಲಿ ಸುಮಾರು ಘಂಟೆ ಸಂಜೆ 5:50ರ ಹೊತ್ತಿಗೆ ಅತಿಹೆಚ್ಚು ಅಂದರೆ ಸೂರ್ಯನ ಬಿಂಬದ 10.9% ಶೇಕಡದಷ್ಟು ಭಾಗವನ್ನು ಮರೆಮಾಚಲಿದೆ.

ಗ್ರಹಣವೀಕ್ಷಣೆ ಬರಿಗಣ್ಣಿನಿಂದ ನೋಡುವುದು ಹಾನಿಕಾರಕ. ಇದನ್ನು ದೂರದರ್ಶಕದಿಂದ (ಟೆಲೆಸ್ಕೋಪ್) ಪರದೆಯ ಮೇಲೆ ಕಾಣಲಾಗುವ ಗ್ರಹಣದ ಬಿಂಬ ಅಥವಾ ಲಭ್ಯವಿರುವ ಪ್ರಮಾಣೀಕರಿಸಿದ ಸೌರಕನ್ನಡಕವನ್ನು ಬಳಸಿಯೇ ನೋಡಬೇಕು.

ಈ ನಿಟ್ಟಿನಲ್ಲಿ, ಸಾರ್ವಜನಿಕರಿಗೆ ಸುಲಭವಾಗಿ ಗ್ರಹಣ ವೀಕ್ಷಣೆ ಮಾಡÀಲು ಯೆನೆಪೋಯ ಡೀಮ್ಡ್ ಟು ಬಿ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ, ಬಲ್ಮಠದಲ್ಲಿರುವ ಯೆನೆಪೋಯ ಪದವಿ ಕಾಲೇಜಿನ 6ನೇ ಮಹಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಮಂಗಳೂರಿನ ಹವ್ಯಾಸಿ ಖಗೋಲಶಾಸ್ತ್ರಜ್ಞರ ಸಂಘದ ಶ್ರೀ ರೋಹಿತ್ ರಾವ್ ಮತ್ತು ಡಾ. ಸಂಗೀತಲಕ್ಷ್ಮಿ ಎಂ.ಜೆ ಇವರು ತಿಳಿಸಿರುತ್ತಾರೆ. ಮನೆಯಲ್ಲಿಯೇ ಗ್ರಹಣ ವೀಕ್ಷಣೆ ಮಾಡುವ ಆಸಕ್ತರು ತಮಗೆ ಸೂಕ್ತವಾದ ಪ್ರದೇಶದಲ್ಲಿ ಸೌರಕನ್ನಡಕವನ್ನು ಬಳಸಿಯೇ ನೋಡಬೇಕಾಗಿ, ಮತ್ತು ಸೌರಕನ್ನಡಕಗಳನ್ನು ಮುಂಚಿತವಾಗಿ ಡಾ. ಸಂಗೀತಲಕ್ಷ್ಮೀ (ದೂರವಾಣಿ: 9448790070) ಇವರಿಂದ ಪಡೆದುಕೊಳ್ಳಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love