ಯೇನೆಪೋಯ ನರ್ಸಿಂಗ್ ಕಾಲೇಜು- ಪದವಿ ಪ್ರಧಾನ ಕಾರ್ಯಕ್ರಮ

Spread the love

ಯೇನೆಪೋಯ ನರ್ಸಿಂಗ್ ಕಾಲೇಜು- ಪದವಿ ಪ್ರಧಾನ ಕಾರ್ಯಕ್ರಮ

ಮಂಗಳೂರು: ಯೇನೆಪೋಯ ನರ್ಸಿಂಗ್ ಕಾಲೇಜು, ಮಂಗಳೂರು ಇದರ ಪದವಿ ಪ್ರಧಾನ ಕಾರ್ಯಕ್ರಮವನ್ನು  ಯೇನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯ್ಯಾನಿಲಯದ ಯೆಂಡ್ಯೂರನ್ಸ್ನಲ್ಲಿ ಹಮ್ಮಿಕೊಳ್ಳಲಾಯಿತು.

125 ಪದವಿ ಮತ್ತು ಉನ್ನತ ಪದವಿ ನರ್ಸಿಂಗ್ ವಿದ್ಯಾರ್ಥಿಗಳು ಪದವಿಯನ್ನು ಪಡೆದರು. ಯೇನೆಪೋಯ ನರ್ಸಿಂಗ್ ಕಾಲೇಜಿನ ಡೀನ್ ಡಾ. ಲೀನಾ ಕೆಸಿ ಅಧ್ಯಕ್ಷತೆಯನ್ನು ವಹಿಸಿದ್ದರು. ಪೆÇ್ರ. ಪ್ರಸನ್ನ ಕುಮಾರ್ ಓ, ರಿಜಿಸ್ಟ್ರಾರ್ ಕರ್ನಾಟಕ ನರ್ಸಿಂಗ್ ಕೌನ್ಸಿಲ್ ಗೌರವ ಅತಿಥಿಗಳಾಗಿದ್ದರು. ಅವರು ಪದವೀಧರರನ್ನು ಶ್ಲಾಘಿಸಿ, ರೋಗಿಗಳ ಆರೈಕೆಯಲ್ಲಿ ಅವರ ಪಾತ್ರದ ಪ್ರಾಮುಖ್ಯತೆಯನ್ನು ಉಲ್ಲೇಖಿಸಿದರು.

ಮಣಿಪಾಲ ನರ್ಸಿಂಗ್ ಕಾಲೇಜಿನ ಡೀನ್ ಡಾ. ಆನಿಸ್ ಜಾರ್ಜ್ ಮುಖ್ಯ ಅತಿಥಿಯಾಗಿದ್ದರು ಹಾಗೂ ಪದವೀಧರರನ್ನು ಉದ್ದೇಶಿಸಿ ಮಾತನಾಡಿದ ಅವರು ತಮ್ಮ ಕೆಲಸ ಮತ್ತು ಸಾಮರ್ಥದಲ್ಲ್ಯಿ, ಪ್ರಾಮಾಣಿಕತೆಯಿಂದ ಇರಲು ಸಲಹೆ ನೀಡಿದರು. ಸುಶ್ರೂಷಕರು ವಿದೇಶಕ್ಕೆ ಹೋದರೂ ದೇಶಕ್ಕೆ ಹಿಂತಿರುಗಿ ಸೇವೆ ಸಲ್ಲಿಸುವ ಅಗತ್ಯವನ್ನು ಒತ್ತಿ ಹೇಳಿದರು.

ಡಾ. ಪ್ರಿಯಾ ರೇಷ್ಮಾ ಅರಾನ್ಹಾ ಮತ್ತು ಶ್ರೀ ಗಿರೀಶ್ ಜಿ.ಆರ್ ಅವರು ಪದವೀಧರರನ್ನು ಪ್ರಸ್ತುತಪಡಿಸಿದರು. ಶೈಕ್ಷಣಿಕ ವರ್ಷದಲ್ಲಿ ಉತ್ತಮ ಸಾಧನೆ ತೋರಿದ ವಿಧ್ಯಾರ್ಥಿಗಳಿಗೆ ಪದಕ ಹಾಗೂ ಪ್ರಮಾಣಪತ್ರವನ್ನು ವಿತರಿಸಲಾಯಿತು.

ಉಪಪ್ರಾಂಶುಪಾಲೆ ಡಾ.ಉಮಾರಾಣಿ ಜೆ ಸ್ವಾಗತಿಸಿದರು. ಶ್ರೀಮತಿ ಜಾನೆಟ್ ಪ್ರೀಮ ಮಿರಾಂಡಾ ಉಪಪ್ರಾಂಶುಪಾಲರು ವಂದಿಸಿದರು. ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಕೊನೆಗೊಂಡಿತು.


Spread the love

Leave a Reply

Please enter your comment!
Please enter your name here