
Spread the love
ರಸ್ತೆಯಲ್ಲಿ ಮಲಗಿದ್ದ ದನಗಳ ಮೇಲೆ ಹರಿದ ಕಾರು ಪಲ್ಟಿ -ಮೂರು ಜಾನುವಾರು ಮೃತ್ಯು, ನಾಲ್ವರು ಗಂಭೀರ
ಮಂಗಳೂರು: ರಸ್ತೆಬದಿಯಲ್ಲಿ ಮಲಗಿದ್ದ ದನಗಳ ಮೇಲೆ ಕಾರೊಂದು ವೇಗವಾಗಿ ಸಾಗಿದ ಪರಿಣಾಮ ಕಾರು ನಿಯಂತ್ರಣ ತಪ್ಪಿ ಉರುಳಿ ಬಿದ್ದು ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ಮುಂಜಾನೆ ಕುತ್ತಾರು ಪಂಡಿತ್ ಹೌಸ್ ಸಮೀಪ ಸಂಭವಿಸಿದೆ.
ಭಾನುವಾರ ಬೆಳಿಗ್ಗೆ ಸುಮಾರು 3.30 ರ ಸುಮಾರಿಗೆ ತೊಕ್ಕೊಟ್ಟು ಕುತ್ತಾರು ಪಂಡಿತ್ ಹೌಸ್ ಎಂಬಲ್ಲಿ ದೇರಳಕಟ್ಟೆಯಿಂದ ತೊಕ್ಕೊಟ್ಟು ಕಡೆಗೆ ಚಲಿಸುತ್ತಿದ್ದ ಕಾರು ರಸ್ತೆಯಲ್ಲಿ ಮಲಗಿದ್ದ ದನಗಳ ಮೇಲೆ ವೇಗವಾಗಿ ಕಾರು ಹರಿದಿದ್ದು, ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಉರುಳಿ ಬಿದ್ದಿದ್ದು, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಮೂರು ದನಗಳು ಸಾವನಪ್ಪಿದೆ ಎಂದು ತಿಳಿದು ಬಂದಿದೆ.
ಗಾಯಾಳುಗಳನ್ನು ಮೈಸೂರು ಮೂಲದ ಡಾ.ವಿವೇಕ್ ಶಶಿಕುಮಾರ್ ಸೇರಿದಂತೆ ಇತರೆ ಮೂವರು ವೈದ್ಯಕೀಯ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದ್ದು ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ.
Spread the love