ರಾಜಕೀಯ‌ವು ಸೇವೆ ಎಂಬ‌ ಅರ್ಥಕ್ಕೆ‌ ಶಕ್ತಿ ತುಂಬಿದ ಧೀಮಂತ ನಾಯಕ ಎಜಿ ಕೊಡ್ಗಿ: ಸಂಸದ ಬಿವೈ ರಾಘವೇಂದ್ರ

Spread the love

ರಾಜಕೀಯ‌ವು ಸೇವೆ ಎಂಬ‌ ಅರ್ಥಕ್ಕೆ‌ ಶಕ್ತಿ ತುಂಬಿದ ಧೀಮಂತ ನಾಯಕ ಎಜಿ ಕೊಡ್ಗಿ: ಸಂಸದ ಬಿವೈ ರಾಘವೇಂದ್ರ

ಕುಂದಾಪುರ: ಮಾಜಿನ ಶಾಸಕ ಎಜಿ ಕೊಡ್ಗಿಯವರ ಸಾವು ನಮಗೆಲ್ಲರಿಗೂ ತುಂಬಲಾರದ ನಷ್ಟವಾಗಿದ್ದು ರಾಜಕೀಯ‌ವು ಸೇವೆ ಎಂಬ‌ ಅರ್ಥಕ್ಕೆ‌ ಶಕ್ತಿ ತುಂಬಿದ ಧೀಮಂತ ನಾಯಕ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿವೈ ರಾಘವೇಂದ್ರ ಹೇಳಿದರು.

ಅವರು ಮಂಗಳವಾರ ಬಿಜೆಪಿ ಹಿರಿಯ ಮುಖಂಡ ಎಜಿ ಕೊಡ್ಗಿಯವರ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮಗಳಿಗೆ ಮಾತನಾಡಿದರು.

ಕೊಡ್ಗಿಯವರು ಕೊನೆಯುಸಿರಿನ ತನಕವೂ ಕ್ರಿಯಾಶೀಲರಾಗಿ ಕೆಲಸ‌ ಮಾಡಿದ್ದು, ಕುಗ್ರಾಮವಾದ ಅಮಾಸೆಬೈಲ್ ಅನ್ನು ರಾಷ್ಟ್ರಮಟ್ಟಕ್ಕೆ ಪರಿಚಯಿಸಿದ ಕೀರ್ತಿ ಅವರಿಗಿದೆ. ರಾಷ್ಟ್ರೀಕೃತ ಬ್ಯಾಂಕ್ ಸಹಕಾರದಿಂದ ಸೋಲಾರ್ ಅಳವಡಿಸಿ ಇಡೀ ಊರಿಗೆ ಬೆಳಕು ಚೆಲ್ಲಿದವರು. ರಾಜಕೀಯ, ಸಾಮಾಜಿಕ, ಸಹಕಾರಿ, ಕೃಷಿ ಕ್ಷೇತ್ರದಲ್ಲೂ ಮೇಲುಗೈ ಸಾಧಿಸಿದ್ದ ಅವರು ಸರಳತೆ, ಶಿಸ್ತಿನಿಂದಲೇ ನಮಗೆಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಸಂಸತ್ ಸದಸ್ಯನಾಗಿ ಜನರ ಧ್ವನಿಯಾಗಿ ಕೆಲಸ‌ ಮಾಡಲು ಎಜಿ ಕೊಡ್ಗಿಯವರ ಆಶೀರ್ವಾದ ಎಂದಿಗೂ ಮರೆಯುವಂತಿಲ್ಲ ಎಂದು ಅವರು ಹೇಳಿದರು.


Spread the love