
Spread the love
ರಾಜಕೀಯ ನಿವೃತ್ತಿಗೆ ಚಿಂತನೆ: ಮತ ಎಣಿಕೆ ಕೇಂದ್ರದಿಂದ ಹೊರ ನಡೆದ ಸೊರಕೆ
ಉಡುಪಿ: ತೀವ್ರ ಕುತೂಹಲ ಕೆರಳಿಸಿದ್ದ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಹೆಚ್ಚಿನ ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸುತ್ತಿದ್ದಂತೆಯೇ ಮತ ಎಣಿಕೆ ಕೇಂದ್ರದಿಂದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಹೊರ ನಡೆದಿದ್ದಾರೆ.
ಮತ ಎಣಿಕೆ ಕೇಂದ್ರದಿಂದ ಹೊರ ಬರುತ್ತಿದ್ದಂತೆಯೇ ಮಾಧ್ಯಮಗಳ ಜೊತೆ ಮಾತನಾಡಲು ನಿರಾಕರಿಸಿದ ವಿನಯ್ ಕುಮಾರ್ ಸೊರಕೆ, ನಡೆದು ಮುಂದೆ ಸಾಗುತ್ತಲೇ ರಾಜಕೀಯ ನಿವೃತ್ತಿಯ ಬಗ್ಗೆ ಚಿಂತನೆ ನಡೆಸಲಿದ್ದು, ಜನರಿಗೆ ಅಭಿವೃದ್ದಿಯ ಅಗತ್ಯವಿಲ್ಲ ಎಂದು ಮುಂದೆ ಸಾಗಿದ್ದಾರೆ.
Spread the love