ರಾಜೀವ್ ಗಾಂಧಿ ಹಾಗೂ  ದೇವರಾಜು ಅರಸು ಅವರ ಜನ್ಮದಿನ ಆಚರಣೆ

Spread the love

 ರಾಜೀವ್ ಗಾಂಧಿ ಹಾಗೂ  ದೇವರಾಜು ಅರಸು ಅವರ ಜನ್ಮದಿನ ಆಚರಣೆ

ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ರವಿವಾರ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರ ಜನ್ಮದಿನ ಅಂಗವಾಗಿ ಅವರ ಭಾವಚಿತ್ರಗಳಿಗೆ ಪುಷ್ಪ ನಮನ‌ ಸಲ್ಲಿಸಿ ಸ್ಮರಿಸಲಾಯಿತು.

ಹಿರಿಯ ಕಾಂಗ್ರೆಸ್ ನಾಯಕ, ದ ಕ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಮಾತನಾಡಿ, ಟೆಲಿಕಾಂ ಕ್ರಾಂತಿ, ಕಂಪ್ಯೂಟರೀಕರಣ, ಪಂಚಾಯತ್ ರಾಜ್, ಮತದಾನ ವಯಸ್ಸಿನ ಇಳಿಕೆ ಮೊದಲಾದ ಪುರೋಗಾಮಿ ಕಾರ್ಯಕ್ರಮಗಳ ಮೂಲಕ ಬಲಶಾಲಿಯಾದ ಆಧುನಿಕ ಭಾರತ ಕಟ್ಟಿದವರು ರಾಜೀವ್ ಗಾಂಧಿ ಎಂದು ಹೇಳಿದರು.

ರಾಜ್ಯ ರಾಜಕಾರಣದಲ್ಲಿ ದೇವರಾಜ ಅರಸು ಅವರು ಒಬ್ಬ ಧೀಮಂತ ನಾಯಕ. ಅವರು ಭೂ ಸುಧಾರಣೆ, ಜೀತ ವಿಮುಕ್ತಿ, ಋಣಮುಕ್ತ ಯೋಜನೆ ಸೇರಿದಂತೆ ಹಲವು ಕ್ರಾಂತಿಕಾರಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಕಾಂಗ್ರೆಸ್‍ನ ಎಲ್ಲ ಯೋಜನೆಗಳನ್ನು ಯಥಾವತ್ತಾಗಿ ಜಾರಿಗೆ ತಂದು ಜನರಿಗೆ ತಲುಪಿಸಿದವರು.ರಾಜೀವ್ ಗಾಂಧಿ ಹಾಗೂ ಅರಸು ಅವರು ಮಾಡಿರುವ ಜನಪರ ಕಾರ್ಯಗಳನ್ನು ನೆನಪು ಮಾಡಿಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜೆ ಆರ್ ಲೋಬೊ ಮಾತನಾಡಿದರು. ಸದಾಶಿವ ಉಳ್ಳಾಲ್, ಅಬ್ದುಲ್ ಸಲೀಂ.ಜೆ, ವಿಶ್ವಾಶ್ ಕುಮಾರ್ ದಾಸ್, ಶುಭಾಷ್ ಶೆಟ್ಟಿ ಕೊಲ್ನಾಡ್, ಎಸ್.ಅಪ್ಪಿ, ಶಾಹುಲ್ ಹಮೀದ್ ಕೆ.ಕೆ, ಜೆಸಿಂತ ಆಲ್ಫ್ರೆಡ್, ಟಿ.ಹೊನ್ನಯ್ಯ, ಕೌಶಲ್ ಪ್ರಸಾದ್ ಶೆಟ್ಟಿ, ನೀರಜ್ ಪಾಲ್, ನಝೀರ್ ಬಜಾಲ್, ವಿಕಾಸ್ ಶೆಟ್ಟಿ, ಶಾಂತಲಾ ಗಟ್ಟಿ, ಮಲ್ಲಿಕಾ ಪಕಳ, ಪ್ರಕಾಶ್ ಸಾಲ್ಯಾನ್, ಕೇಶವ ಮಾರೋಳಿ, ರಮಾನಂದ ಪೂಜಾರಿ, ಹುಸೈನ್ ಕಾಟಿಪಳ್ಳ, ಯಶವಂತ್ ಪ್ರಭು, ಸಲೀಂ ಕುದ್ರೋಳಿ, ಟಿ.ಕೆ ಸುಧೀರ್, ದುರ್ಗಾ ಪ್ರಸಾದ್, ಫಯಾಝ್ ಅಮ್ಮೆಮಾರ್, ಸಲೀಂ ಮೆಕ್ಕಾ, ಪದ್ಮನಾಭ ಅಮೀನ್, ಎ.ಸಿ ಜಯರಾಜ್, ಬಿ.ಎಸ್ ಹಸನಬ್ಬ ಅಮ್ಮೆoಬಳ, ನೆಲ್ಸನ್, ಸುಧಾಕರ್ ಜೋಗಿ, ಜಾರ್ಜ್.ಟಿ ವರ್ಗೀಸ್, ಚಂದ್ರಕಲಾ ಜೋಗಿ, ಸುರೇಶ್ ಪೂಜಾರಿ, ಬಿ.ಕೆ ತಾರಾನಾಥ್, ರಾಜೇಶ್. ಐ, ಅಶೋಕ್ ಸುವರ್ಣ, ಜಗದೀಶ್. ಐ ಉಪಸ್ಥಿತರಿದ್ದರು.

ಜಿಲ್ಲಾ ಕಾಂಗ್ರೆಸ್ ಸೇವಾದಳ ಮುಖ್ಯಸ್ಥ ಜೋಕಿಂ ಡಿಸೋಜ ಸ್ವಾಗತಿಸಿದರು. ಮಾಜಿ ಮೇಯರ್ ಶಶಿಧರ್ ಹೆಗ್ಡೆ ವಂದಿಸಿದರು.


Spread the love