ರಾಜ್ಯದಲ್ಲಿ ನಾಳೆ(ಡಿ. 14) ಖಾಸಗಿ ಬಸ್ ಬಂದ್ ಇಲ್ಲ – ಕುಯಿಲಾಡಿ ಸುರೇಶ್ ನಾಯಕ್

Spread the love

ರಾಜ್ಯದಲ್ಲಿ ನಾಳೆ(ಡಿ. 14) ಖಾಸಗಿ ಬಸ್ ಬಂದ್ ಇಲ್ಲ – ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ರಾಜ್ಯದಲ್ಲಿ ಡಿಸೆಂಬರ್ 14 ರಂದು ಯಾವುದೇ ಖಾಸಗಿ ಬಂದ್ ಮಾಡುವುದಿಲ್ಲ, ರಾಜ್ಯಾದ್ಯಂತ ಎಂದಿನಂತೆ 8,500 ಬಸ್ ಓಡಾಡುತ್ತದೆ ಎಂದು ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲಕರ ಒಕ್ಕೂಟ ಖಜಾಂಚಿ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಈ ಕುರಿತು ಉಡುಪಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು ರಾಜ್ಯದಲ್ಲಿ ಡಿಸೆಂಬರ್ 14 ರ ಸೋಮವಾರ ಯಾವುದೇ ರೀತಿಯಲ್ಲಿ ಖಾಸಗಿ ಬಸ್ ಗಳನ್ನು ಬಂದ್ ಮಾಡುವುದಿಲ್ಲ. ಎಂದಿನಂತೆ ರಾಜ್ಯದಾದ್ಯಂತ 8500 ಬಸ್ಸುಗಳು ಓಡಾಡಲಿದ್ದು, ಸರಕಾರದ ಜೊತೆ ಖಾಸಗಿ ಬಸ್ ಗಳು ಬೆಂಬಲವಾಗಿ ನಿಂತಿದೆ ಎಂದರು.

ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲಕರ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ನೀಡಿರುವ ಹೇಳಿಕೆಗೂ ನಮಗೂ ಯಾವುದೇ ಸಂಬಂಧವಿಲ್ಲ ಆದ್ದರಿಂದ ರಾಜ್ಯದ ಪ್ರಯಾಣಿಕರು ಗೊಂದಲಕ್ಕೀಡಾಗುವ ಅಗತ್ಯವಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.


Spread the love