Home Mangalorean News Kannada News ರಾಜ್ಯದಲ್ಲಿ ಮತ್ತೊಬ್ಬ ಪೋಲಿಸ್ ಸಾವು: ಡಿವೈಎಸ್ಪಿ ಗಣಪತಿ ಮಡಿಕೇರಿಯಲ್ಲಿ ಆತ್ಮಹತ್ಯೆ

ರಾಜ್ಯದಲ್ಲಿ ಮತ್ತೊಬ್ಬ ಪೋಲಿಸ್ ಸಾವು: ಡಿವೈಎಸ್ಪಿ ಗಣಪತಿ ಮಡಿಕೇರಿಯಲ್ಲಿ ಆತ್ಮಹತ್ಯೆ

Spread the love

 ರಾಜ್ಯದಲ್ಲಿ ಮತ್ತೊಬ್ಬ ಪೋಲಿಸ್ ಸಾವು: ಡಿವೈಎಸ್ಪಿ ಗಣಪತಿ ಮಡಿಕೇರಿಯಲ್ಲಿ ಆತ್ಮಹತ್ಯೆ

ಮಡಿಕೇರಿ: ಮಂಗಳೂರಿನ ಐಜಿಪಿ ಕಛೇರಿಗೆ ಇತ್ತೀಚೆಗಷ್ಟೇ ಡಿವೈಎಸ್ಪಿ ಆಗಿ ವರ್ಗಾವಣೆಗೊಂಡಿದ್ದ ಗಣಪತಿ (51) ಗುರುವಾರ ಮಡಿಕೇರಿಯ ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

dysp-ganapathi-suicide-02

ಮೂಲತಃ ಕೊಡಗು ಜಿಲ್ಲೆಯವರಾಗಿದ್ದ ಗಣಪತಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ, ಅವರು ಕಳೆದ ಐದು ವರ್ಷಗಳಿಂದ ಸೂಕ್ತ ಹುದ್ದೆಯನ್ನು ನೀಡದಿರುವ, ಬಡ್ತಿ ವಿಚಾರದ ಬಗ್ಗೆಯೂ ನೊಂದಿದ್ದರು ಎಂದು ಹೇಳಲಾಗಿದೆ. ಗಣಪತಿ ಅವರು ಇತ್ತೀಚೆಗೆ ಬೆಂಗಳೂರು ಸಿಸಿಆರ್ ಬಿಯಿಂದ ಮಂಗಳೂರು ಐಜಿಪಿ ಕಚೇರಿಗೆ ಡಿವೈಎಸ್ಪಿಯಾಗಿ ವರ್ಗಾವಣೆಗೊಂಡಿದ್ದರು.

ಪ್ರಾಥಮಿಕ ಮಾಹಿತಿಗಳ ಪ್ರಕಾರ ಮಂಗಳೂರಿನಿಂದ ಮಡೀಕೇರಿಗೆ ಆಗಮಿಸಿ ಬಸ್ ನಿಲ್ದಾಣದ ಬಳಿಯ ವಿನಾಯಕ ಲಾಡ್ಜಿಗೆ ಆಗಮಿಸಿ 10.15 ರ ಸುಮಾರಿಗೆ ಆಗಮಿಸಿ ರೂಮ್ ನಂಬರ್ 315 ರಲ್ಲಿ ವಾಸ್ತವ್ಯ ಹೂಡಿದ್ದರು. ಮಧ್ಯಾಹ್ನದ ಸುಮಾರಿಗೆ ರೂಮಿನಿಂದ ಹೊರಹೋದ ಅವರು ಮಧ್ಯಾಹ್ನದ ವೇಳೆಗೆ ರೂಮಿಗೆ ವಾಪಾಸಾಗಿದ್ದರು. ಸಂಜೆ ರೂಮಿನಲ್ಲಿ ಆತ್ಮಹತ್ಯೆ ಪತ್ರ ಬರೆದಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಕೊಡಗು ಜಿಲ್ಲಾ ಎಸ್ಪಿ ರಾಜೇಂದ್ರ ಪ್ರಸಾದ್ ಹಾಗೂ ಉನ್ನತ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮೃತ ಗಣಪತಿ ಅವರು ಮಂಗಳೂರಿನ ಪುತ್ತೂರು, ಕದ್ರಿ ಮತ್ತು ಬಂಟ್ವಾಳದಲ್ಲಿ  ಎಸ್ ಐ ಆಗಿ ಕರ್ತವ್ಯ ನಿರ್ವಹಿಸಿದ್ದರು. ಶಿಸ್ತಿಗೆ ಹೆಸರುವಾಸಿಯಾಗಿದ್ದ ಗಣಪತಿ ಬೆಂಗಳೂರಿನ ಹಲವು ಠಾಣೆಗಳಲ್ಲಿ ಕೂಡ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ.

1991 ರ ಬ್ಯಾಚಿನಲ್ಲಿ ಪೋಲಿಸ್ ಹುದ್ದೆಗೆ ಬಂದಿದ್ದ ಗಣಪತಿ ಅವರು ಸಬ್ ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. 2001ರಲ್ಲಿ ಇನ್ಸ್ ಪೆಕ್ಟರ್ ಆಗಿ ಭಡ್ತಿ ಪಡೆದ ಗಣಪತಿ, 2016 ರಲ್ಲಿ ಡಿವೈಎಸ್ಪಿಯಾಗಿ ಭಡ್ತಿ ಪಡೆದಿದ್ದರು.


Spread the love

Exit mobile version