ರಾಜ್ಯದಲ್ಲಿ ಸರಕಾರ ಇದೆಯೋ ಇಲ್ಲವೋ ಎಂದು ಜನ ಕೇಳುತ್ತಿದ್ದಾರೆ- ಯು.ಟಿ.ಖಾದರ್

Spread the love

ರಾಜ್ಯದಲ್ಲಿ ಸರಕಾರ ಇದೆಯೋ ಇಲ್ಲವೋ ಎಂದು ಜನ ಕೇಳುತ್ತಿದ್ದಾರೆ- ಯು.ಟಿ.ಖಾದರ್

ಮಂಗಳೂರು: ರಾಜ್ಯದಲ್ಲಿ ಸರಕಾರ ಇದೆಯೋ ಇಲ್ಲವೋ ಎಂದು ಜನ ಕೇಳು ತ್ತಿದ್ದಾರೆ.ರಾಜ್ಯದಲ್ಲಿ ಆಡಳಿತ ಅಷ್ಟು ನಿಷ್ಕ್ರೀಯವಾಗಿದೆ ಎಂದು ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಮತ್ತು ಮಾಜಿ ಸಚಿವ ಯು.ಟಿ. ಖಾದರ್ ಸುದ್ದಿಗೋಷ್ಠಿಯ ಲ್ಲಿಂದು ಟೀಕಿಸಿದ್ದಾರೆ.

ರಾಜ್ಯದಲ್ಲಿ ಆಡಳಿತ ನಡೆಸಿದ ಯಡಿ ಯೂರಪ್ಪ ನೇತ್ರತ್ವದ ಸರಕಾರ ಎಲ್ಲಾ ಕ್ಷೇತ್ರದಲ್ಲೂ ವಿಫಲವಾಗಿದೆ.ಅವರ ಪಕ್ಷದವರೆ ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದಾರೆ.ರಾಜ್ಯಪಾಲರಿಗೆ ದೂರು ನೀಡಿದಗದಾರೆ.ಈ ರೀತಿಯ ಘಟನೆ ಹಿಂದೆಂದು ನಡೆದಿರಲಿಲ್ಲ.ಯಡಿಯೂರಪ್ಪರ ಹೆಸರು ಕೆಡಿಸಲು ಅವರ ಪಕ್ಷದ ಮುಖಂಡರೆ ಮುಂಚೂಣಿಯಲ್ಲಿದ್ದರು.ಲಸಿಕೆ ವಿತರಣೆ ಯಲ್ಲಿ ,ಕೋವಿಡ್ ನಿರ್ವಹಣೆ,ನೆರೆ ಸಂತ್ರಸ್ತರಿ ಗೆ ಪರಿಹಾರ ನೀಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ವೈಫಲ್ಯದ ದುಷ್ಪರಿಣಾಮ ವನ್ನು ಜನತೆ ಅನುಭವಿಸುವಂತಾಗಿದೆ . ಕಾಂಗ್ರೆಸ್ ಸರಕಾರದ ಸಂದರ್ಭದಲ್ಲಿ ಹಮ್ಮಿಕೊಂಡ ಪಲ್ಸ್ ಪೋಲಿಯೋ ಮಾದರಿಯಲ್ಲಿ ರಾಜ್ಯದಲ್ಲಿ ಕೋವಿಡ್ ನಿಯಂತ್ರಣದ ಲಸಿಕೆ ವಿತರಣೆಯಾಗಬೇಕಿತ್ತು ಅದು ಆಗಿಲ್ಲ ಸರಕಾರದ ಬಗ್ಗೆ ಬಿಜೆಪಿ ಹೈ ಕಮಾಂಡ್ ನಿರ್ಲಕ್ಷ್ಯ ಧೋರಣೆ ಹೊಂದಿದೆ. ತಮಿಳು ನಾಡಿಗೆ ಹೆಚ್ಚಿನ ಮನ್ನಣೆ ನೀಡುತ್ತಿದೆ. ರಾಜ್ಯದಲ್ಲಿ ನೆರೆಪರಿಹಾರ, ಜಿಎಸ್ ಟಿ ಪಾಲು ಸಿಗಲಿಲ್ಲ ಇದಕ್ಕೆ ಇಲ್ಲಿಂದ ಆಯ್ಕೆಯಾದ ಸಂಸದರು ಕಾರಣರಾಗಿದ್ದಾರೆ .ಕೋವಿಡ್ ನಿಯಂತ್ರಣದಲ್ಲಾದ ವೈಫಲ್ಯದಿಂದ ಹಲವಾರು ಮಂದಿ ಪ್ರಾಣ ಕಳೆದುಕೊ ಳ್ಳುವಂತಾಯಿತು.ಹಲವು ದೇಶಗಳಿಗೆ ಭಾರತೀಯರ ಪ್ರವೇಶಕ್ಕೆ ನಿರ್ಬಂಧ ವಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಯುವಜನರಿಗೆ ಬ್ಯಾಂಕ್ ಸಾಲ ನೀಡುವ ಸಮಸ್ಯೆ ಪರಿಹರಿಸದಿದ್ದರೆ ಪಕ್ಷದಿಂದ ಕಾನೂನು ರೀತಿಯ ಹೋರಾಟ 
ವಿದ್ಯಾರ್ಥಿಗಳ ಶಿಕ್ಷಣ ಮುಂದುವರಿಕೆಗಾಗಿ ಬ್ಯಾಂಕ್ ಮೂಲಕ ನೀಡುತ್ತಿರುವ ಅರಿವು ಸಾಲಯೋಜನೆ ದೊರೆಯುತ್ತಿಲ್ಲ.ಕೌಶಲ್ಯಾಭಿವ್ರದ್ಧಿಗೆ ಯುವಕರಿಗೆ ನೀಡಬೇಕಾದ ಮುದ್ರಾ ಸಾಲಯೋಜನೆಯ ಹಣವನ್ನು ಕಡಿಮಾಡಿ ಸಮರ್ಪಕವಾಗಿ ಬಿಡುಗಡೆ ಮಾಡುತ್ತಿಲ್ಲ ಈ ರೀತಿಯ ವಿದ್ಯಾರ್ಥಿಗಳಿಗೆ ಯುವ ಜನರಿಗೆ ಆಗುತ್ತಿರುವ ಸಮಸ್ಯೆಗೆ ತಕ್ಷಣ ಸರಕಾರ ಜಿಲ್ಲಾಡಳಿತದ ಮೂಲಕ ಪರಿಹಾರ ನೀಡ ಬೇಕು ಎಂದು ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಮತ್ತು ಮಾಜಿ ಸಚಿವ ಯು.ಟಿ. ಖಾದರ್ ಸುದ್ದಿಗೋಷ್ಠಿಯ ಲ್ಲಿಂದು ಆಗ್ರಸಿದ್ದಾರೆ.

ಅರಿವು ಸಾಲ ಯೋಜನೆ ಸ್ಥಗಿತ ಗೊಂಡು ಪಿಯುಸಿ ಬಳಿಕ ಮೆಡಿಕಲ್ , ಇಂಜಿನಿಯರಿಂಗ್ ವ್ರತ್ತಿ ಶಿಕ್ಷಣ ಮುಂದುವರಿಸ ಬೇಕಾದ ವಿದ್ಯಾರ್ಥಿಗಳು ತೊಂದ ರೆಗೆ ಸಿಲುಕಿದ್ದಾರೆ.ಈ ಬಗ್ಗೆ ಜಿಲ್ಲಾಡಳಿತ ಬ್ಯಾಂಕ್ ಅಧಿಕಾರಿಗಳನ್ನು ಕರೆದು ತಕ್ಷಣ ಸಮಸ್ಯೆ ಬಗೆಹರಿ ಸಬೇಕು.ಮಕ್ಕಳ ಶಿಕ್ಷಣದ ಬಗ್ಗೆ ಖಾಸಗಿ ಶಾಲೆಗಳ ಶುಲ್ಕ ಪಾವತಿಯ ಬಗ್ಗೆ ಸರಕಾರದ ನಿಲುವಿನಲ್ಲಿ ಗೊಂದಲವಿದೆ.ಇದರಿಂದ ಪೋಷಕರು ಮಾನಸಿಕ ಕಿರುಕುಳ ಅನುಭವಿಸುವಂತಾಗಿದೆ.ಸರಕಾರಿ ಶಾಲೆಗಳಿ ಸೇರಲು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ.ಆದರೆ ಸರಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ.ಇದರಿಂದ ವಿದ್ಯಾರ್ಥಿ ಗಳು,ಪೋಷಕರು ಸಮಸ್ಯೆ ಗೆ ಸಿಲುಕಿದ್ದಾರೆ. ತೊಂದರೆಗೀಡಾದ ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ಕಾನೂನು ಬದ್ಧ ವಾಗಿ ಮಾರ್ಗದರ್ಶನ ನೀಡಲು ಸಮಿತಿ ರಚಿಸಿದೆ .ಸರಕಾರವು ಈ ಸಮಸ್ಯೆಗಳನ್ನು ಪರಿಹರಿಸಲು ತಕ್ಷಣ ಸೂಕ್ತ ಕ್ರಮ ಕೈ ಗೊಳ್ಳಬೇಕಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

ಕೌಶಲ್ಯಾಭಿವ್ರದ್ಧಿಗೆ ಬ್ಯಾಂಕ್ ನಿಂದ ನೀಡಬೇಕಾದ ಮುದ್ರಾ ಸಾಲವನ್ನು ಸೂಕ್ತವಾಗಿ ನೀಡದೆ ಯೋಜನಾ ಪ್ರಸ್ತಾವನೆಯಲ್ಲಿ ಕಡಿತಗೊಳಿಸಿ ನೀಡುತ್ತಿರುವುದು ಕಂಡು ಬರುತ್ತಿದೆ.ಈ ಬಗ್ಗೆ ಜಿಲ್ಲಾಡಳಿತ ತಕ್ಷಣ ಗಮನಹರಿಸಬೇಕು ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

ಬೈಕಂಪಾಡಿ ಎಪಿಎಂಸಿಗೆ ರೈತರಿಂದ ಸಂಗ್ರಹಿಸಿದ ಹತ್ತೂವರೆ ಕೋಟಿ ರೂಗಳ ಪ್ರಸ್ತಾವಿತ ಯೋಜನೆಯಿಂದ ಉಪಯೋಗವಿಲ್ಲ 
ಮಂಗಳೂರಿನ ಬೈಕಂಪಾಡಿಯಲ್ಲಿ ಎಪಿಎಂಸಿಯ ಮೂಲಕ ರೈತರಿಂದ ತೆರಿಗೆಯ ಮೂಲಕ ಸಂಗ್ರಹಿಸಿದ ಸುಮಾರು ಹತ್ತೂವರೆ ಕೋಟಿ ರೂಪಾ ಯಿಗಳ ಯೋಜನೆಯ ಮೂಲಕ ಹಣ್ಣು ಹಂಪಲು ಮಾರುಕಟ್ಟೆ ನಿರ್ಮಿಸಲು ಹೊರಟಿರು ವುದು ಒಂದು ವ್ಯರ್ಥ ಯೋಜನೆ.ರೈತರ ಹಣವನ್ನು ಈ ರೀತಿ ಪೋಲು ಮಾಡಬಾರದು.ಈ ಬಗ್ಗೆ ಉನ್ನತ ಮಟ್ಟದ ಸಮಿತಿ ರಚಿಸಿ ವರದಿಯನ್ನು ಸರಕಾರ ತರಿಸಿಕೊಳ್ಳಬೇಕು.ಹಿಂದೆ ಸುಮಾರು 50 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ಎಪಿಎಂಸಿ ಮಾರುಕಟ್ಟೆಯಲ್ಲಿ 668 ಮಳಿಗೆಗಳ ಪೈಕಿ 358 ಬಳಕೆಯಾಗಿಲ್ಲ. ಉಳಿದಂತೆ ಮಳಿಗೆಗಳನ್ನು ಪಡೆದು ಕೊಂಡ ವರಲ್ಲಿ ಶೇ 50 ಆರಂಭ ಗೊಳ್ಳಲಿ ಲ್ಲ.ಆದು ದರಿಂದ ಪ್ರಸ್ತಾಪಿತ ಯೋಜನೆಯ ಬಗ್ಗೆ ತಜ್ಞರ ಉನ್ನತ ಮಟ್ಟದ ಸಮಿತಿಯಿಂದ ಮೌಲ್ಯಮಾ ಪನ ನಡೆಯಬೇಕಾಗಿದೆ.ಅಲ್ಲಿನ ಎಪಿಎಂಸಿಗೆ ರೈತರು,ವರ್ತಕರು ಏಕೆ ಬರುತ್ತಿಲ್ಲ.ಯಾವ ಸಮಸ್ಯೆ ಇದೆ ಎಂದು ತಿಳಿದುಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳಲು ಸರಕಾರ ಕ್ರಮ ಕೈ ಗೊಳ್ಳಬೇಕು ಎಂದು ಯು‌.ಟಿ.ಖಾದರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ತಾಲೂಕು ಪಂಚಾಯತ್ ನ ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು, ಕಾಂಗ್ರೆಸ್ ಮುಖಂಡರಾದ ಈಶ್ವರ ಉಳ್ಳಾಲ್,ದಿನೇಶ್ ಕುಂಪಲ,ದೇವಾನಂದ ಶೆಟ್ಟಿ, ಜಕ್ರಿಯ ಮಲ್ಹಾರ್,ಮುರಳೀಧರ ಶೆಟ್ಟಿ, ಶೋಭ ಕೊಣಾಜೆ,ಸಿದ್ಧಿಕ್ ಪಾರೆ ಮೊದಲಾದ ವರು ಉಪಸ್ಥಿತರಿದ್ದರು.


Spread the love

1 Comment

Comments are closed.