ರಾಜ್ಯ ಬಜೆಟ್ ನಲ್ಲಿ ದ.ಕ.ಜಿಲ್ಲೆಗೆ ಯಾವುದೇ ವಿಶೇಷ ಪ್ರಾತಿನಿಧ್ಯವನ್ನು ನೀಡಲಾಗಿಲ್ಲ — ಶೌವಾದ್ ಗೂನಡ್ಕ

Spread the love

ರಾಜ್ಯ ಬಜೆಟ್ ನಲ್ಲಿ ದ.ಕ.ಜಿಲ್ಲೆಗೆ ಯಾವುದೇ ವಿಶೇಷ ಪ್ರಾತಿನಿಧ್ಯವನ್ನು ನೀಡಲಾಗಿಲ್ಲ — ಶೌವಾದ್ ಗೂನಡ್ಕ

ಮಂಗಳೂರು:  ದ.ಕ.ಜಿಲ್ಲೆಯಲ್ಲಿ ಬಿ.ಜೆ.ಪಿ.ಪಕ್ಷದ 7 ಶಾಸಕರುಗಳು ಇದ್ದರು ಕೂಡ ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್ ನಲ್ಲಿ ನಮ್ಮ ಜಿಲ್ಲೆಗೆ ಯಾವುದೇ ಜನಪರ ಯೋಜನೆಗಳನ್ನು ಘೋಷಿಸಲಾಗಿಲ್ಲ.. ಜಿಲ್ಲೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕಾದ ಬಿ.ಜೆ.ಪಿ.ಶಾಸಕರುಗಳು ಸಂಪೂರ್ಣ ವಿಫಲರಾಗಿದ್ದಾರೆಂದು ಕೆ.ಪಿ.ಸಿ.ಸಿ.ಮಾಧ್ಯಮ ವಕ್ತಾರ ಶೌವಾದ್ ಗೂನಡ್ಕ ಹೇಳಿದ್ದಾರೆ.

ದೇಶದ ಶೈಕ್ಷಣಿಕ ಕೇಂದ್ರಗಳಲ್ಲಿ ಒಂದಾಗಿರುವ ಮಂಗಳೂರಿನಲ್ಲಿ ಉದ್ಯೋಗ ಸೃಷ್ಠಿಯ ಬಗ್ಗೆ ಯಾವುದೇ ಕ್ರಮತೆಗೆದುಕೊಳ್ಳಲಾಗಿಲ್ಲ, ಆರೋಗ್ಯ ಕ್ಷೇತ್ರಗಳಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಯಾವುದೇ ಯೋಜನೆಗಳು ಘೋಷಣೆಯಾಗಿಲ್ಲ. ಬಿ.ಜೆ.ಪಿ.ಯು ದ.ಕ. ಜಿಲ್ಲೆಯನ್ನು ಕೋಮು ರಾಜಕಾರಣದ ಪ್ರಯೋಗಶಾಲೆಯಾಗಿ ಬಳಸುತ್ತಿದೆಯೇ ಹೊರತು ಇಲ್ಲಿನ ಅಭಿವೃದ್ಧಿಗೆ ಯಾವುದೇ ಕೊಡುಗೆಗಳನ್ನು ನೀಡಿಲ್ಲ, ಈ ಬಾರಿಯು ಕೂಡ ಬಿ.ಜೆ.ಪಿ.ಸರ್ಕಾರದ ಬಜೆಟ್ ನಮ್ಮ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ದೂರದೃಷ್ಠಿಯನ್ನು ಹೊಂದಿಲ್ಲವೆಂದು ಅವರು ದೂರಿದ್ದಾರೆ. ರಾಜ್ಯದಲ್ಲಿ ಕಳೆದ ಬಾರಿ ಕಾಂಗ್ರೆಸ್ ಸರ್ಕಾರವಿದ್ದ ಸಂದರ್ಭದಲ್ಲಿ ನಮ್ಮ ಜಿಲ್ಲೆಯಲ್ಲಿ 7 ಕಾಂಗ್ರೆಸ್ ಶಾಸಕರುಗಳು ಇದ್ದರು ಆ ವೇಳೆ ಜಿಲ್ಲೆಯು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿತ್ತು, ಆದರೆ ಪ್ರಸ್ತುತ ಇರುವ ಬಿ.ಜೆ.ಪಿ.ಶಾಸಕರುಗಳು ಕೇವಲ ಹೇಳಿಕೆಗಳಿಗೆ ಹಾಗೂ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದ್ದಾರೆಂದು ಶೌವಾದ್ ಗೂನಡ್ಕ ಆರೋಪಿಸಿದ್ದಾರೆ.


Spread the love