ರಾಜ್ಯ ಮಟ್ಟದ ಕರೋಕೆ ಗಾಯನ ಸ್ಪರ್ಧೆಯಲ್ಲಿ ಪೂರ್ವಿ ಶೆಟ್ಟಿ ಮಣಿಪಾಲ ಪ್ರಥಮ

Spread the love

ರಾಜ್ಯ ಮಟ್ಟದ ಕರೋಕೆ ಗಾಯನ ಸ್ಪರ್ಧೆಯಲ್ಲಿ ಪೂರ್ವಿ ಶೆಟ್ಟಿ ಮಣಿಪಾಲ ಪ್ರಥಮ

ನಾವುಂದ ಮಸ್ಕಿಯ ಶ್ರೀ ದುರ್ಗಾಪರಮೇಶ್ವರಿ ಕಲಾನಿಕೇತನ ಸಂಗೀತ ಶಾಲೆಯ ಆಶ್ರಯದಲ್ಲಿ ಇಲ್ಲಿನ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಕರೋಕೆ ಗಾಯನ ಸ್ಪರ್ಧೆಯಲ್ಲಿ ಪೂರ್ವಿ ಶೆಟ್ಟಿ ಮಣಿಪಾಲ ಪ್ರಥಮ ಸ್ಥಾನಿಯಾಗಿ ರೂ 10,000 ನಗದು ಮತ್ತು ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.

ಎರಡನೆ ಬಹುಮಾನವಾದ ರೂ 7,000 ನಗದು ಹಾಗೂ ಟ್ರೋಪಿಯನ್ನು ü ಬೀದರ್‍ನ ಕೃಷ್ಣ ಗೆದ್ದುಕೊಂಡರೆ, ಅಮೃತಾ ಜಿ, ಉಡುಪಿ ತೃತೀಯ ಬಹುಮಾನವಾದ ರೂ 5,000 ಮತ್ತು ಟ್ರೋಫಿ ಗಳಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಅಪೂರ್ವಾ ಅವಭೃತ್, ವಿನುಷ್ ಭಾರದ್ವಾಜ್ ತೀರ್ಪುಗಾರರಾಗಿದ್ದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಮಾತನಾಡಿ ಶ್ರದ್ಧೆ, ಶ್ರಮ ಮತ್ತು ಸತತ ಅಭ್ಯಾಸದಿಂದ ಮಾತ್ರ ಸಂಗೀತವನ್ನು ಒಲಿಸಿಕೊಳ್ಳಬಹುದು. ಶಾಸ್ತ್ರೀಯ ಸಂಗೀತ ಕಲಿಯುವವರು ಕರವೋಕೆ ಹಾಡುಗಾರಿಕೆಯಿಂದ ದೂರ ಉಳಿಯುವುದು ಒಳ್ಳೆಯದು ಎಂದರು. ಡಾ. ಸುರೇಶ್‍ಕುಮಾರ ಶೆಟ್ಟಿ ನಾಡ, ಮಂಜುನಾಥ ಸಾಲಿಯಾನ್ ತ್ರಾಸಿ, ಸುಭಾಶ್ಚಂದ್ರ ಶೆಟ್ಟಿ ವಂಡ್ಸೆ ಅತಿಥಿಗಳಾಗಿದ್ದರು.

ಸಂಗೀತ ಗುರು ವಿದ್ವಾನ್ ಶರತ್ ನಾಡ ಸ್ವಾಗತಿಸಿದರು. ಶಿಕ್ಷಕ ಮಹಾಬಲ ಕೆ ವಂದಿಸಿದರು. ನಾಗರಾಜ ದೇವಳಿ ನಿರೂಪಿಸಿದರು. ಶಂಭು ಗುಡ್ಡಮ್ಮಾಡಿ ಸಹಕರಿಸಿದರು. ಬಿಡುವಿನ ವೇಳೆ ಶರತ್ ನಾಡ ಮತ್ತು ಅವರ ಶಿಷ್ಯರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತÀ ಪ್ರಸ್ತುತಪಡಿಸಿದರು.


Spread the love