ರಾಜ್ಯ ಮಟ್ಟದ ಬಾಲ್‍ಬ್ಯಾಡ್ಮಿಂಟನ್– ಆಳ್ವಾಸ್‍ಗೆ ಪ್ರಶಸ್ತಿ

Spread the love

ರಾಜ್ಯ ಮಟ್ಟದ ಬಾಲ್‍ಬ್ಯಾಡ್ಮಿಂಟನ್– ಆಳ್ವಾಸ್‍ಗೆ ಪ್ರಶಸ್ತಿ

ಮೂಡುಬಿದಿರೆ: ಟೌನರ್ಸ್ ಬಾಲ್‍ಬ್ಯಾಡ್ಮಿಂಟನ್ ಕ್ಲಬ್(ರಿ.)ಹಾಗೂ ಚಿತ್ರದುರ್ಗ ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆ ಆಶ್ರಯದಲ್ಲಿ ಚಿತ್ರದುರ್ಗದ ಚಳ್ಳೆಕೆರೆಯಲ್ಲಿ ಮುಕ್ತಾಯಗೊಂಡ ರಾಜ್ಯ ಮಟ್ಟದ ಆಹ್ವಾನಿತ ಪುರುಷರ ಬಾಲ್‍ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೂಡಬಿದಿರೆಯ ಆಳ್ವಾಸ್ ಪುರುಷರ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಈ ಟೂರ್ನಿಯ ಫೈನಲ್ಸ್‍ನಲ್ಲಿ ಆಳ್ವಾಸ್ ಪುರುಷರ ತಂಡ ತುಮಕೂರಿನ ಗಾಂಧಿನಗರ ತಂಡವನ್ನು 35-24, 35-20 ಅಂಕಗಳಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಸೆಮಿಫೈನಲ್ಸ್‍ನಲ್ಲಿ ಆಳ್ವಾಸ್ ಪುರುಷರ ತಂಡ ಸಹ್ಯಾದ್ರಿ ಬಾಲ್‍ಬ್ಯಾಡ್ಮಿಂಟನ್ ಕ್ಲಬ್ ತಂಡವನ್ನು 35-26, 31-35, 35-24 ಅಂಕಗಳಿಂದ ಹಾಗೂ ತುಮಕೂರಿನ ಗಾಂಧಿನಗರ ತಂಡ ಮೈಸೂರಿನ ಸ್ಕಲ್ವಿಅಸ್ತ್ರ ತಂಡವನ್ನು 35-26, 38-36 ಅಂಕಗಳಿಂದ ಸೋಲಿಸಿ ಫೈನಲ್ಸ್‍ಗೆ ಅರ್ಹತೆಯನ್ನು ಪಡೆದುಕೊಂಡಿತ್ತು.


Spread the love