ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟ- ಉಡುಪಿ, ದ.ಕ. ಬಾಲಕಿಯರ ತಂಡ ಸೆಮಿಫೈನಲಿಗೆ

Spread the love

ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟ- ಉಡುಪಿ, ದ.ಕ. ಬಾಲಕಿಯರ ತಂಡ ಸೆಮಿಫೈನಲಿಗೆ 

ಕುಂದಾಪುರ: ಸುಣ್ಣಾರಿಯ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬಾಲಕಿಯರ ವಿಭಾಗದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪದವಿ ಪೂರ್ವ ಕಾಲೇಜು ತಂಡಗಳು ಸೆಮಿ ಫೈನಲಿಗೆ ಪ್ರವೇಶಿಸಿದೆ.

ಸೆಮಿಫೈನಲ್ ನಲ್ಲಿ ಉಡುಪಿಯ ಬಾಲಕಿಯರ ತಂಡವು ವಿಜಯನಗರ ತಂಡವನ್ನ ಹಾಗೂ ದಕ್ಷಿಣ ಕನ್ನಡ ತಂಡ ಮೈಸೂರು ತಂಡವನ್ನು ಎದುರಿಸಲಿದೆ.

ಬಾಲಕರ ವಿಭಾಗ :
ಬಾಲಕರ ವಿಭಾಗದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ತಂಡಗಳೆರಡು ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದ್ದು, ಇದರೊಂದಿಗೆ ಚಿಕ್ಕಮಗಳೂರು, ಉತ್ತರ ಕನ್ನಡ, ಚಾಮರಾಜನಗರ, ಗದಗ, ತುಮಕೂರು ಹಾಗೂ ಮೈಸೂರು ಜಿಲ್ಲೆಗಳ ತಂಡಗಳು ಕ್ವಾರ್ಟರ್ ಫೈನಲಿಗೆ ಪ್ರವೇಶ ಪಡೆದುಕೊಂಡಿದೆ.

ಪಂದ್ಯಾಟದ ಬಾಲಕರ ವಿಭಾಗದಲ್ಲಿ 33 ಜಿಲ್ಲೆಯ ಹಾಗೂ ಬಾಲಕಿಯರ ವಿಭಾಗದಲ್ಲಿ 32 ತಂಡಗಳು ಭಾಗವಹಿಸಿದ್ದು, 750 ಕ್ಕೂ ಮಿಕ್ಕಿ ಆಟಗಾರರು ಪಾಲ್ಗೊಂಡಿದ್ದಾರೆ.

ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಾಟಗಳು ಡಿ. 10 ರಂದು ನಡೆಯಲಿದೆ.

ಗಮನಸೆಳೆದ ಕುಟ್ಟಪ್ಪ :
ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಆಟಗಾರ ಕುಟ್ಟಪ್ಪ ಅವರು ಕೃತಕ ಕಾಲಿನೊಂದಿಗೆ ಅದ್ಭುತ ಆಟ ಪ್ರದರ್ಶಿಸಿ, ಎಲ್ಲರ ಪ್ರಶಂಸೆಗೆ ಪಾತ್ರರಾದ ಕುಟ್ಟಪ್ಪ ಅವರನ್ನು ಸುಜ್ನಾನ ಎಜುಕೇಷನ್ ಟ್ರಸ್ಟ್ ವತಿಯಿಂದ ಗೌರವಿಸಲಾಯಿತು.

ಅಚ್ಚುಕಟ್ಟು ವ್ಯವಸ್ಥೆ :
ಊಟೋಪಚಾರ, ವಸತಿ, ಸ್ವಚ್ಚತೆ, ಕ್ರೀಡಾಂಗಣ ಸೇರಿದಂತೆ ಪಂದ್ಯಾಟದ ಯಶಸ್ಸಿಗೆ ಮಾಡಲಾದ ಒಟ್ಟಾರೆ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಧಾನ ತೀರ್ಪುಗಾರರಾದ ಉಡುಪಿ ಜಿಲ್ಲಾ ಪದವಿ ಪೂರ್ವ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಜೀವನ್ ಕುಮಾರ್ ಶೆಟ್ಟಿ ಹರ್ಕೂರು, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ, ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ರಮೇಶ್ ಶೆಟ್ಟಿ, ಸುಜ್ನಾನ್ ಎಜುಕೇಷನ್ ಟ್ರಸ್ಟ್‌ ನ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಕೋಶಾಧಿಕಾರಿ ಭರತ್ ಶೆಟ್ಟಿ ಇದ್ದರು.


Spread the love