ರಾಜ್ಯ ಸರಕಾರ ಉಚಿತ ಲಸಿಕೆ ನೀಡಲು ವಿಫಲ-ಬಿಜೈ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಐವನ್ ನೇತೃತ್ವದಲ್ಲಿ ಪ್ರತಿಭಟನೆ  

Spread the love

ರಾಜ್ಯ ಸರಕಾರ ಉಚಿತ ಲಸಿಕೆ ನೀಡಲು ವಿಫಲ-ಬಿಜೈ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಐವನ್ ನೇತೃತ್ವದಲ್ಲಿ ಪ್ರತಿಭಟನೆ  

ರಾಜ್ಯ ಸರಕಾರ ಉಚಿತ ಲಸಿಕೆ ನೀಡುತ್ತೇವೆಂದು, ಜನರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೆಳಗ್ಗಿನ ಜಾವ ೪.೩೦ಗಂಟೆಗೆ ಕರೆಯಿಸಿ, ೫೦೦ ಜನ ಸೇರಿದ ಮೇಲೆ ಕೇವಲ ೧೫೦ ಜನರಿಗೆ ಟೋಕನ್‌ಗಳನ್ನು ನೀಡಿ, ಮಂಗಳೂರು ನಗರಾದ್ಯAತದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನರನ್ನು ಸಂಕಟಕ್ಕೀಡು ಮಾಡುತ್ತಿರುವುದನ್ನು ವಿರೋಧಿಸಿ, ಬೆಳಗ್ಗಿನ ಜಾವ ಮಾಜಿ ಶಾಸಕ ಶ್ರೀ ಐವನ್ ಡಿ ಸೋಜರವರು ಇಂದು ಬಿಜೈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಮ್ಮ ತಂಡದೊAದಿಗೆ ಭೇಟಿ ನೀಡಿ, ನೆರೆದ ಜನರಿಗೆ ಸಮಧಾನಪಡಿಸಿ, ಸರಕಾರದ ಕ್ರಮದ ಬಗ್ಗೆ ಸ್ಥಳದಲ್ಲಿಯೇ ಪ್ರತಿಭಟನೆಯನ್ನು ನಡೆಸಿದರು.

ಸರಕಾರ ಜನರ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ. ಖಾಸಗಿಯಲ್ಲಿ ಲಸಿಕೆ ಸಿಗುತ್ತಿದ್ದು, ಸರಕಾರದ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಲಸಿಕೆಗೆ ರೇಶನ್ ರೀತಿಯಲ್ಲಿ ನೀಡುತ್ತಿರುವುದು ಖಂಡನೀಯ. ಲಸಿಕೆ ವಿತರಣೆಯಲ್ಲೂ ವ್ಯಾಪಾರ ಮಾಡಿ ಹಣ ಗಳಿಸುತ್ತಿರುವ ಬಿಜೆಪಿ ಶಾಸಕರಿಗೆ, ಸಂಸದರಿಗೆ ಜನ ಶಾಪ ಹಾಕುತ್ತಿದ್ದಾರೆ.

ಲಸಿಕೆ ಇಲ್ಲದೇ ಸಾಯುತ್ತಿದ್ದರೂ, ಬಿಜೆಪಿ ಮಾತ್ರ ವ್ಯಾಪಾರ ಮಾಡುತ್ತಿದೆ. ಸಂಭ್ರಮ ಆಚರಣೆ ಮಾಡುತ್ತಿದೆ. ಬಿಜೆಪಿಗೆ ಜನ ಬುದ್ಧಿ ಕಲಿಸುತ್ತಾರೆ. ಜನರನ್ನು ನಿರ್ಲಕ್ಷಿಸಿದರೆ ಜನರು ಸುಮ್ಮನಿರುವುದಿಲ್ಲ. ನಮಗೆ ಜನರ ಜೀವ ಮುಖ್ಯ ಎಂದು ಶ್ರೀ ಐವನ್ ಡಿ ಸೋಜರವರು ಪ್ರತಿಭಟನೆಯನ್ನು ಉದ್ಘಾಟಿಸಿ, ಮಾತನಾಡುತ್ತಾ ತಿಳಿಸಿದರು.

ಸೇರಿದ ಎಲ್ಲರಿಗೂ ಲಸಿಕೆ ಕೂಪನ್ ನೀಡುವಂತೆ ಸ್ಥಳದಿಂದಲೇ ಅಧಿಕಾರಿಗಳಿಗೆ ಮಾತನಾಡಿ, ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಪ್ರತಿಭಟನಾ ಸಂಭ್ರಮದಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕಾರ್ಪೋರೇಟರ್ ನವೀನ್ ಡಿ ಸೋಜ, ಮಾಜಿ ಕಾರ್ಪೋರೇಟರ್ ರಜನೀಶ್, ಪ್ರಕಾಶ್ ಸಾಲಿಯಾನ್, ಕುಮಾರಿ ಅಪ್ಪಿಲತಾ, ಅಶೋಕ್ ಡಿ.ಕೆ., ಮಹಮ್ಮದ್ ಕುಂಜತ್ತ್ ಬೈಲ್, ಭಾಸ್ಕರ್ ರಾವ್, ಅಶಿತ್ ಪಿರೇರಾ, ದೀಕ್ಷಿತ್ ಅತ್ತಾವರ, ಆಲಿಸ್ಟನ್ ಡಿ ಕುನ್ಹಾ, ಹಾಗೂ ಕಾಂಗ್ರೆಸ್ಸಿನ ಕಾಯಕರ್ತರು, ಸ್ಥಳೀಯರುಗಳು ಉಪಸ್ಥಿತರಿದ್ದರು.


Spread the love