ರಾಡ್ ನಿಂದ ತಲೆಗೆ ಹಲ್ಲೆ: ಮಹಿಳೆಯ ಚಿನ್ನಾಭರಣ ಎಗರಿಸಿ‌ ಪರಾರಿ

Spread the love

ರಾಡ್ ನಿಂದ ತಲೆಗೆ ಹಲ್ಲೆ: ಮಹಿಳೆಯ ಚಿನ್ನಾಭರಣ ಎಗರಿಸಿ‌ ಪರಾರಿ

ಕುಂದಾಪುರ: ಶಾಲೆಯಿಂದ ಬರುವ ಮಕ್ಕಳನ್ನು ಕರೆದೊಯ್ಯಲು ರಸ್ತೆ ಬದಿ ನಿಂತಿದ್ದ ವೇಳೆಯಲ್ಲಿ ಮಹಿಳೆಯ ತಲೆಗೆ ವ್ಯಕ್ತಿಯೋರ್ವ ರಾಡ್ ನಿಂದ ಹಲ್ಲೆ ನಡೆಸಿ ಚಿನ್ನಾಭರಣವನ್ನು ಎಗರಿಸಿದ ಕಳವಳಕಾರಿ ಘಟನೆ ತಾಲೂಕಿನ ಕೊರ್ಗಿ ಗ್ರಾ.ಪಂ ವ್ಯಾಪ್ತಿಯ ಕಾಡಿನಬೆಟ್ಟುವಿನ ದಬ್ಬೆಕಟ್ಟೆ ಮುಖ್ಯ ರಸ್ತೆಯಲ್ಲಿ ನಡೆದಿದೆ.

ಕೊರ್ಗಿ ನಿವಾಸಿ ದೇವಕಿ(33) ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶಾಲಾ ವಾಹನದಲ್ಲಿ ಮಕ್ಕಳ ಬರುವಿಕೆಗಾಗಿ ಕಾಯುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿ ಬೈಕ್‌ನಲ್ಲಿ ಬಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ‌. ಘಟನೆಯಲ್ಲಿ ತಲೆಗೆ ಗಂಭೀರ ಗಾಯಗೊಂಡು ತೀವ್ರ ರಕ್ತಸ್ರಾವದಿಂದ ಬಿದ್ದಿದ್ದ ದೇವಕಿ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕುಂದಾಪುರ ಗ್ರಾಮಾಂತರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.


Spread the love

Leave a Reply

Please enter your comment!
Please enter your name here