ರಾತ್ರಿ ಹೊತ್ತಲ್ಲಿ ಮಹಿಳಾ ಹೋರಾಟಗಾರ್ತಿ ಮನೆಗೆ ಪೊಲೀಸರು ನೋಟಿಸ್ ನೀಡಿದ್ದು ಖಂಡನೀಯ – ಶಾಲೆಟ್ ಪಿಂಟೊ

Spread the love

ರಾತ್ರಿ ಹೊತ್ತಲ್ಲಿ ಮಹಿಳಾ ಹೋರಾಟಗಾರ್ತಿ ಮನೆಗೆ ಪೊಲೀಸರು ನೋಟಿಸ್ ನೀಡಿದ್ದು ಖಂಡನೀಯ – ಶಾಲೆಟ್ ಪಿಂಟೊ

ಮಂಗಳೂರು: ಮಹಿಳಾ ಕಾಂಗ್ರೆಸ್ ನಾಯಕಿ ಹಾಗೂ ಸುರತ್ಕಲ್ ಟೋಲ್ ಹೋರಾಟ ಸಮಿತಿಯ ಮಹಿಳಾ ಸದಸ್ಯರ ಮನೆಗೆ ಪೊಲೀಸರು ರಾತ್ರಿ ಹೊತ್ತಲ್ಲಿ ಹೋಗಿ ನೋಟಿಸ್ ಹಾಗೂ ಮಾನಸಿಕ ಕಿರುಕುಳ ನೀಡಿದ್ದನ್ನು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಖಂಡಿಸುತ್ತದೆ ಎಂದು ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ ತಿಳಿಸಿದ್ದಾರೆ

ಮಹಿಳಾ ಸದಸ್ಯರ ಮನೆಗೆ ರಾತ್ರಿ ಹೊತ್ತಿನಲ್ಲಿ ಹೋಗಿ ಕಿರುಕುಳ ನೀಡುವ ಜರೂರು ಏನಿತ್ತು?
ಇದು ಬಿಜೆಪಿ ಶಾಸಕರು ಹಾಗೂ ಎಂ.ಪಿ ಅವರ ಕುಮ್ಮಕ್ಕಿನಿಂದ ನಡೆದ ಕೃತ್ಯವಲ್ಲವೇ ? ಇವರಿಗೆ ನೋಟಿಸ್ ನೀಡಲು ಮಧ್ಯರಾತ್ರಿಯೇ ಬೇಕಾಯಿತೇ? ಹೋರಾಟ ಸಮಿತಿಯವರು ಕ್ರಿಮಿನಲ್ ಹಿನ್ನೆಲೆ ಉಳ್ಳವರೇ? ಇದನ್ನು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಉಗ್ರವಾಗಿ ಖಂಡಿವುದಾಗಿ ಎಂದು ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


Spread the love