Home Mangalorean News Kannada News ರಾಮಕೃಷ್ಣ ಮಿಷನ್ ಐದನೇ ಹಂತದ ಸ್ವಚ್ಛ ಮಂಗಳೂರು ಶ್ರಮದಾನದ 6 ನೇ ಭಾನುವಾರದ ವರದಿ

ರಾಮಕೃಷ್ಣ ಮಿಷನ್ ಐದನೇ ಹಂತದ ಸ್ವಚ್ಛ ಮಂಗಳೂರು ಶ್ರಮದಾನದ 6 ನೇ ಭಾನುವಾರದ ವರದಿ

Spread the love

ರಾಮಕೃಷ್ಣ ಮಿಷನ್ ಐದನೇ ಹಂತದ ಸ್ವಚ್ಛ ಮಂಗಳೂರು ಶ್ರಮದಾನದ 6 ನೇ ಭಾನುವಾರದ ವರದಿ

ಮಂಗಳೂರು : ಐದನೇ ಹಂತದ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ ಪ್ರಯುಕ್ತ ಹಮ್ಮಿಕೊಳ್ಳಲಾಗುತ್ತಿರುವ 6ನೇ ಭಾನುವಾರದ ಶ್ರಮದಾನವನ್ನು ಕೆಪಿಟಿ ಸುತ್ತಮುತ್ತಲಿನ ಪರಿಸರದಲ್ಲಿ ಆಯೋಜಿಸಲಾಗಿತ್ತು.

13-1-2019 ಆದಿತ್ಯವಾರದಂದು ಬೆಳಿಗ್ಗೆ 7-30 ಕ್ಕೆ ಕೆಪಿಟಿ ಜಂಕ್ಷನ್ನಅಲ್ಲಿ ಶ್ರಮದಾನಕ್ಕೆ ಮಹಾನಗರ ಪಾಲಿಕೆಯ ಪರಿಸರ ಅಭಿಯಂತರರಾದ ಮಧು ಎಸ್ ಮನೋಹರ್ ಹಾಗೂ ಕರ್ನಾಟಕ ಪಾಲಿಟೆಕ್ನಿಕ್ ಎನ್ನೆಸ್ಸೆಸ್ ಸಹ ಕಾರ್ಯಕ್ರಮ ಅಧಿಕಾರಿ ಶ್ರೀ ಸೂರಜ್ ಪಿ ಎಚ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಧು ಎಸ್ ಮನೋಹರ್,

“ಮಹಾನಗರ ಪಾಲಿಕೆಯಿಂದ ಈಗಾಗಲೇ ತ್ಯಾಜ್ಯವನ್ನು ಮನೆಮನೆಯಿಂದ ಸಂಗ್ರಹ ಮಾಡುತ್ತಿದ್ದಾಗ್ಯೂ ಕೆಲವು ಜನರು ರಸ್ತೆ ಬದಿಯಲ್ಲಿ ಕಸಬಿಸಾಡುವ ದುರಭ್ಯಾಸವನ್ನು ಮುಂದುವರೆಸಿದ್ದರು. ಆದರೆ ರಾಮಕೃಷ್ಣ ಮಿಷನ್ನಿಂ ದ ನಡೆಯುತ್ತಿರುವ ಈ ಅಭಿಯಾನದ ಫಲಸ್ವರೂಪವಾಗಿ ಜನರಲ್ಲಿ ಜಾಗೃತಿ ಮೂಡಿರುವುದು ಹಾಗೂ ತನ್ಮೂಲಕ ತ್ಯಾಜ್ಯವನ್ನು ರಸ್ತೆ ಬದಿ ಬಿಸಾಡುವುದು ಕಡಿಮೆಯಾಗಿರುವುದು ಇಂದು ಸ್ಪಷ್ಟವಾಗಿ ಕಾಣುತ್ತಿದೆ. ಪ್ರತಿ ಕಿಲೋಗ್ರಾಮ ತ್ಯಾಜ್ಯ ನಿರ್ವಹಣೆಗೆ ಪಾಲಿಕೆ ನಾಲ್ಕು ರೂಪಾಯಿಯಂತೆ ವರ್ಷಕ್ಕೆ ಮೂವತ್ತರಿಂದ ನಲವತ್ತು ಕೋಟಿಯಷ್ಟು ಹಣವನ್ನು ವ್ಯಯಿಸುತ್ತಿದೆ. ಆದರೆ ರಾಮಕೃಷ್ಣ ಮಿಷನ್ನಿಂ ದ ಕೊಡಮಾಡುತ್ತಿರುವ ಮಡಕೆಗಳಲ್ಲಿ ಜನರು ಹಸಿಕಸವನ್ನು ನಿರ್ವಹಿಸಿ ಗೊಬ್ಬರ ತಯಾರಿಸಿದ್ದೇ ಆದರೆ ಪಾಲಿಕೆಯ ಮೇಲಿನ ಹೊರೆ ಕಡಿಮೆಯಾಗುತ್ತದೆ. ಆದ್ದರಿಂದ ಈ ಕುರಿತು ಪಾಲಿಕೆಯು ರಾಮಕೃಷ್ಣ ಮಿಷನ್ ಜೊತೆಗೂಡಿ ಕಾರ್ಯನಿರ್ವಹಿಸಲು ಉತ್ಸುಕವಾಗಿದೆ ಅಷ್ಟೇ ಅಲ್ಲದೇ ಹಸಿಕಸ ಒಣಕಸವನ್ನು ಮನೆಮಟ್ಟದಲ್ಲಿ ನಿರ್ವಹಿಸುವವರಿಗೆ ಪಾಲಿಕೆಯಿಂದ ತ್ಯಾಜ್ಯ ನಿರ್ವಹಣಾ ಶುಲ್ಕವನ್ನು ಕಡಿತಗೊಳಿಸುವ ನಿಟ್ಟಿನಲ್ಲಿಯೂ ಗಂಭೀರವಾಗಿ ಯೋಚಿಸಲಾಗುತ್ತಿದೆ.” ಎಂದು ತಿಳಿಸಿದರು.

ಇದಕ್ಕೂ ಮುನ್ನ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕಾರ್ಯಕರ್ತರನ್ನು ಹಾಗೂ ಅತಿಥಿಗಳನ್ನು ಸ್ವಾಗತಿಸಿದರು. ಅಭಿಯಾನದ ಸಂಚಾಲಕರಾದ ಸ್ವಾಮಿ ಏಕಗಮ್ಯಾನಂದಜಿ ಕಾರ್ಯಕರ್ತರಿಗೆ ಶ್ರಮದಾನದ ಕುರಿತು ಮಾರ್ಗದರ್ಶನ ನೀಡಿದರು. ಜಯಕೃಷ್ಣ ಬೇಕಲ್, ಉಷಾ ಅಮೃತಕುಮಾರ, ಗುರುದತ್ತ ಶೆಣೈ, ಶ್ರೀಮತಿ ಮಣಿ ರೈ, ಜಗನ್ ಕೋಡಿಕಲ್, ಸಂತೋಷ ಸುವರ್ಣ, ಇನ್ನಿತರರು ಭಾಗವಹಿಸಿದ್ದರು

ಸ್ವಚ್ಛತೆ : ಕೆಪಿಟಿ ಎನ್ನೆಸ್ಸೆಸ್ ವಿದ್ಯಾರ್ಥಿಗಳು ರಾಜೇಂದ್ರ ಸುಬ್ರಮಣ್ಯ ನೇತೃತ್ವದಲ್ಲಿ ಏರಪೆÇೀರ್ಟ್ ರಸ್ತೆ, ಕೆಪಿಟಿ ಗೇಟ್ ಮುಂಭಾಗ ಹಾಗೂ ಪಾದಚಾರಿ ಮಾರ್ಗಗಳನ್ನು ಶುಚಿಗೊಳಿಸಿದರು. ವಸಂತಿ ನಾಯಕ್ ಹಾಗೂ ನಿವೇದಿತ ಬಳಗದ ಸದಸ್ಯರು ಕೆಪಿಟಿಯಿಂದ ಪದುವಾ ಹೋಗುವ ಎಡಬದಿಯ ಮಾರ್ಗಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ಪೇ್ಪರ್ಗಣಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು. ಮಸಾಹಿರೋ ಹಾಗೂ ಸ್ವಚ್ಛ ಮಂಗಳೂರು ಹಿರಿಯ ಕಾರ್ಯಕರ್ತರು ಕೆಪಿಟಿ ವೃತ್ತದ ಸುತ್ತಮುತ್ತ ಶ್ರಮದಾನ ಕೈಗೊಂಡರು. ಉಪನ್ಯಾಸಕಿ ಸುಭದ್ರಾ ಭಟ್ ಹಾಗೂ ಯುವತಿಯರು ಹೆದ್ದಾರಿಯ ಬದಿಗಳನ್ನು ಕಸಗುಡಿಸಿ ಹಸನುಗೊಳಿಸಿದರು. ಏರ್ಪೆತÇೀರ್ಟ್ ರಸ್ತೆಯಲ್ಲಿರುವ ಎರಡು ಬಸ್ ತಂಗುದಾಣಗಳನ್ನು ವಿದ್ಯಾರ್ಥಿಗಳು ನೀರಿನಿಂದ ತೊಳೆದು ಸ್ವಚ್ಛಗೊಳಿಸಿದರು. ಇದರೊಂದಿಗೆ ಸುಮಾರು ಎರಡು ಟಿಪ್ಪರಗಳಷ್ಟು ಪ್ಲಾಸ್ಟಿಕ್ ಕಸವನ್ನು ಹೆಕ್ಕಿ ತೆಗೆದು ಪರಿಸರವನ್ನು ಸ್ವಚ್ಛಗೊಳಿಸಲಾಯಿತು. ಹಾಗೇ ವೃತ್ತದಲ್ಲಿ ಮುರಿದುಬಿದ್ದಿದ್ದ ಮಾರ್ಗಸೂಚಕ ಫಲಕವನ್ನು ಉದಯ ಕೆ ಪಿ, ಸೌರಜ್ ಮಂಗಳೂರು ಹಾಗೂ ಕಾರ್ಯಕರ್ತರು ನೀರಿನಿಂದ ತೊಳೆದು ಸ್ವಚ್ಛಗೊಳಿಸಿ, ಸೂಕ್ತಸ್ಥಳದಲ್ಲಿ ನಿಲ್ಲಿಸಿದ್ದಾರೆ. ವೃತ್ತದಲ್ಲಿ ಬೆಳೆದಿದ್ದ ಹುಲ್ಲು ಕತ್ತರಿಸಿ, ಮಣ್ಣು ರಾಶಿಗಳನ್ನೂ ತೆಗೆದು ಸ್ವಚ್ಛಗೊಳಿಸಿದ್ದಾರೆ.

ಮುಂದುವರೆದ ಕಾರ್ಯ: ಕಳೆದ ಭಾನುವಾರ ಪದುವಾ-ಕೆಪಿಟಿ ಹೆದ್ದಾರಿಯ ಬದಿಗಳಲ್ಲಿ ಅಪಾರ ಪ್ರಮಾಣದಲ್ಲಿ ಬಿದ್ದಿದ್ದ ಕಟ್ಟಡ ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಇತರೆ ಕಸವನ್ನು ತೆರವುಗೊಳಿಸಲಾಗಿತ್ತು. ಆದರೆ ಹಿಂದಿನ ವಾರದಲ್ಲಿ ಪೂರ್ಣಪ್ರಮಾಣದಲ್ಲಿ ತ್ಯಾಜ್ಯವನ್ನು ತೆರವುಗೊಳಿಸದ ಹಿನ್ನಲೆಯಲ್ಲಿ ಈ ವಾರವೂ ಅದೇ ಜಾಗದಲ್ಲಿ ಶ್ರಮದಾನವನ್ನು ಪುನ: ಹಮ್ಮಿಕೊಳ್ಳಲಾಯಿತು. ಅಕ್ಷಿತ್ ಅತ್ತಾವರ ಹಾಗೂ ಕಾರ್ಯಕರ್ತರು ಎರಡು ಜೆಸಿಬಿ, ನಾಲ್ಕು ಟಿಪ್ಪರ್ ಬಳಸಿಕೊಂಡು ಆರು ಟಿಪ್ಪರ್ ಕಸವನ್ನು ವಿಲೇವರಿ ಮಾಡಿಸಿದರು. ಜೊತೆಗೆ ಮಣ್ಣಿನ ರಾಶಿಗಳನ್ನು ತೆಗೆಯಲಾಯಿತು. ಹಾಗೆಯೇ ಅಲ್ಲಿರುವ ವ್ಯಾಪಾರಿಗಳಿಗೆ ರಸ್ತೆ ಬದಿಯಲ್ಲಿ ಕಸಹಾಕದಂತೆ ಎಚ್ಚರಿಕೆ ನೀಡಿ ಅವರಿಂದಲೇ ಅವರವರ ಮಳಿಗೆಗಳ ಸುತ್ತ ಸ್ವಚ್ಛ ಮಾಡಿಸಲಾಯಿತು. ಇನ್ನೊಂದೆಡೆ ಸುಧೀರ್ ನರೋಃಹ್ನ ಹಾಗೂ ಪುನೀತ್ ಪೂಜಾರಿ ಇವರುಗಳು ನಗರದ ಬೇರೆ ಬೇರೆ ಪ್ರದೇಶಗಳಲ್ಲಿ ಕಸಬೀಳುತ್ತಿದ್ದ ಸ್ಥಳಗಳಲ್ಲಿಟ್ಟ ಹೂಕುಂಡಗಳಲ್ಲಿರುವ ಗಿಡಗಳಿಗೆ ನೀರು ಹಾಕಿ ಗಿಡಗಳನ್ನು ನಿರ್ವಹಿಸಿದರು. ಹಿಂದೂ ವಾರಿಯರ್ಸ್ ತಂಡದ ಶಶಿಕಾಂತ, ಸುಮಿತ್ ದೇವಾಡಿಗ, ಲಕ್ಷ್ಮೀಶ್ ಶ್ರೀನಿವಾಸ್ ಇನ್ನಿತರರು ಭಾಗವಹಿಸಿದ್ದರು. ಈ ಸ್ವಚ್ಛತಾ ಅಭಿಯಾನಗಳಿಗೆ ಎಂ.ಆರ್.ಪಿ.ಎಲ್ ಹಾಗೂ ನಿಟ್ಟೆ ಸಂಸ್ಥೆಗಳು ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿವೆ.

ಸ್ವಚ್ಛ ಪುತ್ತೂರು.: ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಪೂತ್ತೂರಿನ ಮಾರುಕಟ್ಟೆ ರಸ್ತೆಯಲ್ಲಿರುವ ಸರಕಾರಿ ಆಸ್ಪತ್ರೆ ಪರಿಸರದಲ್ಲಿ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲಾಯಿತು. ಜೋಹಾರ್ ನಿಸಾರ್ ಅಹ್ಮದ್ ಹಾಗೂ ವೈದ್ಯರಾದ ಡಾ. ಎಂ ಎಸ್ ಭಟ್ ಶ್ರಮದಾನಕ್ಕೆ ಚಾಲನೆ ನೀಡಿದರು. ಚಿಣ್ಣರ ಪಾರ್ಕ್ ಬಳಿಯಿದ್ದ ಸರ್ಕಲ್ ಸುತ್ತಮುತ್ತಲಿನ ಪರಿಸರವನ್ನು ಶುಚಿಗೊಳಿಸಿ, ವೃತ್ತಕ್ಕೆ ಬಣ್ಣ ಬಳಿದು ಸುಂದರಗೊಳಿಸಲಾಯಿತು. ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪುತ್ತೂರು ನಗರಸಭೆ ಸದಸ್ಯ ಜಗನ್ನಿವಾಸ್ ರಾವ್, ಸಂದೀಪ್ ಲೋಬೊ, ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಝೇವಿಯರ್ ಡಿಸೋಜಾ, ಶಂಕರ ಮಲ್ಯ, ಸುರೇಶ್ ಕಲ್ಲಾರೆ ಸೇರಿದಂತೆ ಅನೇಕರು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು. ಜಿ ಕೃಷ್ಣ ಶ್ರಮದಾನದ ನೇತೃತ್ವ ವಹಿಸಿದ್ದರು.


Spread the love

Exit mobile version