ರಾಷ್ಟ್ರಮಟ್ಟದ ಕರಾಟೆಯಲ್ಲಿ ಪ್ರಣಮ್ಯಗೆ ಚಿನ್ನ ಹಾಗೂ ಕಂಚು

Spread the love

ರಾಷ್ಟ್ರಮಟ್ಟದ ಕರಾಟೆಯಲ್ಲಿ ಪ್ರಣಮ್ಯಗೆ ಚಿನ್ನ ಹಾಗೂ ಕಂಚು

ಕುಂದಾಪುರ: ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಪೂರ್ಣಿಮಾ ಪ್ರಭಾಕರ ಕುಲಾಲ್ ಅವರ ಪುತ್ರಿಯಾಗಿರುವ ಪ್ರಣಮ್ಯ ಪಿ.ಕುಲಾಲ್ ಇವರು ಮೂಡಬಿದರೆಯಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನ ಹಾಗೂ ಕಂಚಿನ ಪದಕವನ್ನು ಪಡೆದಿದ್ದಾರೆ.

ಇವರ ಈ ಸಾಧನೆಯನ್ನು ಗುರುತಿಸಿದ ಪದವೀಧರ ಪ್ರಗತಿಪರ ಕೃಷಿಕ ರಾಜೇಂದ್ರ ಬೆಚ್ಚಳ್ಳಿ ಇವರು ರಾಷ್ಟ್ರೀಯ ಕ್ರೀಡಾ ದಿನಾಚರಣೆಯಂದು ಸನ್ಮಾನಿಸಿ ಗೌರವಿಸಿದರು.ಅಲ್ಲದೇ ಮುಂದೆಯೂ ಕೂಡ ವಿದ್ಯಾಭ್ಯಾಸದ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತರುವಂತಾಗಲಿ ಎಂದು ಶುಭ ಹಾರೈಸಿದರು.

ಈ ಸಂಧರ್ಭದಲ್ಲಿ ಪ್ರಣಮ್ಯಳ ಪೋಷಕರು ಹಾಗೂ ಶಿಕ್ಷಕ ಪ್ರತಾಪ ಚಂದ್ರ ಕಿಣಿ, ಪಂಚಾಯತ್ ಸದಸ್ಯ ಗೋಪಾಲ್ ಕಾಂಚನ್, ಕೃಷ್ಣ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು


Spread the love