ರಾಷ್ಟ್ರೀಯ ಅಂಡರ್–19 ಫುಟ್ಬಾಲ್ ಟೂರ್ನಿಗೆ ಎಂ.ಜಿ.ಎಂ. ಕಾಲೇಜಿನ ನಾಲ್ಕು ವಿದ್ಯಾರ್ಥಿಗಳು ಆಯ್ಕೆ
ಉಡುಪಿ: ಉಡುಪಿ ಜಿಲ್ಲೆಯ ಪ್ರಸಿದ್ಧ ಎಂ.ಜಿ.ಎಂ. ಪದವಿ ಪೂರ್ವ ಕಾಲೇಜುದ ನಾಲ್ಕು ಪ್ರತಿಭಾವಂತ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಅಂಡರ್–19 ಫುಟ್ಬಾಲ್ ತಂಡಕ್ಕೆ ಆಯ್ಕೆಯಾಗುವ ಮೂಲಕ ಕ್ರೀಡಾಭಿಮಾನಿಗಳಿಗೆ ಹೆಮ್ಮೆ ತಂದಿದ್ದಾರೆ.
ಕಾಲೇಜಿನ ಪ್ರತ್ಯಕ್ಷ ಆರ್. ಕಾಂಚನ್, ರೋಲೆಕ್ಸ್ ಸ್ಯಾಮ್ಸನ್ ಸೋನ್ಸ್, ಶೋಧನ್ ಧನಂಜಯ ಆಚಾರ್ಯ ಮತ್ತು ಸುಫಲ್ ತೆಕ್ಕಟ್ಟೆ ಇವರನ್ನು ಕರ್ನಾಟಕ ರಾಜ್ಯ ಅಂಡರ್–19 ಫುಟ್ಬಾಲ್ ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಫುಟ್ಬಾಲ್ ಟೂರ್ನಮೆಂಟ್ನಲ್ಲಿ ಉಡುಪಿ ಜಿಲ್ಲಾ ತಂಡವು ಅತ್ಯುತ್ತಮ ಪ್ರದರ್ಶನ ನೀಡಿದ್ದು, ರನ್ನರ್ಸ್–ಅಪ್ ಟ್ರೋಫಿಗೆ ಭಾಜನವಾಗಿದೆ.
ಈ ತಂಡವು ಮುಂಬರುವ ಅಕ್ಟೋಬರ್ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಅಂಡರ್–19 ಫುಟ್ಬಾಲ್ ಟೂರ್ನಮೆಂಟ್ನಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಅಭಿನಂದನೆ ಸಲ್ಲಿಸಿದ್ದಾರೆ.