ರಾಷ್ಟ್ರೀಯ ಏಕತಾ ದಿನ; ಉಡುಪಿಯಲ್ಲಿ ಕರಾವಳಿ ಕಾವಲು ಪೊಲೀಸ್ ಏಕತೆಗಾಗಿ ಓಟ

Spread the love

ರಾಷ್ಟ್ರೀಯ ಏಕತಾ ದಿನ; ಉಡುಪಿಯಲ್ಲಿ ಕರಾವಳಿ ಕಾವಲು ಪೊಲೀಸ್ ಏಕತೆಗಾಗಿ ಓಟ

ಉಡುಪಿ: ಭಾರತ ಒಕ್ಕೂಟದ ಸ್ಫೂರ್ತಿಯ ಇನ್ನೊಂದು ರೂಪ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನಾಚರಣೆ ಪ್ರಯುಕ್ತ ಉಡುಪಿಯಲ್ಲಿ ಕರಾವಳಿ ಕಾವಲು ಪೊಲೀಸ್ ವತಿಯಿಂದ ಶನಿವಾರ ಬೆಳಗ್ಗೆ ಏಕತೆಗಾಗಿ ಓಟ ನಡೆಯಿತು.

ಏಕತಾ ಓಟಕ್ಕೆ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಅವರು ಮಟ್ಟು ಬೀಚ್ ನಲ್ಲಿ ಚಾಲನೆ ನೀಡಿದರು. ಮಟ್ಟು ಬೀಚ್ ಮೂಲಕ ಆರಂಭವಾಗಿ ಪಡುಕೆರೆ ಪಂಡರಿನಾಥ ಭಜನಾ ಮಂದಿರದ ತನಕ 3 ಕಿಮಿ ತನಕ ಓಟ ನಡೆಯಿತು.

ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಅವರು ಚಾಲನೆ ನೀಡಿದರು. ಆರ್ ಚೇತನ್ ಪೊಲೀಸ್ ಅಧೀಕ್ಷಕರು ಕರಾವಳಿ ಕಾವಲು ಪೊಲೀಸ್ ಮಲ್ಪೆ ಇವರು ಏಕತಾ ದಿನಾಚರಣೆಯ ಪ್ರತಿಜ್ಞಾ ವಿಧಿ ಭೋದಿಸಿದರು.

ಈ ವೇಳೆ ಮಾತನಾಡಿದ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಅವರು ಸಮೃದ್ಧ ಭಾರತ ನಿರ್ಮಾಣಕ್ಕೆ ಯುವ ಸಮುದಾಯ ಸಜ್ಜಾಗುವುದರೊಂದಿಗೆ ಮಾದಕ ದ್ರವ್ಯದ ವಿರುದ್ದ ನಡೆಯುತ್ತಿರುವ ಹೋರಾಟದಲ್ಲಿ ಪ್ರತಿಯೊಬ್ಬರು ಕೈ ಜೋಡಿಸುವಂತೆ ಕರೆ ನೀಡಿದರು.

ಹತ್ತು ವರ್ಷಗಳ ಒಳಗಿನವರ, 10 ರಿಂದ 18 ವರ್ಷ ವಯಸ್ಸಿನ ಮತ್ತು 18 ವರ್ಷ ಮೇಲ್ಪಟ್ಟ ಮೂರು ವಿಭಾಗಗಳಲ್ಲಿ ಓಟ ನಡೆಯಿತು. ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.

ಸ್ವಾತಂತ್ರ್ಯ ಹೋರಾಟಗಾರ ಹಾಗೂ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರದಾದ್ಯಂತ ರಾಷ್ಟ್ರೀಯ ಏಕತಾ ದಿವಸವನ್ನಾಗಿ ಆಚರಿಸಲಾಗುತ್ತಿದ್ದ ಅದರ ಸಂಕೇತವಾಗಿ ಏಕತಾ ಓಟವನ್ನು ದೇಶದಾದ್ಯಂತ ನಡೆಸಲಾಗುತ್ತಿದೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ, ಡಿಎಆರ್ ಡಿವೈಎಸ್ಪಿ ರಾಘವೇಂದ್ರ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಪೊಲೀಸ್ ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿಗಳು ,ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಓಟದಲ್ಲಿ ಭಾಗವಹಿದ್ದರು


Spread the love