
Spread the love
ರಾಷ್ಟ್ರೀಯ ಪ್ರಶಸ್ತಿ ವಿಜೇತ ಬಡ ಸೈಕ್ಲಿಂಗ್ ಕ್ರೀಡಾಪುಟುವಿಗೆ ಸೈಕಲ್ ಉಡುಗೊರೆ ನೀಡಿದ ಮಂಗಳೂರಿನ ನಾರ್ಬಟ್ ಡಿʼಸೋಜಾ
ಮಂಗಳೂರು: ರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಅತ್ಯುನ್ನತ ಸಾಧನೆ ತೋರಿದ ನಿವೇದಿತಾ ಕೊಟ್ಟನವರ್ (16) ವಿದ್ಯಾರ್ಥಿನಿಗೆ ಮಂಗಳೂರಿನ ಉದ್ಯಮಿ ನಾರ್ಬಟ್ ಡಿʼಸೋಜಾ ಅವರು ಉಚಿತ ಸೈಕಲನ್ನು ಉಡುಗೊರೆಯಾಗಿ ನೀಡಿದ್ದಾರೆ.
ಬಡ ವಿದ್ಯಾರ್ಥೀನಿಯಾಗಿರುವ ನಿವೇದಿತಾ ರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಈಗಾಗಲೇ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಜಯಿಸಿದ್ದು 2022 ರ ರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಗೆ ತಯಾರಾಗುತ್ತಿದ್ದಾಳೆ. ಈ ಬಾರಿ ರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆ ಜಮಖಂಡಿಯಲ್ಲಿ ನಡೆಯಲಿದ್ದು ಬಡವಳಾಗಿರುವ ನಿವೇದಿತಾಳಿಗೆ ಸೈಕಲನ್ನು ಉಡುಗೊರೆಯಾಗಿ ನೀಡುವ ಮೂಲಕ ಕ್ರೀಡಾಳುವಿನ ಸಾಧನೆಗೆ ಬೆಂಬಲ ನೀಡಿದ್ದಾರೆ ಎಂದು ಕೋಚ್ ವಿಠಲ್ ಬೋರ್ಜಿ ಹೇಳಿದ್ದಾರೆ.
ಕಳೆದ ಬಾರಿ ಕೂಡ ಒರ್ವ ಯುವಕನಿಗೆ ಸೈಕಲನ್ನು ಉಡುಗೊರೆಯಾಗಿ ನಾರ್ಬಟ್ ಡಿಸೋಜಾ ನೀಡಿದ್ದಾರೆ.
Spread the love