
ರಾಹುಲ್ ಅನರ್ಹತೆ ವಿಪಕ್ಷಗಳ ಬೆದರಿಸುವ ತಂತ್ರ – ನೆಟ್ಟಾ ಡಿಸೋಜಾ
ಮೈಸೂರು: ಸಂಸದರಾಹುಲ್‌ಗಾಂಧಿ ಅವರ ಲೋಕಸಭಾ ಸದಸ್ಯತ್ವ ಅನರ್ಹಗೊಳಿಸಿರುವ ಕೆಂದ್ರದ ನಿರ್ಧಾರ ವಿರೋಧ ಪಕ್ಷಗಳನ್ನು ಬೆದರಿಸುವ ತಂತ್ರ ಎಂದು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೆಟ್ಟಾಡಿಸೋಜಾ ಹೇಳಿದ್ದಾರೆ
ನಗರದ ವಿಂಡ್ ಫ್ಲವರ್‌ರೆಸಾರ್ಟ್‌ನಲ್ಲಿಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಗೆಲುವಿನ ತಂತ್ರ ಮಹಿಳಾ ಕಾರ್ಯಕರ್ತೆಯರಚರ್ಚಾ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅದಾನಿ ಸಮೂಹ ಭ್ರಷ್ಟಚಾರ ಕುರಿತು ಹಿಂಡನ್‌ಬರ್ಗ್ ಆರೋಪವನ್ನು ಜಂಟಿ ಪಾರ್ಲಿಮೆಂಟ್ ಸಮಿತಿ (ಜೆಪಿಸಿ) ಮೂಲಕ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ರಾಹುಲ್‌ಗಾಂಧಿ ಸಂಸತ್ತಿನಲ್ಲಿ ಆಗ್ರಹಿಸುತ್ತಿರುವುದು ಬಿಜೆಪಿಗೆ ಭಯ ಹುಟ್ಟಿಸಿದೆ. ಆದ್ದರಿಂದಲೇ ಸಣ್ಣ ಪ್ರಕರಣ ಮುಂದಿಟ್ಟುಕೊಂಡು ರಾಹುಲ್ ಅವರನ್ನು ಸಂಕಷ್ಟಕ್ಕೆ ಸಿಲುಕಿಸುವ ಪಿತೂರಿ ಮಾಡುತ್ತಿದೆ. ಇದರ ವಿರುದ್ಧ ಮಹಿಳಾ ಕಾಂಗ್ರೆಸ್‌ದೇಶವ್ಯಾಪಿ ಸಹಿ ಸಂಗ್ರಹ ಚಳವಳಿ ನಡೆಸಲಿದೆ ಎಂದು ಹೇಳಿದರು.
ದೇಶದಇತಿಹಾಸದಲ್ಲೇಅದಾನಿ ಸಮೂಹದ ಹಗರಣ ದೊಡ್ಡದ್ದಾಗಿದ್ದು, ತಮ್ಮ ಭವಿಷ್ಯಕ್ಕಾಗಿ ಜನ ಸಾಮಾನ್ಯರು ಎಲ್‌ಐಸಿ ಮತ್ತು ಬ್ಯಾಂಕ್‌ಗಳಲ್ಲಿ ಕೂಡಿಟ್ಟಿದ್ದ ಹಣವನ್ನು ದುರ್ಬಳಕೆ ಮಾಡಿಕ್ಳೊಲಾಗಿದೆ. ಈ ಬೃಹತ್ ಭ್ರಷ್ಟಾಚಾರದ ವಿರುದ್ಧ ತನಿಖೆಗೆ ಆಗ್ರಹಿಸುತ್ತಿರುವ ವಿರೋಧ ಪಕ್ಷಗಳನ್ನು ಉದ್ದೇಶ ಪೂರ್ವಕವಾಗಿ ಸೆದೆಬಡಿಯುವ ಉದ್ದೇಶದಿಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬೊಮ್ಮಾಯಿ ನಾಯಕತ್ವದ ಬಿಜೆಪಿ ಸರ್ಕಾರ ಕೇಂದ್ರ ಸರ್ಕಾರದಲ್ಲಿ ಶೇ.40 ಕಮಿಷನ್‌ಇಲ್ಲದೇ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂಬದು ದೇಶವ್ಯಾಪಿ ಕೇಳಿಬರುತ್ತಿದೆ. ಹಿಂದೆ ಶಂಕುಸ್ಥಾಪನೆಗೆಂದು ಮೋದಿ ಅವರು ಕರ್ನಾಟಕಕ್ಕೆ ಬಂದಿದ್ದ ವೇಳೆ ಕೆಲವು ರಸ್ತೆಗಳಿಗೆ ತರಾತುರಿಯಲ್ಲಿ ಡಾಂಬರ್ ಹಾಕಲಾಯಿತು. ಆದರೆ, ಮೋದಿ ದೆಹಲಿ ತಲುಪುವ ಮನ್ನವೇ ಡಾಂಬರ್ ಕಿತ್ತು ಬಂದಿದ್ದ ಘಟನೆ ಶೇ.40 ಭ್ರಷ್ಟಚಾರಕ್ಕೆ ಸೂಕ್ತ ಉದಾಹರಣೆಎಂದು ಕಿಡಿಕಾರಿದರು.
ರಾಹುಲ್ ಸದಸ್ಯತ್ವ ಅನರ್ಹತೆಯಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಯೋಜನ ಪಡೆಯಲಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರವಾಗಿ ಚುನಾವಣೆಯಲ್ಲಿ ಕಾಂಗ್ರೆಸ್ ಯಾವುದೇ ಪ್ರಯೋಜನ ಪಡೆಯುವುದಿಲ್ಲ. ಆದರೆ, ಬಜೆಪಿ ಸರ್ಕಾರದ ಪಿತೂರಿಯ ವಿರುದ್ಧ ದೇಶವ್ಯಾಪಿ ಮನೆ ಮೆನೆಗೆ ತೆರಳಿ ಜನರಿಗೆ ಮನವರಿಕೆ ಮಾಡಲಾಗುವುದು ಎಂದು ಹೇಳಿದರು.