ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಿ ತನ್ನ ಹೇಡಿತನ ಜಗಜ್ಜಾಹೀರುಗೊಳಿಸಿದ ಮೋದಿ ಸರಕಾರ – ರಮೇಶ್ ಕಾಂಚನ್

Spread the love

ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಿ ತನ್ನ ಹೇಡಿತನ ಜಗಜ್ಜಾಹೀರುಗೊಳಿಸಿದ ಮೋದಿ ಸರಕಾರ – ರಮೇಶ್ ಕಾಂಚನ್

ಉಡುಪಿ: ರಾಹುಲ್ ಗಾಂಧಿಯವರು ಹೇಳುವ ಸತ್ಯವನ್ನು ಎದುರಿಸಲಾಗದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ತನ್ನ ಹೇಡಿತನವನ್ನು ಜಗಜ್ಜಾಹೀರುಗೊಳಿಸಿದೆ. ಭಾರತದ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೊಂದು ಕರಾಳ ದಿನವಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿಯವರಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ ಕೂಡ ಜಾಮೀನು ನೀಡಿ ಮೇಲ್ಮನವಿ ಸಲ್ಲಿಸುವುದಕ್ಕಾಗಿ ಶಿಕ್ಷೆ ಜಾರಿಗೆ ಒಂದು ತಿಂಗಳು ತಡೆ ನೀಡಿದ್ದರೂ ಕೂಡ ತರಾತುರಿಯಲ್ಲಿ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿದ ಇದೇ ಮೋದಿ ಸರಕಾರ ಹಿಂದೆ ರಾಹುಲ್ ಗಾಂಧಿಯವರನ್ನು ಪಪ್ಪು, ಮೀರ್ ಜಾಫರ್, ದೇಶದ್ರೋಹಿ ಇನ್ನಿತರ ಹೆಸರುಗಳಿಂದ ಕರೆದು ಅವಮಾನಗೊಳಿಸಿದೆ. ಒಂದೊಮ್ಮೆ ರಾಹುಲ್ ಗಾಂಧಿಯವರು ಈ ಹೇಳಿಕೆಗಳಿಗೆಲ್ಲಾ ಮಾನನಷ್ಟ ಮೊಕದ್ದಮೆ ಹೂಡಿದ್ದರೆ ಇಷ್ಟೊತ್ತಿಗೆ ನರೇಂದ್ರ ಮೋದಿ ಸಹಿತ ಅವರ ಇಡೀ ಪಟಾಲಂ ಜೈಲಿನಲ್ಲಿ ಇರಬೇಕಾಗಿತ್ತು. ಬಿಜೆಪಿಯ ಸಿ.ಟಿ ರವಿ, ಡಾ. ಅಶ್ವಥ್ ನಾರಾಯಣ್ ಅಂತಹವರು ನೀಡುವ ಕೀಳು ಹೇಳಿಕೆಗಳು ಯಾಕೆ ನರೇಂದ್ರ ಮೋದಿಯವರ ಗಮನಕ್ಕೆ ಬಂದಿಲ್ಲ. ನರೇಂದ್ರ ಮೋದಿಯವರು ರಾಹುಲ್ ಗಾಂಧಿಯವರನ್ನು ನೇರವಾಗಿ ಎದುರಿಸಲು ಹೆದರಿರುವುದು ಇದರಿಂದ ಸ್ಪಷ್ಟವಾಗುತ್ತಿದೆ.

ದೇಶದಲ್ಲಿ ಜನತಂತ್ರ ವ್ಯವಸ್ಥೆ ಅಪಾಯಕಾರಿಯಲ್ಲಿದ್ದು ಬಿಜೆಪಿ ಸರ್ಕಾರ ವಿರೋಧ ಪಕ್ಷಗಳು ಹೇಳುವ ಸತ್ಯವನ್ನು ತಡೆಯುವ ನಿಟ್ಟಿನಲ್ಲಿ ಬಾಯಿಮುಚ್ಚಿಸುವ ಕೆಲಸ ಮಾಡುತ್ತಿದೆ. ರಾಹುಲ್ ಗಾಂಧಿ ದೇಶವನ್ನು ಲೂಟಿ ಹೊಡೆದ ನೀರವ್ ಮೋದಿ, ಲಲಿತ್ ಮೋದಿ ಅವರ ಬಗ್ಗೆ ಹೇಳೀರುವುದರಲ್ಲಿ ಯಾವುದೇ ತಪ್ಪಿಲ್ಲ. ಮಹಾತ್ಮಾ ಗಾಂಧಿಯವರನ್ನೇ ಅವಹೇಳನ ಮಾಡಿದ ಬಿಜೆಪಿಗರಿಗೆ ಒಂದು ನ್ಯಾಯ ಮತ್ತು ದೇಶವನ್ನು ಕೊಳ್ಳೆ ಹೊಡೆದವರ ವಿರುದ್ದ ಮಾತನಾಡಿದ ರಾಹುಲ್ ಗಾಂಧಿಗೆ ಒಂದು ನ್ಯಾಯವೇ ?

ಬಿಜೆಪಿಗರ ಪಾಪದ ಕೊಡ ತುಂಬಿರುವುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ. ಇವರುಗಳ ಅತೀರೆಕದ ವರ್ತನೆಗೆ ಮುಂದಿನ ದಿನಗಳಲ್ಲಿ ದೇಶದ ಜನ ಯಾವ ರೀತಿಯ ಹೊಡೆತ ನೀಡುತ್ತಾರೆ ಎನ್ನುವುದು ಕಾದು ನೋಡಲಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love