ರಾಹುಲ್‌ ಗಾಂಧಿ ಇಡಿ ವಿಚಾರಣೆ ವಿರೋಧಿಸಿ ಉಡುಪಿಯಲ್ಲಿ ಕಾಂಗ್ರೆಸ್‌ ನಿಂದ ಪ್ರತಿಭಟನೆ

Spread the love

ರಾಹುಲ್‌ ಗಾಂಧಿ ಇಡಿ ವಿಚಾರಣೆ ವಿರೋಧಿಸಿ ಉಡುಪಿಯಲ್ಲಿ ಕಾಂಗ್ರೆಸ್‌ ನಿಂದ ಪ್ರತಿಭಟನೆ

ಉಡುಪಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಇಡಿ ವಿಚಾರಣೆ ವಿರೋಧಿಸಿ ಉಡುಪಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಮಣಿಪಾಲದ ಕಾಯಿನ್‌ ಸರ್ಕಲ್‌ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪ್ರತಿಭಟನಾ ನಿರತ ಮುಖಂಡರು ಹಾಗೂ ಕಾರ್ಯಕರ್ತರು ಕೇಂದ್ರ ಸರ್ಕಾರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.

ನ್ಯಾಷನಲ್ ಹೆರಾಲ್ಡ್‌ ಪ್ರಕರಣದಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದಡಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿಗೆ ಜಾರಿ ನಿರ್ದೇಶನಾಲಯ ನೋಟಿಸ್‌ ಜಾರಿಗೊಳಿಸಿದೆ. ಸದ್ಯ ಸೋನಿಯಾ ಗಾಂಧಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಮೂರು ದಿನಗಳಿಂದ ಇ.ಡಿ ಕಚೇರಿಗೆ ಹಾಜರಾಗಿದ್ದರು. ರಾಹುಲ್ ಗಾಂಧಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ದೇಶದಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದು ಅದರ ಭಾಗವಾಗಿ ಉಡುಪಿ ಜಿಲ್ಲೆಯಲ್ಲೂ ನಡೆಯಿತು.

ಕಾಂಗ್ರೆಸ್ ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ಕೈಗೊಳ್ಳಲಾಗಿತ್ತು.

ಪ್ರತಿಭಟೆನೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಗಳಾದ ಅಭಯಚಂದ್ರ ಜೈನ್ ˌ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆˌ ಜಿಲ್ಲಾ ಅಧ್ಷಕ್ಷ ಅಶೋಕ್ ಕುಮಾರ್ ಕೊಡವೂರುˌ ಎಮ್. ಎ. ಗಪೂರ್ ˌ ದಿನೇಶ್ ಪುತ್ರನ್ˌ ಗೀತಾ ವಾಗ್ಳೆ ˌಮಲ್ಯಾಡಿ ಶಿವರಾಮ ಶೆಟ್ಟಿ ˌಬಿ .ನರಸಿಂಹಮೂರ್ತಿ ˌ ಪ್ರಖ್ಯಾತ ಶೆಟ್ಟಿ ˌ ಸರಸು ಬಂಗೇರ ˌ ಹಿರಿಯಣ್ಣ ˌ ˌದೇವಕಿ ಸಣ್ಣಯ್ಯ ˌ ರೋಶನಿ ಒಲಿವರಾ ˌ ದಿವಾಕರ್ ಕುಂದರ್ˌ ಹರೀಶ್ ಕಿಣಿ ˌ ಕಿಶನ್ ಹೆಗ್ಡೆ ಕೊಳ್ಕೆಬೈಲ್ ˌ ಮಂಜುನಾಥ ಪೂಜಾರಿ ˌ ರಮೇಶ್ ಕಾಂಚನ್ ˌ ನವೀನ್ ಚಂದ್ರ ಸುವರ್ಣ ˌ ಯತೀಶ್ ಕರ್ಕೆರ ˌ ಉದ್ಯಾವರ ನಾಗೇಶ್ ಕುಮಾರ್ ˌ ಪ್ರಶಾಂತ ಪೂಜಾರಿ ˌ ಕೆ . ಕೃಷ್ಣಮೂರ್ತಿ ಆಚಾರ್ಯ ˌ ಅಮೃತ್ ಶೆಣೈ ˌ ಇಸ್ಮಾಯಿಲ್ ಅತ್ರಾಡಿ ˌ ಹರಿಶ್ ಶೆಟ್ಟಿ ಪಾಂಗಾಳ ˌ ಹರೀಶ್ ಶೆಟ್ಟಿ ಹಾವಂಜೆ ˌಲೂಯಿಸ್ ಲೊಬೋ ˌ ರೋಶನ್ ಶೆಟ್ಟಿ ˌ ಸತೀಶ್ ಕೊಡವೂರು ˌ ಲಕ್ಮಣ ಪೂಜಾರಿ ˌವಿಘ್ಞೇಶ್ ಕಿಣಿ ಭಾಗವಹಿಸಿದ್ದರುˌ


Spread the love