
Spread the love
ರಾಹುಲ್ ಗಾಂಧಿ ಪಿಎ ಎಂದು ಹೇಳಿಕೊಂಡು ವಂಚನೆಗೆ ಯತ್ನ: ಸೈಬರ್ ಕ್ರೈಂಗೆ ದೂರು ನೀಡಿದ ಯು.ಟಿ.ಖಾದರ್
ಮಂಗಳೂರು: ರಾಹುಲ್ ಗಾಂಧಿ ಪಿಎ ಎಂದು ಹೇಳಿಕೊಂಡು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ ಖಾದರ್ ಗೆ ಕರೆ ಮಾಡಿ ವಂಚಿಸಲು ಯತ್ನಿಸಿರುವಂತಹ ಘಟನೆ ನಡೆದಿದೆ. ಅಪರಿಚಿತ ಸಂಖ್ಯೆಯಿಂದ ಯು.ಟಿ ಖಾದರ್ ಮೊಬೈಲ್ಗೆ 2 ಸಲ ಫೋನ್ ಮಾಡಿದ್ದಾರೆ.
ಎಐಸಿಸಿ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೆಸರಲ್ಲಿ ಮೊಬೈಲ್ ಸಂಖ್ಯೆ ಸೇವ್ ಆಗಿದೆ. ಕರೆ ಸ್ವೀಕರಿಸದಿದ್ದಕ್ಕೆ ರಾಹುಲ್ ಪಿಎ ಕಾನಿಷ್ಕ ಸಿಂಗ್ ಎಂದು ಮೆಸೇಜ್ ಮಾಡಲಾಗಿದೆ.
ಕರೆ ನಕಲಿಯೆಂದು ತಿಳಿದು ಮಂಗಳೂರು ಸೈಬರ್ ಕ್ರೈಂ ಪೊಲೀಸರಿಗೆ ಯು.ಟಿ.ಖಾದರ್ ದೂರು ನೀಡಿದ್ದಾರೆ.
Spread the love