ರಿಲ್ಯಾಕ್ಸ್ ಮೂಡ್ ನಲ್ಲಿ ಡಿಕೆ ಶಿವಕುಮಾರ್!

Spread the love

ರಿಲ್ಯಾಕ್ಸ್ ಮೂಡ್ ನಲ್ಲಿ ಡಿಕೆ ಶಿವಕುಮಾರ್!

ಕುಂದಾಪುರ: ಎರಡು ದಿನಗಳ ಕಾಲ ಕರಾವಳಿ ಪ್ರವಾಸ ಕೈಗೊಂಡಿರುವ ಡಿಕೆ ಶಿವಕುಮಾರ್ ಬುಧವಾರ ಬೆಳಿಗ್ಗೆ ಬೀಜಾಡಿ ಕಡಲ ಕಿನಾರೆಯಲ್ಲಿ ಬೆಂಬಲಿಗರೊಂದಿಗೆ ಕೆಲಕಾಲ ಸಮಯ ಕಳೆದರು.

ಮಂಗಳವಾರ ಉಡುಪಿ ಕಾರ್ಯಕ್ರಮದ ಬಳಿಕ ಕುಂದಾಪುರಕ್ಕೆ ಆಗಮಿಸಿದ ಅವರು, ಬಸ್ರೂರು ಗರಡಿ, ಯಡಮೊಗೆ ಮೃತ ಉದಯ್ ಗಾಣಿಗ ಮನೆ, ಕುಂದಾಪುರ ಖಾರ್ವಿಕೇರಿ, ಕೋಟೇಶ್ವರ ಅಂಕದಕಟ್ಟೆಯ ಕಾರ್ಯಕ್ರಮ ಮುಗಿಸಿ ಬೀಜಾಡಿಯ ಸನ್ ಕ್ಯಾಸ್ಟಲ್ ಹೋಂ‌ ಸ್ಟೇಯಲ್ಲಿ‌ ರಾತ್ರಿ ಉಳಿದುಕೊಂಡರು.

ಬುಧವಾರ ಬೆಳಿಗ್ಗೆ ಸ್ಥಳೀಯ ಕಾಂಗ್ರೆಸ್ ಮುಖಂಡ, ಬಿಲ್ಲವ ಸಂಘದ ಅಧ್ಯಕ್ಷ ಅಶೋಕ್‌ ಬೀಜಾಡಿ ಮತ್ತು ಬೆಂಬಲಿಗರೊಂದಿಗೆ ಕಡಲ ಕಿನಾರೆಯಲ್ಲಿ ಅರ್ಧ ತಾಸಿಗೂ ಅಧಿಕ ಕಾಲ ವಾಯು ವಿಹಾರ ನಡೆಸಿ, ಸ್ಥಳೀಯರ ಸಂಕಷ್ಟಗಳ ಕುರಿತು ಮಾಹಿತಿ ಪಡೆದುಕೊಂಡರು. ಆ ಬಳಿಕ ಉತ್ತರ ಕನ್ನಡ ಜಿಲ್ಲೆಗೆ ಪ್ರಯಾಣ ಬೆಳೆಸಿದರು


Spread the love