ರೂಪಾ-ರೋಹಿಣಿ ಜಟಾಪಟಿಗೆ ಫೋನ್ ಸಂಭಾಷಣೆ ಟ್ವಿಸ್ಟ್

Spread the love

ರೂಪಾ-ರೋಹಿಣಿ ಜಟಾಪಟಿಗೆ ಫೋನ್ ಸಂಭಾಷಣೆ ಟ್ವಿಸ್ಟ್

ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ.ರೂಪಾ ಅವರನ್ನು ವರ್ಗಾಯಿಸಿರುವ ಸರ್ಕಾರ ಇಬ್ಬರ ನಡುವಿನ ಜಟಾಪಟಿಗೆ ಬ್ರೇಕ್ ಹಾಕಿದೆ. ಈ ನಡುವೆ ಸಾಮಾಜಿಕ ಕಾರ್ಯಕರ್ತನೊಂದಿಗೆ ರೋಹಿಣಿ ಸಿಂಧೂರಿ ವಿರುದ್ಧ ಡಿ.ರೂಪಾ ಮಾತನಾಡಿರುವ ಫೋನ್ ಸಂಭಾಷಣೆ ವೈರಲ್ ಆಗಿದ್ದು, ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ.

ಐಪಿಎಸ್ ಅಧಿಕಾರಿ ಡಿ.ರೂಪಾ ಹಾಗೂ ಸಾಮಾಜಿಕ ಕಾರ್ಯಕರ್ತ ಗಂಗರಾಜು ನಡುವೆ ಫೋನಿನಲ್ಲಿ ನಡೆದಿದ್ದ ಸಂಭಾಷಣೆ ಇದಾಗಿದ್ದು, ಸ್ವತಃ ಗಂಗರಾಜು ಬುಧವಾರ ಈ ಆಡಿಯೋಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಆಡಿಯೋ ಒಂದು 25 ನಿಮಿಷ ಇದ್ದು, ಇಬ್ಬರು ಸುದೀರ್ಘವಾಗಿ ಮಾತುಕತೆ ನಡೆಸಿದ್ದಾರೆ. ಮತ್ತೊಂದು ಆಡಿಯೋ 37 ಸೆಕೆಂಡ್ ಇದೆ. ಆಡಿಯೋದಲ್ಲಿ ನೀವು ಹೋರಾಟಗಾರರಾ? ಅಥವಾ ಒಂದು ವ್ಯಕ್ತಿ, ಪಕ್ಷದ ಪರ ಇದ್ದೀರಾ? ನೀವು ಪದೆ ಪದೇ ರೋಹಿಣಿ ಸಿಂಧೂರಿ ಅವರಿಂದ ದೂರು ಪಡೆದು ಸರ್ವೇ ಕಚೇರಿಗೆ ಏಕೆ ಹೋಗುತ್ತಿದ್ದೀರಾ? ಎಂದು ಗಂಗರಾಜು ಅವರನ್ನು ಪ್ರಶ್ನೆ ಮಾಡಲಾಗಿದೆ.

ನೀವು ರೋಹಿಣಿ ಜಿಲ್ಲಾಧಿಕಾರಿಯಾಗಿದ್ದಾಗ ಮಾತ್ರ ಏಕೆ ಹೋರಾಟ ಮಾಡುತ್ತಿದ್ರಿ? ಈ ಹಿಂದೆ ಏಕೆ ಮಾಡಲ್ಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ನಾನು ಈ ಹಿಂದೆ ಸಿದ್ದರಾಮಯ್ಯ ವಿರುದ್ಧವೂ ಹೋರಾಟ ಮಾಡಿzನೆ. ಅವರ ವಿರುದ್ಧ ಸುಪ್ರೀಂ ಕೋರ್ಟ್‌ವರೆಗೂ ಹೋಗುತ್ತಿzನೆ. ಅವರ ಮೇಲೂ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದೇನೆ. ಈಗ ಮಂಜೇಗೌಡ ಹಾಗೂ ಸಾ.ರಾ.ಮಹೇಶ್, ಮಂಜುನಾಥ್ ಮೇಲೂ ಕೇಸ್ ದಾಖಲಿಸಲಾಗಿದೆ. ಮೈಸೂರು ನಗರ ಪೊಲೀಸ್ ಭವನ ಸಂಬಂಧ 14 ಜನ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗುತ್ತಿದೆ. ಒಬ್ಬ ವ್ಯಕ್ತಿ ವಿರುದ್ಧ ಹೋರಾಟ ಅಲ್ಲ ಎಂದು ರಂಗರಾಜು ತಿಳಿಸಿದ್ದಾರೆ.

ಈಕೆ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಚೆಲುವರಾಯಸ್ವಾಮಿ, ಕೆಲ ಐಎಎಸ್ ಅಧಿಕಾರಿಗಳಿಂದಲೂ ರಾಜಿ ಮಾಡಿಸುವಂತೆ ಬೇಡಿಕೊಂಡಿದ್ದಾರೆ. ಪದೇ ಪದೆ ಸಾ.ರಾ.ಮಹೇಶ್ ಜತೆ ರಾಜಿಗೆ ಪ್ರಯತ್ನಿಸುತ್ತಿರುವುದು ಸರಿನಾ? ಎಂದು ರೂಪಾ ಪ್ರಶ್ನಿಸಿದ್ದಾರೆ.

ಮೈಸೂರಿನ ಜಿಲ್ಲಾಧಿಕಾರಿ ಮನೆಯಲ್ಲಿ ಇದ್ದ ಸಾಮಾನು ಏನಾದವು? ಎಂದು ಪ್ರಶ್ನಿಸಿರುವ ಅವರು, ಆಕೆಯ ಚಾರ್ಟ್ ಸಿಕ್ಕಿದೆ. ಆಕೆ ಜಾಲಹಳ್ಳಿ ಬಳಿ ಕಟ್ಟಿಸುತ್ತಿರುವ ಮನೆಯ ಡೋರ್‌ನ ಒಂದು ಪಟ್ಟಿಗೆ 6 ಲಕ್ಷ ರೂ. ಖರ್ಚು ಮಾಡುತ್ತಿದ್ದಾರೆ. ಜರ್ಮನ್‌ನಿಂದ 26 ಲಕ್ಷ ರೂ. ಮೌಲ್ಯದ ಅಡುಗೆ ಮನೆಯ ಸಾಮಾನು ತರಿಸುತ್ತಿದ್ದಾರೆ. ಇಷ್ಟು ಹಣ ಹೇಗೆ ಬಂತು. ಭೂಮಿ ಖರೀದಿ ಸಂಬಂಧ ಆಗಾಗ್ಗೆ ಸರ್ವೇ ಇಲಾಖೆ ಅಧಿಕಾರಿಗಳ ಬಳಿ ಏಕೆ ಚರ್ಚೆ ನಡೆಸುತ್ತಿದ್ದಾರೆ. ನೀವು ಯಾರ ಪರ ನಿಂತಿದ್ದೀರಿ.. ಇದು ಸರಿನಾ? ಎಂದು ಪ್ರಶ್ನೆ ಮಾಡಿದ್ದಾರೆ.

ರೋಹಿಣಿ ಫ್ಯಾಮಿಲಿದು ರಿಯಲ ಎಸ್ಟೇಟ್ ಬ್ಯುಸಿನೆಸ್ ನಡೆಯುತ್ತಿದೆ. ಕಬಿನಿ ಹತ್ತಿರ ಒಂದು ಲ್ಯಾಂಡ್ ಇದೆ ಅಂಥ ಪಹಣಿ ಕೊಟ್ಟು ನನ್ನ ಗಂಡ ಲ್ಯಾಂಡ್ ರೆಕಾರ್ಡ್ಸ್‌ನಲ್ಲಿ ಇರೋದರಿಂದ ಹೆಲ್ಪ್ ತಗೊಂಡಿದ್ದಾಳೆ. ಯಾರೋ ಬುಜ್ಜಮ್ಮ ಅನ್ನೋರ ಲ್ಯಾಂಡ್ ಎಷ್ಟೋ ಜನರ ಹೆಸರಲ್ಲಿದೆ ತಗೋಬಹುದಾ ಅಂಥ ಒಪಿನೀಯನ್ ಕೇಳಿದ್ದಾಳೆ. ನಮ್ಮವರನ್ನು ಬಳಸಿಕೊಂಡು ಲ್ಯಾಂಡ್ ಡೀಲ್ ಮಾಡಿದ್ದಾರೆ. ಗಂಡನ ರಿಯಲ ಎಸ್ಟೇಟ್ ಪ್ರಮೋಟ್ ಮಾಡಲು ಮಾಹಿತಿ ಸಂಗ್ರಹಿಸಿzರೆ’ ಎಂದು ರೂಪಾ ಟೀಕಿಸಿದ್ದಾರೆ.

ನೀವು ತಿಳಿದಷ್ಟು ಆಕೆ ಸಾಚ ಅಲ್ಲ. ಅವರು ತೆಲುಗಿನವರು. ಅವರಿಗೆ ಕನ್ನಡ ಮಾತನಾಡಲು ಗೊತ್ತಿಲ್ಲ. ಆಕೆಯ ಪತಿ ಅಣ್ಣನನ್ನು ರಾಜಕೀಯಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಆಯಮ್ಮನ ದೆಸೆಯಿಂದ ನಮ್ಮ ಕುಟುಂಬನೂ ಚೆನ್ನಾಗಿಲ್ಲ. ಆಯಮ್ಮ ಕ್ಯಾನ್ಸರ್ ಇದ್ದಾಗೆ. ಎಲ್ಲರನ್ನೂ ಬುಟ್ಟಿಗೆ ಹಾಕಿಕೊಳ್ಳುತ್ತಾರೆ. ಡಿ.ಕೆ.ರವಿ ವಿಷಯದಲ್ಲೂ ಆಗಿದ್ದು ಅದೇ. ನೀವು ರೋಹಿಣಿ ಸಿಂಧೂರಿಯನ್ನು ಸಪೋರ್ಟ್ ಮಾಡುತ್ತಿದ್ದೀರಾ, ಊಸರವಳ್ಳಿ ಆಕೆ, ತನ್ನ ವೈಯಕ್ತಿಕ ಕೆಲಸ ಮಾಡಿಸಿಕೊಳ್ಳಲು ಹಲವರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಾಳೆ. ನೀವು ಫೈಲ ಹಿಡ್ಕೊಂಡು ಪದೇ ಪದೆ ಅವರ ಬಳಿ ಹೋಗುವುದೇನಿದೆ’ ಎಂದಿದ್ದಾರೆ. ಜತೆಗೆ ಅವಾಚ್ಯ ಶಬ್ದದಿಂದಲೂ ನಿಂದಿಸಿದ್ದಾರೆ. ಈ ವೀಡಿಯೋ ಮತ್ತೆ ಸದ್ದು ಮಾಡುತ್ತಿದ್ದು ಎಲ್ಲಿಗೆ ಹೋಗಿ ನಿಲ್ಲುತ್ತದೆಯೋ ಕಾದು ನೋಡಬೇಕಿದೆ.


Spread the love