“ರೈಡ್ ವಿತ್ ದಿ ರೋಲರ್ಸ್” ಕ್ಯಾಲಿ ಕಾರ್ಯಕ್ರಮ

Spread the love

“ರೈಡ್ ವಿತ್ ದಿ ರೋಲರ್ಸ್” ಕ್ಯಾಲಿ ಕಾರ್ಯಕ್ರಮ

ಬೆಂಗಳೂರು: ದೇಶದಾದ್ಯಂತ 75 ನೇ ಸ್ವಾತಂತ್ರ್ಯ ವರ್ಷದ ಅಮೃತ ಮಹೋತ್ಸವ ಆಚರಿಸುತ್ತಿರುವ ಇದೇ ವರ್ಷ ಕರ್ನಾಟಕ ರೋಲರ್ ಸ್ಟೇಟಿಂಗ್ ಅಸೋಸಿಯೇಷನ್ 60 ನೇ ನ್ಯಾಷನಲ್ ರೋಲರ್‌ ಸ್ಟೇಟಿಂಗ್ ಚಾಂಪಿಯನ್‌ಶಿಪ್ “ನಮ್ಮ ನ್ಯಾಷನಲ್ಸ್” ಡಿಸೆಂಬರ್ ಮಾಸದಲ್ಲಿ ಆಯೋಜಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಆಗಸ್ಟ್ 28, 2022 ರಂದು ಬೆಳಿಗ್ಗೆ 6 ಗಂಟೆಗೆ ಬೆಂಗಳೂರಿನ ಕಂಠೀರವ ಸ್ಟೇಡಿಯಂ ನಿಂದ “ರೈಡ್ ವಿತ್ ದಿ ರೋಲರ್ಸ್” ಹೆಸರಿನ ವರ್ಣರಂಜಿತ ಕ್ಯಾಲಿ ಆಯೋಜಿಸಲಾಗಿದೆ. ಕ್ಯಾಲಿಯಲ್ಲಿ 400 ಸ್ಟೇಟಿಂಗ್ ಪಟುಗಳು ಮತ್ತು 200 ಮಂದಿ ಬೈಕರ್ಸ್ ಭಾಗವಹಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮಿಂಚಿನ ಸಂಚಾರ ಮಾಡಲಿದ್ದಾರೆ.

ಈ ಕಣ್ಮನ ಸೆಳೆಯುವ ರಾಲಿಯ ಉದ್ಘಾಟನೆಯಲ್ಲಿ ಕಂದಾಯ ಸಚಿವರಾದ ಆರ್ ಅಶೋಕ್, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸತ್ ಸದಸ್ಯ ತೇಜಸ್ವಿ ಸೂರ್ಯ, ಇಂಡಿಯನ್ ಒಲಂಪಿಕ್ ಅಸೋಸಿಯೇಷನ್‌ ಉಪಾಧ್ಯಕ್ಷರು ಹಾಗೂ ಕರ್ನಾಟಕ ವಿಧಾನ ಪರಿಷತ್‌ ಸದಸ್ಯರಾದ ಕ್ರೀಡಾಳಿತ ತಜ್ಞರಾದ ಶ್ರೀ ಕೆ ಗೋವಿಂದರಾಜು, ಬಸವನಗುಡಿ ಕ್ಷೇತ್ರದ ಶಾಸಕ ರವಿ ಸುಬ್ರಹ್ಮಣ್ಯ, ಕರ್ನಾಟಕ ರೋಲರ್ ಸ್ಕಟಿಂಗ್ ಅಸೋಸಿಯೇಷನ್ ಅಧ್ಯಕ್ಷರಾದ ಲಕ್ಷ್ಮಿನಾರಾಯಣ ಐ.ಎ.ಎಸ್, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್, ನಟ ಶ್ರೀನಗರ ಕಿಟ್ಟಿ, ಎಂ ವೆಂಕಟೇಶ್ (ಸಂಗಾತಿ) ಮಾಜಿ ಸದಸ್ಯರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇವರುಗಳು ಕ್ಯಾಲಿಗೆ ಹಸಿರು ನಿಶಾನೆ ತೋರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಡಿಸೆಂಬರ್ ನಲ್ಲಿ ಆಯೋಜಿಸಲಾಗುತ್ತಿರುವ 60 ನೇ ನ್ಯಾಷನಲ್ ರೋಲರ್‌ ಸ್ಟೇಟಿಂಗ್ ಚಾಂಪಿಯನ್‌ಶಿಪ್ ಲೋಗೋ ಅನಾವರಣ ಮಾಡಲಾಗುತ್ತದೆ. ಫಿಟ್ ಇಂಡಿಯಾ ರಾಯಭಾರಿ ಮತ್ತು ಫಿಟೈಸ್ ಕ್ಲೀನ್ ವನಿತಾ ಅಶೋಕ್ ಮತ್ತು ಮಿಸಸ್ ಇಂಡಿಯಾ ಡಾ ಶೃತಿ ಚೇತನ್ ಅವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಿದ್ದಾರೆ.

“ಟೀಮ್ ಇಂಡಿಯಾ” ಸ್ಟೇಟರ್ಸ್ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕ್ರೀಡೆಯ ಬಗ್ಗೆ ಜನಮನ ಸೆಳೆಯಲಿದ್ದಾರೆ. ಸ್ಟೇಟಿಂಗ್ ಸೆಲೆಬ್ರಿಟಿಗಳೂ ಕೂಡಾ ಈ ಕ್ಯಾಲಿಯಲ್ಲಿ ಭಾಗವಹಿಸಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಕ್ರೀಡಾಪಟುಗಳ ಉತ್ಸಾಹ ಇಮ್ಮಡಿಗೊಳಿಸಲಿದ್ದಾರೆ. ಈ ಕ್ಯಾಲಿಯಲ್ಲಿ ಗಣ್ಯರು ಮತ್ತು ಸ್ಟೇಟಿಂಗ್ ನ ಸಾಧಕರೊಂದಿಗೆ ಸಂವಾದ ನಡೆಸಲು ವಿಫುಲ ತೆರೆದುಕೊಂಡಿವೆ. ಕಾರ್ಯಕ್ರಮವು ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಳ್ಳಲಿದೆ. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು.

ಬೆಳಗಿನ ಉಪಾಹರದ ವ್ಯವಸ್ಥೆ ಇದೆ. ಈ ಕಾರ್ಯಕ್ರಮವನ್ನು ಕೆ.ಆರ್.ಎಸ್.ಎ ಕಾರ್ಯದರ್ಶಿ ಶ್ರೀ ಇಂದೂದರ್ ಸೀತಾರಾಮ್ ನಡೆಸಿಕೊಡಲಿದ್ದಾರೆ.


Spread the love