ರೈತರ ಹಿತ ಕಾಯದವರು ರೈತ ಮಸೂದೆಯನ್ನು ವಿರೋಧಿಸುತ್ತಿದ್ದಾರೆ – ಸಂಸದ ಬಿ ವೈ ರಾಘವೇಂದ್ರ

Spread the love

ರೈತರ ಹಿತ ಕಾಯದವರು ರೈತ ಮಸೂದೆಯನ್ನು ವಿರೋಧಿಸುತ್ತಿದ್ದಾರೆ – ಸಂಸದ ಬಿ ವೈ ರಾಘವೇಂದ್ರ

ಕುಂದಾಪುರ: ರೈತರ ಹಿತ ಚಿಂತನೆ ಮಾಡದ ಕೆಲವು ಸಂಘಟನೆಗಳು, ಪ್ರತಿಪಕ್ಷಗಳು ರೈತ ಮಸೂದೆಯನ್ನು ಉದ್ದೇಶಪೂರ್ವಕವಾಗಿಯೇ ವಿರೋಧಿಸುತ್ತಿವೆ ಎಂದು ಬೈಂದೂರು ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಹೇಳಿದರು.

ಅವರು ಮಂಗಳವಾರ ಸಿದ್ದಾಪುರ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರೈತರು ದೇಶದ ಬೆನ್ನೆಲುಬು, ಕೇಂದ್ರ ಸರಕಾರವೂ ರೈತರ ಪರವಾಗಿದೆ ಆದರೆ ಕೆಲವೊಂದು ವ್ಯಕ್ತಿಗಳೂ ರೈತರ ವೇಷ ಧರಿಸಿ ಉದ್ದೇಷಪೂರಕವಾಗಿಯೇ ರೈತ ಮಸೂದಯನ್ನು ವಿರೋಧಿಸಲಾಗುತ್ತಿದ್ದು, ಇದು ರೈತರ ಹಿತ ಕಾಯದ ವಿರೋಧ ಪಕ್ಷಗಳ ಷಡ್ಯಂತ್ರವಾಗಿದ್ದು, ಸಾಕಷ್ಟು ಚರ್ಚಿಸಿ ರೈತ ಮಸೂದೆಯನ್ನು ಜಾರಿಗೆ ತರಲಾಗಿದೆ ಎಂದರು.
ಗ್ರಾಮ ಪಂಚಾಯತ್ ಮತದಾನದಲ್ಲಿ ಬಿಜೆಪಿ ಬೆಂಬಲಿತರು ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದ ಅವರು ಪರಿಸರಸ್ನೇಹಿಯಾಗಿ ಕೊಲ್ಲೂರು ರೋಪ್ವೇ ಯನ್ನು ನಿರ್ಮಿಸುತ್ತೇವೆ ಎಂದರು.

ಕೇಂದ್ರ ಸರಕಾರದಲ್ಲಿ ತನಗೆ ಕೆಂದ್ರಲ್ಲಿ ಸಚಿವ ಸ್ಥಾನ ನೀಡುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಇದು ಪಕ್ಷ ಹಾಗೂ ಪ್ರಧಾನಿಯವರ ತೀರ್ಮಾನ. ನನಗಿಂತಲೂ ಹಿರಿಯ, ಅನುಭವಿಗಳು ಹಲವರಿದ್ದಾರೆ ಎಂದ ಅವರು ಒಂದುವೇಳೆ ಕಿರಿಯವನಾದ ನನಗೆ ಸಚಿವ ಸ್ಥಾನ ಕೊಟ್ಟರೆ ಸಂತೋಷ. ಅಲ್ಲದೆ ರಾಜ್ಯ ಸಚಿವ ಸಂಪುಟ ವಿಚಾರಣೆಯ ಬಗ್ಗೆ ತಾನು ಏನನ್ನು ಪ್ರತಿಕ್ರಿಯಿಸಲಾರೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮುಖಂಡರಿಗೆ ಬಿಟ್ಟ ವಿಚಾರವಾಗಿದೆ ಎಂದರು.

ಕಸ್ತೂರಿ ರಂಗನ್ ವರದಿ ಜಾರಿ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು ಈ ಭಾಗದ ಜನರ ಹಿತ ಕಾಯುವ ಪ್ರಯತ್ನ ನಡೆಸುತ್ತೇವೆ ಎಂದರು.


Spread the love