
ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ನಿಂದ ಕ್ರಿಕೆಟ್ ಪಂದ್ಯಾವಳಿ
ಮಡಿಕೇರಿ: ಕ್ರೀಡಾಕೂಟ ಆಯೋಜಿಸುವುದರಿಂದ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸುವ ಕ್ರೀಡಾ ಪ್ರತಿಭೆಗಳಲ್ಲಿ ಪ್ರೀತಿ, ವಿಶ್ವಾಸವನ್ನು ತುಂಬಿ ಉತ್ತಮ ಬಾಂಧವ್ಯ ಬೆಸಯಲು ಸಾಧ್ಯವಾಗುತ್ತದೆ ಎಂದು ವಿರಾಜಪೇಟೆ ಸಂತ ಅನ್ನಮ್ಮ ದೇವಾಲಯದ ಧರ್ಮಗುರುಗಳಾದ ವಂ.ಫಾ. ದಯಾನಂದ ಪ್ರಭು ಹೇಳಿದರು.
ವಿರಾಜಪೇಟೆ ತಾಲೂಕಿನ ಕೆದಮಳ್ಳೂರು ಫಾತಿಮ ಮಾತೆ ದೇವಾಲಯದ ಸಂಯುಕ್ತಾಶ್ರಯದಲ್ಲಿ ಕೆದಮಳ್ಳೂರು ನಿವಾಸಿ ಪೂಳಂಡ ವಿನು ಅವರ ಮೈದಾನದಲ್ಲಿ ನಡೆದ 12ನೇ ವರ್ಷದ ಟೆನ್ನಿಸ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿ ಕ್ರೀಡಾಕೂಟಗಳು ಸೌಹಾರ್ಧತೆಗೆ ಸೇತುವೆಯಾಗಿವೆ ಎಂದರು.
ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿದ ಫಾತಿಮಾ ಮಾತೆ ದೇವಾಲಯದ ಧರ್ಮಗುರುಗಳಾದ ವಂ.ಪಾ.ವಿಲ್ ಫ್ರೆಡ್ ಅವರು ಪ್ರತಿಯೊಬ್ಬರು ಸಾಮರಸ್ಯ ಕಾಯ್ದುಕೊಳ್ಳುವುದು ಮುಖ್ಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಉಪಾಧ್ಯಕ್ಷ ಜಾನ್ಸನ್ ಪಿಂಟೋ ವಹಿಸಿದ್ದರು.
ಅಸೋಸಿಯೇಷನ್ ಉಪಾಧ್ಯಕ್ಷರಾದ ಸೋಮವಾರಪೇಟೆ ಜೋಕಿಂ ವಾಸ್, ವಿರಾಜಪೇಟೆ ಮಾರ್ವಿನ್ ಲೋಬೋ, ಸ್ಥಾಪಕ ಅಧ್ಯಕ್ಷ ವಿ.ಎ.ಲಾರೆನ್ಸ್, ಕೆದಮಳ್ಳೂರು ಗ್ರಾ.ಪಂ.ಸದಸ್ಯೆ ಮಲೈರಿರ ವೀಣಾ, ಕೆದಮಳ್ಳೂರು ನಿವೃತ್ತ ಪೊಲೀಸ್ ಉಪಾಧೀಕ್ಷಕ ಬಾಬು ನರೋನಾ, ಮಾಜಿ ಸೈನಿಕ ಪೀಟರ್ ಡಿಸೋಜ, ಮಾಜಿ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಉಪಾಧ್ಯಕ್ಷ ಜೋಕಿಂ ವಾಸ್, ಎಸ್ ಬಿಐ ನಿವೃತ್ತ ವ್ಯವಸ್ಥಾಪಕ ಹಾಗೂ ಸಲಹಾ ಸಮಿತಿ ಸದಸ್ಯರಾದ ಬ್ಲಎಸಿ ಲೋಬೊ, ಕೆದಮಳ್ಳೂರು ಗ್ರಾಮದ ವಕೀಲರಾದ ಪೂಳಂಡ ವಿನು, ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಕಾರ್ಯದರ್ಶಿ ಪಿ.ಎಫ್.ಸಬಾಸ್ಟೀನ್, ಕ್ರೀಡಾ ಕಾರ್ಯದರ್ಶಿ ಅಂತೋಣಿ ಡಿಸೋಜ, ವಿನ್ಸಿ ಡಿಸೋಜ, ಫಿಲಿಫ್ ವಾಸ್, ಬ್ಲೇಸಿಕ್ರಾಸ್ತ ಮತ್ತಿತರರು ಇದ್ದರು.
ಕೊಡಗಿನ ವಿವಿಧ ಭಾಗಗಳ 19 ಧರ್ಮಕೇಂದ್ರಗಳ 26 ತಂಡಗಳು ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು.