ರೋಹನ್ ಕಾರ್ಪೋರೇಶನ್ ನಲ್ಲಿ ವಿಶ್ವಕರ್ಮ ಪೂಜೆ
ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪನಿ ರೋಹನ್ ಕಾರ್ಪೋರೇಶನ್ ವತಿಯಿಂದ ಬಿಜೈ ರೋಹನ್ ಸಿಟಿಯಲ್ಲಿ ವಿಶ್ವಕರ್ಮ ಪೂಜೆ ನೆರವೇರಿತು.
ಸಂಸ್ಥೆಯ ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ವಿಶ್ವಕರ್ಮ ದೇವರ ಅನುಗ್ರಹ ಕೋರಿ ವಿಶೇಷ ಪೂಜೆ ನೆರವೇರಿಸಲಾಯಿತು.
ಸಂಸ್ಥೆಯ ಉದ್ಯೋಗಿಗಳು ಹಾಗೂ ಕಾರ್ಮಿಕರು ಪೂಜೆಯಲ್ಲಿ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ನಾಲ್ಕು ಮಂಟಪಗಳನ್ನು ರೂಪಿಸಿ ಅದನ್ನು ಅದ್ಭುತವಾಗಿ ಅಲಂಕರಿಸಿದರು. ಆಕರ್ಷಕ
ಅಲಂಕಾರದಿಂದ ಈ ಮಂಟಪಗಳು ಪೂಜೆಯ ಸಾಂಸ್ಕೃತಿಕ ಸೊಬಗನ್ನು ಹೆಚ್ಚಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಪ್ರತಿನಿಧಿಗಳು, “ವಿಶ್ವಕರ್ಮ ಪೂಜೆ ಇಂಜಿನಿಯರ್ಗಳು ಮತ್ತು
ಕಾರ್ಮಿಕರ ಪರಿಶ್ರಮಕ್ಕೆ ಗೌರವ ಸಲ್ಲಿಸುವ ಸಂಪ್ರದಾಯ. ಸಂಸ್ಥೆಯ ಬೆಳವಣಿಗೆಯಲ್ಲಿ ಅವರ ಪಾತ್ರ ಅತ್ಯಂತ
ಮಹತ್ವದ್ದು,” ಎಂದು ಹೇಳಿದ್ದರು.
ಲೋಕಶಿಲ್ಪಿ ವಿಶ್ವಕರ್ಮ ದೇವರನ್ನು ಸ್ಮರಿಸಿ ಗೌರವ ಸಲ್ಲಿಸಲಾಯಿತು. ಅವರ ಆರಾಧನೆಯೊಂದಿಗೆ ಕಾರ್ಯಕ್ರಮ
ಮುಕ್ತಾಯವಾಯಿತು.