ರೋಹನ್ ಸಿಟಿ ಯಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶೇಕಡಾ 10 ರಷ್ಟು ರಿಯಾಯಿತಿ

Spread the love

ರೋಹನ್ ಸಿಟಿ ಯಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶೇಕಡಾ 10 ರಷ್ಟು ರಿಯಾಯಿತಿ

ಮಂಗಳೂರು: ರೋಹನ್ ಕಾರ್ಪೊರೇಷನ್ ವತಿಯಿಂದ ವಿಶೇಷ ಆಫರ್ ಘೋಷಿದ ರೋಹನ್ ಕಾರ್ಪೊರೇಷನ್ ಆಡಳಿತ ನಿರ್ದೇಶಕ ರೋಹನ್ ಮೊಂತೆರೊ ಈ ಬಗ್ಗೆ ಮಂಗಳೂರಿನ ಓಷಿಯನ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು ರೋಹನ್ ಕಾರ್ಪೊರೇಷನ್ ನ ಬಹು ನಿರೀಕ್ಷಿತ, ಅತ್ಯಂತ ವಿಶೇಷ ಯೋಜನೆ ರೋಹನ್ ಸಿಟಿ ಬೃಹತ್ ಕಟ್ಟಡದ ಕಾರ್ಯ ಭರದಿಂದ ಸಾಗುತ್ತಿದ್ದು ಈಗಾಗಲೇ ೭೦ ಶೇ ಬುಕಿಂಗ್ ಪೂರ್ಣಗೊಂಡಿದೆ. ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರು, ಪೋಲಿಸರು, ಯೋಧರು, ಪತ್ರಕರ್ತರಿಗೆ ಪ್ಲಾಟ್ ಗಳ ಮೇಲೆ ಶೇಕಡಾ ೧೦ ರಷ್ಟು ರಿಯಾಯಿತಿ ನೀಡಲಾಗುತ್ತದೆ.

ಈ ಯೋಜನೆ ಸೆಪ್ಟೆಂಬರ್ ಅಂತ್ಯದ ವರೆಗೆ ಚಾಲ್ತಿಯಲ್ಲಿರಲಿದೆ…ಇನ್ನೂ ಈಗಾಗಲೇ ರೋಹನ್ ಕಾರ್ಪೊರೇಷನ್ ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ವಸತಿ ಸಮುಚ್ಚ ಮಾತ್ರವಲ್ಲದೆ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಾಣ ಮಾಡಿದ್ದು ನಗರದ ಬಿಜೈ ನಲ್ಲಿ ನಿರ್ಮಾಣ ಹಂತದಲ್ಲಿರು ರೋಹನ್ ಸಿಟಿ ವಾಣಿಜ್ಯ ಸಂಕೀರ್ಣ ಮತ್ತು ವಸತಿ ಸಮುಚ್ಚಯಲ್ಲಿ 1,2,3,4,6 ಬಿಎಚ್ಕೆ ಫ್ಲಾಟ್ ಗಳಿದ್ದು, ಎರಡು ಲಕ್ಷ ಚದರ ಅಡಿ ವಾಣಿಜ್ಯ ಮಳಿಗೆಗಳಿರಲಿದ್ದು ಯಾಂತ್ರಿಕೃತ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಒದಗಿಸಲಾಗುತ್ತೆ ಅದರಲ್ಲೂ ರೋಹನ್ ಸಿಟಿ ವೈಶಿಷ್ಟ್ಯವೆಂದರೆ ಎರಡು ಹಂತದಲ್ಲಿ 35000ಸಾವಿರ ಚದರ ಅಡಿಯ ಹೈಪರ್ ಮಾರುಕಟ್ಟೆ, ಹೋಟೆಲ್, ಅತ್ಯಾಧುನಿಕ ಕ್ಲಬ್ ಒಳಗೊಳ್ಳಲಿದೆ ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರೋಹನ್ ಕಾರ್ಪೊರೇಷನ್ ನಿರ್ದೇಶಕ ಡಿಯೋನ್ ಮೊಂತೆರೊ, ಲೆಸ್ಲೀ ಪಿಂಟೊ, ಸುಮನ, ಶವೀನ ಸೋನ್ಸ್ ಮತ್ತಿತರರು ಉಪಸ್ಥಿತರಿದ್ದರು


Spread the love