ಲಾಕ್‌ ಡೌನ್‌ ವೇಳೆ ಅಡುಗೆ ಕಾರ್ಯಕ್ಕೆ ಸಹಕರಿಸಿದ ಪೊಲೀಸ್‌ ಸಿಬಂದಿಗಳಿಗೆ ಸನ್ಮಾನ

Spread the love

ಲಾಕ್‌ ಡೌನ್‌ ವೇಳೆ ಅಡುಗೆ ಕಾರ್ಯಕ್ಕೆ ಸಹಕರಿಸಿದ ಸಿಬಂದಿಗಳಿಗೆ ಸನ್ಮಾನ

ಮಂಗಳೂರು: ಕೋವಿಡ್‌ – 19 ಲಾಕ್‌ ಡೌನ್‌ ಸಮಯದಲ್ಲಿ ಸಿಬಂದಿಗಳಿಗೆ ಅಡುಗೆ ಮಾಡಿ ಸಹಕರಿಸಿದ ಪೊಲೀಸ್‌ ಸಿಬಂದಿಗಳನ್ನು ಬುಧವಾರ ನಗರ ಪೊಲೀಸ್‌ ಕಮೀಷನರ್‌ ಎನ್‌ ಶಶಿ ಕುಮಾರ್‌ ಗೌರವಿಸಿದರು.

ಈ ಬಾರಿಯ ಅಲೆಯ ಲಾಕ್‌ಡೌನ್ ಸಂದರ್ಭದಲ್ಲಿ ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಲಾಕ್‌ಡೌನ್ ಬಂದೋಬಸ್ತ್ ಸಂದರ್ಭದಲ್ಲಿ ಹೋಟೆಲ್‌ಗಳ ಅಲಭ್ಯತೆಯಿಂದಾಗಿ ಭೋಜನದ ಸಮಸ್ಯೆ ಉಂಟಾಗಿತ್ತು. ಈ ಸಮಸ್ಯೆಯನ್ನು ತಪ್ಪಿಸುವ ಸಲುವಾಗಿ ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಸಿಬ್ಬಂದಿಗಳಿಂದ ತಾತ್ಕಾಲಿಕ ಪೊಲೀಸ್ ಅಡುಗೆ ಮನೆ ಸ್ಥಾಪಿಸಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಲಾಕ್‌ಡೌನ್ ಬಂದೋಬಸ್ತ್ ಸಂದರ್ಭದಲ್ಲಿ ಮದ್ಯಾಹ್ನದ ಹಾಗೂ ರಾತ್ರಿಯ ಭೋಜನದ ವ್ಯವಸ್ಥೆಗೊಳಿಸಲಾಗಿತ್ತು. ದಿನಂಪ್ರತಿ ಸರಾಸರಿ 700 ಊಟದಂತೆ ಒಟ್ಟು 120 ದಿನಗಳಲ್ಲಿ 84,000 ಭೋಜನವನ್ನು ವ್ಯವಸ್ಥೆಗೊಳಿಸಲಾಯಿತು. ಮಂಗಳೂರು ನಗರದ ಅಧಿಕಾರಿ ಮತ್ತು ಸಿಬ್ಬಂದಿಗಳ ಮೇಲುಸ್ತುವಾರಿಯಲ್ಲಿ ಈ ಪೊಲೀಸ್ ಅಡುಗೆ ಮನೆಯಲ್ಲಿ ಅಬ್ದುಲ್‌ ಕಾನವಾಡೆ ಸಿಎ ಆರ್‌ ಮಂಗಳೂರು, ಶಕೀಲ್‌ ತೊದಲಬಾಗಿ ಸಿಎಆರ್‌ ಮಂಗಳೂರು, ಲಕ್ಕಪ್ಪ ಜಿ ಎಪಿಸಿ ಸಿಎಆರ್‌, ಸಿದ್ದರೂಡ ಎಪಿಸಿ ಸಿಎಆರ್‌ ಮಂಗಳೂರು, ಉಷಾ ಹೆಚ್‌, ಶುಭಾ ಹೆಚ್‌, ಮಂಜುಳ ಹೆಚ್‌ ಜಿ, ಸೆಲೆಸ್ಟಿನ್‌ ಡಿಸೋಜಾ ಹೆಚ್‌ ಗಳು   ಅವಿರತವಾಗಿ ಶ್ರಮಿಸಿರುತ್ತಾರೆ.

ಈ ಸಿಬ್ಬಂದಿಗಳಿಗೆ ಮಂಗಳೂರು ನಗರದ ಪೊಲೀಸ್ ಆಯುಕ್ತರಾದ  ಎನ್. ಶಶಿಕುಮಾರ್, ಐಪಿಎಸ್ ರವರು ರೂ. 40,000/- ಗಳ ನಗದು ಬಹುಮಾನವನ್ನು ನೀಡಿ ಗೌರವಿಸಿದರು.

ಈ ಪೊಲೀಸ್ ಅಡುಗೆ ಮನೆಗೆ ಮಂಗಳೂರು ನಗರದ ಶಾಸಕರಾದ  ವೇದವ್ಯಾಸ್ ಕಾಮತ್ ಮತ್ತು ಇಸ್ಲಾನ್, ಆರ್ಯ ಸಮಾಜ ರಸ್ತೆ, ಇಸ್ಲಾನ್, ಕುಡುಪು, ಎಸ್‌ಸಿಡಿಸಿಸಿ ಬ್ಯಾಂಕ್, ಎಂ/ಎಸ್. ಸಾಹುಕಾರ್ ಬಾಬಾ ಪೈ & ಕಂ.. ಸಾಯಿರಾಧ ಸಮೂಹ ಸಂಸ್ಥೆಗಳು, Cause NGO, ಹಾಗೂ ನಗರದ ಇತರ ಠಾಣೆಗಳ ಅಧಿಕಾರಿಗಳು ಹಾಗೂ ಹಲವಾರು ಸಂಘ ಸಂಸ್ಥೆಗಳು ದವಸ ಧಾನ್ಯ ಹಾಗೂ ಇತರ ವಸ್ತುಗಳನ್ನು ದೇಣಿಗೆಯಾಗಿ ನೀಡಿರುತ್ತಾರೆ.


Spread the love