ಲಾಕ್ ಡೌನ್ ಗೊಂದಲ ನಿವಾರಿಸಿ ಸಮಾನತೆಯ ನಿಯಮ ಜಾರಿಗೊಳಿಸಿ: ಜೆಡಿಎಸ್

Spread the love

ಲಾಕ್ ಡೌನ್ ಗೊಂದಲ ನಿವಾರಿಸಿ ಸಮಾನತೆಯ ನಿಯಮ ಜಾರಿಗೊಳಿಸಿ: ಜೆಡಿಎಸ್

ಕೊರೋನ ರೋಗವನ್ನು ತಡೆಗಟ್ಟಲು ಸರಕಾರ ಹಾಗೂ ಜಿಲ್ಲಾ ಆಡಳಿತ ಲಾಕ್ ಡೌನ್ ನಿಯಮಗಳನ್ನು ಜ್ಯಾರಿಗೊಳಿಸಿದ್ದು ಒಂದು ತಿಂಗಳು ಕಳೆದರೂ ಇದು ಎಷ್ಟರ ಮಟ್ಟಿಗೆ ಸಮರ್ಪಕ ಜ್ಯಾರಿಯಾಗಿದೆ ಎಂಬುವುದು ಜನಸಮಾನ್ಯರ ಪ್ರಶ್ನೆ. ಅಂತ್ಯ ಸಂಸ್ಕಾರ, ಮದುವೆ ಸಮಾರಂಭ ವಾಹನಗಳಲ್ಲಿ ಸಂಚರಿಸುವಾಗ ಬಟ್ಟೆ ಅಂಗಡಿ, ಎಲೆಟ್ರಾನಿಕ್ ಅಂಗಡಿಗಳು ತೆರೆದಲ್ಲಿ ಕೊರೋನ ವೈರಸ್ ಮಿತಿಮೀರಿ ಹಬ್ಬುತ್ತದೆ. ಆದರೆ ದಿನನಿತ್ಯ ಅಹಾರ ಸಮಾಗ್ರಿಗಳನ್ನು ಖರಿದಿಸುವಾಗ ರೇಷನ್ ಅಂಗಡಿಯಲ್ಲಿ ಸರದಿ, ಅಹಾರ ಕಿಟ್ ಗಳ ವಿತರಣೆ ಮತ್ತು, ಲಸಿಕೆ ಪಡೆಯುವಾಗ ಇನ್ನೂರು-ಮುನ್ನೂರು ಜನರ ಗುಂಪು ಮತ್ತು, ಕಾಮಗಾರಿ ನಡೆಸುವಾಗ ಕೊರೋನ ವೈರಸ್ ಶಾಂತವಾಗಿರುತ್ತದೆಯೇ ? ಅದು ಹರಡುದಿಲ್ಲವೇ ? ಎಂಬುವುದು ಜನಸಾಮನ್ಯರಿಗೆ ಗೊಂದಲವಾಗಿದೆ.

ಅಹಾರ ಕಿಟ್ ವಿತರಣೆ, ಲಸಿಕೆ ನೀಡುವಿಕೆ, ದಿನಸಿ ಸಾಮಾಗ್ರಿಗಳು ಇವುಗಳನ್ನು ಆಯಾಯ ಮನೆಮನೆಗಳಿಗೆ ಕೇವಲ ಎರಡು-ಮೂರು ಜನರು ಹೋಗಿ ವಿತರಿಸಲು ಸಾಧ್ಯವಿಲ್ಲವೇ? ಈ ಬಗ್ಗೆ ಜಿಲ್ಲಾ ಆಡಳಿತದ ತಾರತಮ್ಯ ಏಕೆ? ಖಾಸಗಿ ಸಂಸ್ಥೆಗಳಲ್ಲಿ ದುಡಿಯುವ ಸಾವಿರಾರು ಬಡ ಮಾಧ್ಯಮ ವರ್ಗದ ಜನರಿಗೆ ಯಾವುದೇ ಸೌಲತ್ಯ ದೊರಕದೆ ಇದೇ ರೀತಿ ಲಾಕ್ ಡೌನ್ ಮುಂದುವರಿಸಿದಲ್ಲಿ ಜನಸಾಮನ್ಯರ ಪಾಡೇನ್ನು. ಲಾಕ್ ಡೌನ್ ನಿಯಮವಳಿ ಎಲ್ಲಾ ಜನಸಾಮನ್ಯರಿಗೆ ಸಮಾನವಾಗಿರಲಿ ಇಲ್ಲವೇ ತೆಗೆದುಹಾಕಿ. ಸೆಕ್ಶನ್ ಜ್ಯಾರಿ ಮಾಡಿ 4-5 ಜನ ಸೇರದಂತೆ ಕಾನೂನು ಕ್ರಮ ಕೈಗೊಳ್ಳಿ. ಅದೇ ರೀತಿ ಸರಕಾರವು ಕನಿಷ್ಟವಾಗಿ ಎರಡು ತಿಂಗಳ ವಿದ್ಯುತ್ ಬಿಲ್, ನೀರಿನ ಬಿಲ್ ಹಾಗೂ ಮನೆ ತೆರಿಗೆಯನ್ನು ಮನ್ನಮಾಡಿ ಜನಸಾಮನ್ಯರ ಕಷ್ಟ ಕಾರ್ಪಣ್ಯಕ್ಕೆ ಸ್ಪಂದಿಸಲಿ ಎಂದು ಜೆಡಿಎಸ್ ಜಿಲ್ಲಾ ಕಾರ್ಯಧ್ಯಕ್ಷರಾದ ವಸಂತ ಪೂಜಾರಿ ಹಾಗೂ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ


Spread the love