ಲಾಕ್ ಡೌನ್ ನ ಪ್ರಸ್ತಾಪ ಸರ್ಕಾರದ ಮುಂದಿಲ್ಲ, ಸುಳ್ಳು ವಂದತಿ ಹಬ್ಬಿಸುವವರ ವಿರುದ್ದ ಕ್ರಮ : ಡಾ ಕೆ ಸುಧಾಕರ್

Spread the love

ಲಾಕ್ ಡೌನ್ ನ ಪ್ರಸ್ತಾಪ ಸರ್ಕಾರದ ಮುಂದಿಲ್ಲ, ಸುಳ್ಳು ವಂದತಿ ಹಬ್ಬಿಸುವವರ ವಿರುದ್ದ ಕ್ರಮ : ಡಾ ಕೆ ಸುಧಾಕರ್

ಬೆಂಗಳೂರು: ಕೋವಿಡ್ ಒಂದನೇ ಮತ್ತು ಎರಡನೇ ಅಲೆ ಬಂದು ಅನಾರೋಗ್ಯ ಸಮಸ್ಯೆ, ಲಾಕ್ ಡೌನ್ ನಿಂದ ಆರ್ಥಿಕವಾಗಿ ಈಗಾಗಲೇ ಜನರು ಬಹಳಷ್ಟು ನೊಂದಿದ್ದಾರೆ. ಬಹಳ ನಷ್ಟ ಅನುಭವಿಸಿದ್ದಾರೆ. ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ, ಹೀಗಾಗಿ ಮತ್ತೆ ಮತ್ತೆ ಆತಂಕ, ಸಮಸ್ಯೆ ಸೃಷ್ಟಿ ಮಾಡುವ ಕೆಲಸ ಮಾಡುವುದಿಲ್ಲ, ಮತ್ತೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಲಾಕ್ ಡೌನ್ ಹೇರುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಸುದ್ದಿ ಬಹಳ ವೇಗವಾಗಿ ಹಬ್ಬುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೇಗವಾಗಿ ಹಬ್ಬುತ್ತದೆ.ಸೋಷಿಯಲ್ ಮೀಡಿಯಾಗಳಲ್ಲಿ ಜವಾಬ್ದಾರಿಯುತವಾಗಿ ವರ್ತಿಸಿ ಲಾಕ್ ಡೌನ್ ನ ಸುಳ್ಳುಸುದ್ದಿ ಹಬ್ಬಿಸಿ ಜನರಲ್ಲಿ ಭಯ, ಆತಂಕ ಸೃಷ್ಟಿಸುವುದು ಬೇಡ, ಗೊಂದಲಮಯ ಸುದ್ದಿ ಹಾಕುವುದು ಬೇಡ ಎಂದರು.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೊರೋನಾ ರೂಪಾಂತರಿ ಹೊಸ ತಳಿ ಬರುತ್ತಿದೆ, ಇದು ಬಹಳ ವೇಗವಾಗಿ ಸಮುದಾಯದಲ್ಲಿ ಹರಡುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ಸರಿಯಾದ ಎಚ್ಚರಿಕೆ ಸುದ್ದಿ ನೀಡುತ್ತಿದ್ದೀರಿ. ಅದು ಮುಂದುವರಿಯಲಿ, ಆದರೆ ಲಾಕ್ ಡೌನ್ ನಂತಹ ಆತಂಕಗೊಳಿಸುವ ಸುದ್ದಿ ಬೇಡ ಎಂದು ಮನವಿ ಮಾಡಿಕೊಂಡರು.


Spread the love