
ಲಾಟರಿ ದಂಧೆ ಹಾವಳಿಯನ್ನು ತಪ್ಪಿಸಲು ಜಿಲ್ಲೆಯಲ್ಲಿ ಫ್ಲೈಯಿಂಗ್ ಸ್ಕ್ವ್ಯಾಡ್
ಮಂಗಳೂರು: ಕರ್ನಾಟಕ ಸರಕಾರದ ಅಧಿಸೂಚನೆ ಸಂಖ್ಯೆ.ಎಫ್.ಡಿ/22/ಸಸ/2006 ಬೆಂಗಳೂರು ದಿನಾಂಕ:27-03-2007 ರಲ್ಲಿ ಕರ್ನಾಟಕ ರಾಜ್ಯವನ್ನು ದಿನಾಂಕ:01.04.2007 ರಿಂದ ಮುಕ್ತವಲಯವನ್ನಾಗಿ ಘೋಷಿಸಲಾಗಿದೆ. ಆದಾಗ್ಯೂ ನೆರೆ ರಾಜ್ಯ ಮತ್ತು ಹೊರ ರಾಜ್ಯಗಳ ಲಾಟರಿ ಮಾರಾಟವನ್ನು ನಮ್ಮ ರಾಜ್ಯದಲ್ಲಿ ತಡೆಗಟ್ಟಲು ಸರ್ಕಾರವು ಆದೇಶ ಸಂಖ್ಯೆ ಆಇ0ಸಲಲಾ2015 ಬೆಂಗಳೂರು ದಿನಾಂಕ: 12-02-2016 ರಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಫೈಯಿಂಗ್ ಸ್ಟ್ಯಾಂಡ್ನ್ನು ಪುನರ್ ರಚಿಸಿದ್ದು, ದಕ್ಷಿಣಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಸಭೆಯನ್ನು ದಿನಾಂಕ.11-01-2023 ರಂದು ಪೂರ್ವಾಹ್ನ 11-30 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆಸಲಾಯಿತು
ಈ ಫೈಯಿಂಗ್ ಸ್ವಾಡ್ ಗೆ ಜಿಲ್ಲಾಧಿಕಾರಿಯವರು ಅಧ್ಯಕ್ಷರು, ಪೊಲೀಸ್ ಆಯುಕ್ತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಮತ್ತು ಜಿಲ್ಲೆಯ ನಾಣಿಜ್ಯ ತೆರಿಗೆ ಇಲಾಖೆಯ ಇನ್ಚಾರ್ಜ್ ಜಾರಿಗೊಳಿಕೆ ವಿಭಾಗದ ಅಧಿಕಾರಿಯವರನ್ನು ಸದಸ್ಯರುಗಳು ಹಾಗೂ ಸಹಾಯಕ ನಿರ್ದೇಶಕರು ಪಿಂಚಣಿ ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ನಿರ್ವಹಣೆ ಇಲಾಖೆ ಇವರು ಸದಸ್ಯ ಸಮಾವೇಶಕರರಾಗಿರುತ್ತಾರೆ.
ಜಿಲ್ಲೆಯಲ್ಲಿ ಯಾವುದೇ ತರಹದ ಲಾಟರಿ ದಂಧೆ /ಅನಧಿಕೃತ ಲಾಟರಿ ವಹಿವಾಟು ನೆರೆ ರಾಜ್ಯ ಹೊರ ರಾಜ್ಯಗಳ ಲಾಟರಿ ಟಿಕೇಟುಗಳ ಮಾರಾಟದ ನಿಯಂತ್ರಣ ಹಾಗೂ ಇತಂಹ ಪ್ರಕರಣಗಳನ್ನು ಪತ್ತೆ ಹಚ್ಚಿ ಎಫ್.ಐ.ಆರ್. ದಾಖಲಿಸುವುದು ಪ್ರೈಯಿಂಗ್ ಸ್ವಾಡ್ನ ಕರ್ತವ್ಯವಾಗಿರುತ್ತದೆ.
ಒಂದು ವೇಳೆ ಜಿಲ್ಲೆಯ ಯಾವುದೆ ಭಾಗದಲ್ಲಿ ಇಂತಹ ಪ್ರಕರಣಗಳು ಕಂಡುಬಂದಲ್ಲಿ ಅಂತಹವರ ವಿರುದ್ಧ ಪ್ರೈಯಿಂಗ್ ಸ್ಕ್ಯಾಡ್ ದಾಳಿ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದೆಂದು ಪ್ಲೆಯಿಂಗ್ ಸ್ಕ್ಯಾಡ್ನ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ,ಮಂಗಳೂರು ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸುತ್ತಾ, ಜನ ಸಾಮಾನ್ಯರು ಕೂಡ ಲಾಟರಿ ದಂಧೆ ಹಾವಳಿಯನ್ನು ತಪ್ಪಿಸುವಲ್ಲಿ ಫೈಯಿಂಗ್ ಸ್ಕ್ಯಾಡ್ನೊಂದಿಗೆ ಸಹಕರಿಸಲು ಕೋರಿದೆ.