ಲಾರಿ ಮತ್ತು ಸ್ಕೂಟರ್ ನಡುವೆ ಅಫಘಾತ- ಇಬ್ಬರು ಸಾವು, ಇಬ್ಬರು ಮಕ್ಕಳಿಗೆ ಗಾಯ

Spread the love

ಲಾರಿ ಮತ್ತು ಸ್ಕೂಟರ್ ನಡುವೆ ಅಫಘಾತ- ಇಬ್ಬರು ಸಾವು, ಇಬ್ಬರು ಮಕ್ಕಳಿಗೆ ಗಾಯ

ಮಂಗಳೂರು: ಲಾರಿ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಅಫಘಾತದಲ್ಲಿ ಇಬ್ಬರು

ಮೃತಪಟ್ಟು, ಇಬ್ಬರು ಮಕ್ಕಳು ಗಾಯಗೊಂಡ ಘಟನೆ ನಗರದ ಕಲ್ಲಾಪು ಮಾರ್ಕೆಟ್ ಬಳಿ ಸಂಭವಿಸಿದೆ.

ಮೃತರನ್ನು ಜಪ್ಪಿನಮೊಗರು ನಿವಾಸಿ ಗಂಗಾಧರ್(45) ಮತ್ತು ಆತನ ಪತ್ನಿ ನೇತ್ರಾವತಿ (48) ಎಂದು ಗುರುತಿಸಲಾಗಿದೆ.

ಭಾನುವಾರ ಗಂಗಾದರ್ ಅವರು ತನ್ನ ಪತ್ನಿ ನೇತ್ರಾವತಿ, ಮಗಳಾದ ಮೋಕ್ಷಾ ಮತ್ತು ನೇತ್ರಾವತಿಯವರ ಅಕ್ಕನ ಮಗನಾದ ಜ್ಞಾನೇಶ್ ಅವರನ್ನು ತಮ್ಮ ಸ್ಕೂಟರ್ ನಲ್ಲಿ ಕರೆದುಕೊಂಡು ಪಂಪ್ ವೆಲ್ ನಿಂದ ತೊಕ್ಕೊಟ್ಟು ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದು ಕಲ್ಲಾಪು ಗ್ಲೋಬಲ್ ಮಾರ್ಕೆಟ್ ಬಳಿ ಲಾರಿಯಿಂದು ಸ್ಕೂಟರ್ ಗೆ ಡಿಕ್ಕಿ ಹೊಡೆದಿದ್ದು, ಸ್ಕೂಟರ್ ನಲ್ಲಿದ್ದ 4 ಜನರು ರಸ್ತೆಗೆ ಬಿದ್ದು ಗಂಗಾಧರ್ ಹಾಗೂ ನೇತ್ರಾವತಿ ಗಂಭೀರ ಗಾಯಗೊಂಡು ಮೃತಪಟ್ಟಿರುತ್ತಾರೆ . ಹಾಗೂ ಮಕ್ಕಳಾದ ಜ್ಞಾನೇಶ್ ಹಾಗೂ ಮೋಕ್ಷಾ ರವರು ಕೂಡ ಗಾಯಗೊಂಡಿದ್ದು, ಯೆನೆಪೊಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಲಾರಿ ಚಾಲಕ ಹನೀಫ್ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.


Spread the love

Leave a Reply

Please enter your comment!
Please enter your name here