ಲಾಲ್ ಭಾಗ್ ಬಳಿ ಯುವಕನ ಮೇಲೆ ಹಲ್ಲೆ ಪ್ರಕರಣ: ಅಪ್ರಾಪ್ತ ವಯಸ್ಕ ಸೇರಿ ಮೂವರ ಬಂಧನ

Spread the love

ಲಾಲ್ ಭಾಗ್ ಬಳಿ ಯುವಕನ ಮೇಲೆ ಹಲ್ಲೆ ಪ್ರಕರಣ: ಅಪ್ರಾಪ್ತ ವಯಸ್ಕ ಸೇರಿ ಮೂವರ ಬಂಧನ

ಮಂಗಳೂರು: ನಗರದ ಲಾಲ್ ಭಾಗ್ ಬಳಿ ಫೆ.7ರಂದು ರಾತ್ರಿ ತಂಡವೊಂದು ಯುವಕನ ಮೇಲೆ ಮಾರಕಾಯುಧದಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕುದ್ರೋಳಿ ನಿವಾಸಿಗಳಾದ ಮೊಹಮ್ಮದ್ ಫಾಯಿಕ್ (18 ವ), ಮೊಹಮ್ಮದ್ ಶಾಹಿಲ್ (19 ವ) ಮತ್ತು ಇನ್ನೋರ್ವ ಅಪ್ರಾಪ್ತ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಫೆ.7ರಂದು ರಾತ್ರಿ 9.20 ಗಂಟೆ ಸುಮಾರಿಗೆ ದೀಪಕ್ ಕುಮಾರ್ ಎಂಬವರಿಗೆ ಲಾಲ್ ಬಾಗ್ ಬಳಿ ಮೂರು ಜನ ಅಪರಿಚಿತರು ದ್ವಿ ಚಕ್ರ ವಾಹನದಲ್ಲಿ ಬಂದು ಹಲ್ಲೆ ನಡೆಸಿದ್ದರು. ಎಡಕೈಯ ಮುಂಗೈಗೆ ಮಾರಕಾಯುಧದಿಂದ ಇರಿದು ಗಾಯಗೊಳಿಸಿದ್ದರು.

ಈ ಬಗ್ಗೆ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


Spread the love