ಲಿಂಬೆ ಹಣ್ಣಿನ ವಾಹನದಲ್ಲಿ ಗಾಂಜಾ ಸಾಗಾಟ – ಇಬ್ಬರ ಬಂಧನ

Spread the love

ಲಿಂಬೆ ಹಣ್ಣಿನ ವಾಹನದಲ್ಲಿ ಗಾಂಜಾ ಸಾಗಾಟ – ಇಬ್ಬರ ಬಂಧನ

ಮಂಗಳೂರು: ಲಿಂಬೆ ಹಣ್ಣಿನ ವಾಹನದಲ್ಲಿ ಟ್ರೇಗಳ ನಡುವೆ ಗಾಂಜಾ ಸಾಗಾಟ ಮಾಡುತ್ತಿದ್ದ ಕೇರಳ ಮೂಲದ ಇಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕಾಸರಗೋಡಿನ ಕಂಬಲ್ಲೂರಿನ ಶಿಹಾಬುದ್ದೀನ್‌ ವಿವಿ(32) ಮತ್ತು ಲತೀಫ್‌ (38) ಎಂದು ಗುರುತಿಸಲಾಗಿದೆ.

ಜುಲೈ 2ರಂದು ಉರ್ವಾ ಠಾಣೆಯ ಇನ್ಸ್‌ ಪೆಕ್ಟರ್‌ ಜ್ಯೋತಿರ್ಲಿಂ ಹೊನಕಟ್ಟೆಯವರು ಕೊಟ್ಟಾರ ಚೌಕಿ ಬಳಿ ವಾಹನ ದಲ್ಲಿ ಈ ಮಾದಕ ವಸ್ತುಗಳು ಪತ್ತೆಯಾಗಿದೆ. ಪ್ಲಾಸ್ಟಿಕ್‌ ಟ್ರೇಗಳಲ್ಲಿ ಲಿಂಬೆ ಹಣ್ಣೂ ತುಂಬಿ ಅದರ ಮಧ್ಯೆ ತಲಾ ಎರಡು ಕೆಜಿ ತೂಕ ಚೀಲಗಳಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದರು.

ತಲಾ ಎರಡು ಕೆಜಿ ತೂಕದ ೨೦ ಗಾಂಜಾ ಚೀಲಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣಕ್ಕೆ ಬಳಸಿದ ಬೊಲೆರೋ ವಾಹನ ಸೇರಿ 11,17,000 ರೂ ಮೊತ್ತದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


Spread the love