ಲೂಟಿಗಿಂತ ಗಾಳ ಹಾಕುವ ವೃತ್ತಿ ಲೇಸು: ಡಿಕೆಶಿ ಗೆ ಪ್ರಮೋದ್ ಮಧ‍್ವರಾಜ್ ತಿರುಗೇಟು

Spread the love

ಲೂಟಿಗಿಂತ ಗಾಳ ಹಾಕುವ ವೃತ್ತಿ ಲೇಸು: ಡಿಕೆಶಿ ಗೆ ಪ್ರಮೋದ್ ಮಧ‍್ವರಾಜ್ ತಿರುಗೇಟು

ಉಡುಪಿ: ಕೋಟ್ಯಾಂತರ ರೂ ಲೂಟಿ ಹೊಡೆದು ಸಾಮ್ರಾಜ್ಯವನ್ನು ಬೆಳೆಸುವುದಕ್ಕಿಂತ ಪ್ರಾಮಾಣಿಕವಾಗಿ ಗಾಳ ಹಾಕಿ ಮೀನು ಹಿಡಿಯುವ ಕಾಯಕವೇ ಲೇಸು ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ಅವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೆ ತಿರುಗೇಟು ನೀಡಿದ್ದಾರೆ.

ಡಿಕೆ ಶಿವಕುಮಾರ್ ಅವರು ಭಾನುವಾರ ಬೈಂದೂರಿನಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ, ಬಿಜೆಪಿ ಸೇರಿರುವ ಪ್ರಮೋದ್ ಇನ್ನೂ ಗಾಳ ಹಾಕಿ ಮೀನು ಹಿಡಿಯಲಿ ಎಂದು ಲೇವಡಿ ಮಾಡಿದ್ದರು. ಅವರ ಈ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿದ್ದು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಮೋದ್, ಡಿಕೆ ಶಿವಕುಮಾರ್ 1979ರಲ್ಲಿ ರಾಜಕೀಯಕ್ಕೆ ಬಂದಾಗಿನಿಂದ ನೋಡಿದ್ದೇನೆ ಆಗ ಅವರ ಆರ್ಥಿಕ ಪರಿಸ್ಥಿತಿ ಹೇಗಿತ್ತು ಈಗ ಹೇಗಾಗಿದೆ ಎಂದು ನನಗೆ ಗೊತ್ತು ಎಂದರು.

ಬಿಜೆಪಿಯಲ್ಲಿ ಭವಿಷ್ಯದ ಬಗ್ಗೆ ಪ್ರಶ್ನಿಸಿದಾಗ ಪಕ್ಷ ತನ್ನನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು ಪಕ್ಷಕ್ಕೆ ಚೆನ್ನಾಗಿ ಗೊತ್ತಿದೆ ಇದೇನು ಕೊನೆಯ ವಿಧಾನಸಭಾ ಚುನಾವಣೆಯಲ್ಲ ಮುಂದೆಯೂ ಚುನಾವಣೆಗಳು ಬರುತ್ತದೆಯಲ್ಲ ಎಂದು ಉತ್ತರಿಸಿದರು.


Spread the love