ಲೇಖಕ ಡಾ. ರಾಹುಲ್ ರಾಮಗುಂಡಮ್ ಅವರ  ಪುಸ್ತಕ ವಾಚನಗೋಷ್ಠಿ

Spread the love

ಲೇಖಕ ಡಾ. ರಾಹುಲ್ ರಾಮಗುಂಡಮ್ ಅವರ  ಪುಸ್ತಕ ವಾಚನಗೋಷ್ಠಿ

ಮಂಗಳೂರು: ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ & ಕಲ್ಚರಲ್ ಹೆರಿಟೇಜ್ (ಇಂಟಾಚ್) ನ ಮಂಗಳೂರು ಅಧ್ಯಾಯ ಆರ್ಟ್ ಕೆÀನರಾ ಟ್ರಸ್ಟ್ ಸಹಯೋಗದಲ್ಲಿ ‘ದಿ ಲೈಫ್ ಅಂಡ್ ಟೈಮ್ಸ್ ಆಫ್ ಜಾರ್ಜ್ ಫನಾರ್ಂಡಿಸ್’ ಕೃತಿಯ ಲೇಖಕ ಡಾ. ರಾಹುಲ್ ರಾಮಗುಂಡಮ್ ಅವರಿಂದ ಪುಸ್ತಕ ವಾಚನಗೋಷ್ಠಿಯನ್ನು ಶನಿವಾರ, ಆಗಸ್ಟ್ 27, 2022 ರಂದು ಬೆಳಿಗ್ಗೆ 11:00 ಗಂಟೆಗೆ ನಗರದ ಬಲ್ಲಾಳ್ ಭಾಗ್ ನ ಕೊಡಿಯಲ್ ಗುತ್ತು ಕಲೆ ಮತ್ತು ಸಂಸ್ಕøತಿ ಕೇಂದ್ರದಲ್ಲಿ ಆಯೋಜಿಸಿತು. ಈ ಪುಸ್ತಕವು ಮಂಗಳೂರಿನಲ್ಲಿ ಜನಿಸಿದ ಕಾರ್ಮಿಕ ನಾಯಕ ಮತ್ತು ಮಾಜಿ ಕೇಂದ್ರ ರೈಲ್ವೆ ಮತ್ತು ರಕ್ಷಣಾ ಸಚಿವ ಜಾರ್ಜ್ ಫೆನಾರ್ಂಡಿಸ್ ಅವರ ಮರಣೋತ್ತರ ಜೀವನಚರಿತ್ರೆಯಾಗಿದೆ. ಶುಕ್ರವಾರ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಔಪಚಾರಿಕವಾಗಿ ಬಿಡುಗಡೆ ಮಾಡಲಾಗಿತ್ತು.

ಡಾ. ರಾಹುಲ್ ರಾಮಗುಂಡಮ್ ಅವರು ಮಂಗಳೂರಿನಿಂದ ಬಾಂಬೆ ತಲುಪಿದ ನಾಯಕ, ತುರ್ತು ಪರಿಸ್ಥಿತಿಯ ಹಿಂದಿನ ದಿನಗಳು, ಇಂಡೋ-ಚೀನಾ ಯುದ್ಧದ ಸಮಯ, ಇಂದಿರಾ ಗಾಂಧಿಯವರ ಸರ್ವಾಧಿಕಾರಕ್ಕೆ ಪ್ರತಿರೋಧ ಮತ್ತು ತುರ್ತು ಪರಿಸ್ಥಿತಿಯ ಸಮಯದಲ್ಲಿ ಭೂಗತ ಚಳುವಳಿಯಲ್ಲಿ ಮಹಿಳೆಯರು ಯಂಥ ಶೀರ್ಷಿಕೆಯಡಿಯಲ್ಲಿರುವ ಕೆಲವು ಅಧ್ಯಾಯಗಳನ್ನು ಓದಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ.ರಾಮಗುಂಡಮ್ ಅವರು ಸ್ವಾತಂತ್ರ್ಯಾನಂತರದ ಅವಧಿಯಲ್ಲಿ ಜಾರ್ಜ್ ಫನಾರ್ಂಡಿಸ್ ಅವರು ತೋರಿದ ಅಸಾಧಾರಣ ಧೈರ್ಯ ಮತ್ತು ದೃಢವಿಶ್ವಾಸದಿಂದ ಪ್ರೇರಿತನಾಗಿ ಅವರ ಬಗ್ಗೆ ಬರೆಯಲು ಆಯ್ಕೆ ಮಾಡಿಕೊಂಡಿದ್ದೆ ಎಂದು ಹೇಳಿದರು. “ಜಾರ್ಜ್ ಫೆನಾರ್ಂಡಿಸ್ ಅವರು ತಮ್ಮ 19ನೇ ವಯಸ್ಸಿನಲ್ಲಿ ರಾಜಕೀಯ ಗುರಿಯೊಂದಿಗೆ ತಮ್ಮ ಹುಟ್ಟೂರಾದ ಮಂಗಳೂರು ತೊರೆದರು. ಅವರು 25ನೇ ವಯಸ್ಸಿಗೆ ಪ್ರಮುಖ ಕಾರ್ಯಕರ್ತರಾದರು ಮತ್ತು ಮೊದಲ ಸಂಸ್ಥೆಯಾದ ಮುನ್ಸಿಪಲ್ ಮಜ್ದೂರ್ ಯೂನಿಯನ್ ಸ್ಥಾಪಿಸಿದರು. ಅವರು ಪ್ರಜಾಪ್ರಭುತ್ವದ ಘನತೆಗಾಗಿ ಹೋರಾಡಿದರು,” ಎಂದು ವಿವರಿಸಿದರು.

ಪುಸ್ತಕದ ಬಗ್ಗೆ ವಿವರಿಸಿದ ಲೇಖಕರು, ಇದು 12 ವರ್ಷಗಳ ಕಠಿಣ ಸಂಶೋಧನೆಯ ಫಲಿತಾಂಶವಾಗಿದೆ ಎಂದು ಹೇಳಿದರು. ಅವರು ಒಂದು ಲಕ್ಷಕ್ಕೂ ಹೆಚ್ಚು ದಾಖಲೆಗಳನ್ನು ಉಲ್ಲೇಖಿಸಿ, ಫೈರ್‍ಬ್ರಾಂಡ್ ನಾಯಕನೊಂದಿಗೆ ನಿಕಟ ಸಂಬಂಧ ಹೊಂದಿರುವ 150ಕ್ಕೂ ಹೆಚ್ಚು ಜನರನ್ನು ಸಂದರ್ಶಿಸಿದ್ದರು. ಅವರು 2019ರಲ್ಲಿ ನಿಧನರಾಗುವ ಮೊದಲು ಜಾರ್ಜ್ ಫನಾರ್ಂಡಿಸ್ ಅವರನ್ನು ಖುದ್ದಾಗಿ ಭೇಟಿಯಾಗಲು ಸಾಧ್ಯವಾದರೂ, ದುರದೃಷ್ಟವಶಾತ್, ಅವರು ಯಾವುದೇ ಅರ್ಥಪೂರ್ಣ ಚರ್ಚೆಯನ್ನು ನಡೆಸಲು ತುಂಬಾ ಅಸ್ವಸ್ಥರಾಗಿದ್ದರು.

ತಮ್ಮ ಪುಸ್ತಕವನ್ನು ‘ಕತ್ತಲೆಮಯ’ ಎಂದು ಬಣ್ಣಿಸಿದ ಅವರು, ಇದು ಭಾರತದ ರಾಜಕೀಯದ ಒಳಹೊಕ್ಕುಗಳನ್ನು ಬಹಿರಂಗಪಡಿಸುತ್ತದೆ ಎಂದು ಹೇಳಿದರು. ಜಾರ್ಜ್ ಫನಾರ್ಂಡಿಸ್ ಅವರ ಜೀವನವು ಯುವಕರಿಗೆ ಸ್ಫೂರ್ತಿಯಾಗಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದರು. ಪುಸ್ತಕವು ಅವರ ವೈಯಕ್ತಿಕ ಜೀವನದಲ್ಲಿ ಇದುವರೆಗೆ ತಿಳಿದಿಲ್ಲದ ಮತ್ತು ಕೇಳಿರದ ಕಥೆಗಳ ಇಣುಕುನೋಟವನ್ನು ನೀಡುತ್ತದೆ.

ಇಂಟಾಚ್ ಮಂಗಳೂರು ಘಟಕದ ಸಂಚಾಲಕ ಸುಭಾμï ಚಂದ್ರ ಬಸು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನೇಮಿರಾಜ್ ಶೆಟ್ಟಿ ವಂದಿಸಿದರು.


Spread the love