ಲೋಕಾಯುಕ್ತರಿಗೆ ನೇರ ಫೋನ್ ಇನ್ ಕಾರ್ಯಕ್ರಮ – ಮೊದಲ ದಿನ 25 ದೂರು ಕರೆಗಳು ಸ್ವೀಕೃತ

Spread the love

ಲೋಕಾಯುಕ್ತರಿಗೆ ನೇರ ಫೋನ್ ಇನ್ ಕಾರ್ಯಕ್ರಮ – ಮೊದಲ ದಿನ 25 ದೂರು ಕರೆಗಳು ಸ್ವೀಕೃತ

ಮಂಗಳೂರು: ಮೊದಲ ದಿನದ ಲೋಕಾಯುಕ್ತ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಒಟ್ಟು 25 ದೂರು ಕರೆಗಳು ಬಂದಿರುವುದಾಗಿ ಲೋಕಾಯುಕ್ತ ಅಧೀಕ್ಷಕರಾದ ಲಕ್ಷ್ಮೀ ಗಣೇಶ‍್ ಕೆ ತಿಳಿಸಿದ್ದಾರೆ.

ಡಿಸೆಂಬರ್ 9 ರಂದು ಬೆಳಿಗ್ಗೆ 11-00 ಗಂಟೆಯಿಂದ 12-00 ಗಂಟೆಯವರೆಗೆ ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಗೆ ಸರಕಾರಿ ಕೆಲಸಗಳಲ್ಲಿ ವಿಳಂಬ, ಲಂಚದ ಬೇಡಿಕೆ ಮತ್ತು ಸಂಬಂಧ ದೂರುಗಳಿಗಾಗಿ “ನೇರ ಫೋನ್ – ಇನ್” ಕಾಠ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ದಿನ ಸದರಿ ಕಾಠ್ಯಕ್ರಮದಲ್ಲಿ ಸಾರ್ವಜನಿಕರು ಮುತುವರ್ಜಿಯಲ್ಲಿ ಭಾಗವಹಿಸಿದ್ದು, ಸಾರ್ವಜನಿಕರಿಂದ 25 ದೂರು ಕರೆಗಳು ಬಂದಿದ್ದು, ದೂರುಗಳಲ್ಲಿ ಪ್ರಮುಖವಾಗಿ ಕಂದಾಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಮೂಡ ಇಲಾಖೆಗೆ ಸಂಬಂಧಿಸಿದ್ದು ಇದ್ದು ದೂರುಗಳ ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.


Spread the love